‘ಬಿಗ್​ಬಾಸ್‌’ಗೆ ಸೋಶಿಯಲ್ ಮೀಡಿಯಾ ಸ್ಟಾರ್ ಎಂಟ್ರಿ – ರಕ್ಷಿತಾ ಶೆಟ್ಟಿ ಮಾತಿಗೆ ಬಿದ್ದು ಬಿದ್ದು ನಕ್ಕ ಕಿಚ್ಚ!

ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್‌ ಸೀಸನ್ – 12 ಇಂದು ಗ್ರ್ಯಾಂಡ್ ಓಪನಿಂಗ್ ಪಡೆಯಲಿದೆ. ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡುವ ಸ್ಪರ್ಧಿಗಳು ಯಾರು ಯಾರು ಎನ್ನುವುದು ವೀಕ್ಷಕರಲ್ಲಿ ಕುತೂಹಲ ಮೂಡಿದೆ. ಈಗಾಗಲೇ ಕಾಕ್ರೋಚ್ ಸುಧಿ, ಮಂಜು ಭಾಷಿಣಿ ಹಾಗೂ ಮಲ್ಲಮ್ಮ ಬಿಗ್​ ಬಾಸ್​ ಕಂಟೆಸ್ಟೆಂಟ್​ಗಳು ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಇನ್ನುಳಿದ ಸ್ಪರ್ಧಿಗಳು ಯಾರ್ಯಾರು ಎನ್ನುವ ಕ್ಯೂರಿಯಾಸಿಟಿ ಬೆನ್ನಲ್ಲೇ ಕಿಚ್ಚ ಸುದೀಪ್​ 4ನೇ ಸ್ಪರ್ಧಿಯನ್ನು ವೇದಿಕೆಗೆ ವೆಲ್​ಕಮ್ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿರುವ ಕರಾವಳಿ ಪ್ರತಿಭೆ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಗೆ ಕಂಟೆಸ್ಟೆಂಟ್ ಆಗಿ ಇದೀಗ ಎಂಟ್ರಿಯಾಗಿದ್ದಾರೆ. ಇದರ ಪ್ರೊಮೋವನ್ನು ಕಲರ್ಸ್​ ಕನ್ನಡ ರಿಲೀಸ್ ಮಾಡಿದೆ.

ವೇದಿಕೆ ಮೇಲೆ ಕಿಚ್ಚ ಸುದೀಪ್ ಅವರು ರಕ್ಷಿತಾ ಶೆಟ್ಟಿ ಅವರನ್ನು ಮಾತನಾಡಿಸಿದ್ದು, ಕರಾವಳಿಯ ರಕ್ಷಿತಾ ಶೆಟ್ಟಿ ಅಡುಗೆ ತುಂಬಾ ಚೆನ್ನಾಗಿ ಮಾಡ್ತಾರೆ ಎಂದಿದ್ದಾರೆ. ಮೀನು ಸಾರಿಗೆ ಸಕ್ಕರೆ ಹಾಕ್ತಾರೆ ಎಂದು ಸುದೀಪ್ ಕೇಳಿದ್ದಕ್ಕೆ ರಕ್ಷಿತಾ ತಲೆ ಅಲ್ಲಾಡಿಸಿದ್ದಾರೆ. ತಾರೈ, ಕೆಂಪು ಮುಂಚಿ, ಹನಿಸಿನಾ ಮೀನು ಸಾರಿಗೆ ಹಾಕ್ತಾರೆ ಎಂದು ರಕ್ಷಿತಾ ಹೇಳಿದ್ದಾರೆ. ನಿಮ್ಮ ಅಡುಗೆ ತಿಂದು ತುಂಬಾ ಚೆನ್ನಾಗಿದೆ ಎಂದು ಹೇಳಿದವರು ಯಾರು ಅಂತ ಸುದೀಪ್ ಕೇಳಿದ್ದಕ್ಕೆ ರಕ್ಷಿತಾ ಯಾರು ಇಲ್ಲ ಎಂದಿದ್ದಾರೆ. ರಕ್ಷಿತಾ ಮಾತಿಗೆ ಸುದೀಪ್ ಬಿದ್ದು ಬಿದ್ದು ನಕ್ಕಿದ್ದಾರೆ.

ಇದನ್ನೂ ಓದಿ : ‘ದಿಲ್ಮಾರ್’ ಸಿನಿಮಾದ ಫಸ್ಟ್ ಸಾಂಗ್ ರಿಲೀಸ್ – ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಥ್!

Btv Kannada
Author: Btv Kannada

Read More