ʻಬಿಗ್ ಬಾಸ್ ಕನ್ನಡ ಸೀಸನ್ 12ʼರ ಗ್ರ್ಯಾಂಡ್ ಓಪನಿಂಗ್‌ಗೆ ಕೌಂಟ್‌ಡೌನ್ ಶುರುವಾಗಿದ್ದು, ಇಂದು ಸಂಜೆ 6ಗಂಟಡೆ ಈಗಾಗಲೇ ಮೂವರು ಸ್ಪರ್ಧಿಗಳ ಹೆಸರು ರಿವೀಲ್ ಆಗಿದೆ. ‘ಕ್ವಾಟ್ಲೆ ಕಿಚನ್’ ಫಿನಾಲೆಯಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 12ರ ಮೂವರು ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲಾಗಿದೆ.
ಮೊದಲ ಸ್ಪರ್ಧಿಯಾಗಿ ಕಾಕ್ರೋಚ್ ಸುಧಿ ಹೆಸರನ್ನು ತೋರಿಸಿದರು. ಕಾಕ್ರೋಚ್ ಸುಧಿ ಅವರು ಸಿನಿಮಾಗಳಲ್ಲಿ ವಿಲನ್ ಪಾತ್ರಗಳ ಮೂಲಕ ಗಮನ ಸೆಳೆದವರು. ಅವರು ‘ಟಗರು’ ಸಿನಿಮಾದಲ್ಲಿ ಕಾಕ್ರೋಚ್ ಪಾತ್ರ ಮಾಡಿದ್ದರು. ಅಂದಿನಿಂದ ಅವರು ಕಾಕ್ರೋಚ್ ಸುಧಿ ಎಂದೇ ಫೇಮಸ್ ಆದರು. ಅವರು ಬಿಗ್ ಬಾಸ್ಗೆ ಬರೋದಿಲ್ಲ ಎನ್ನುತ್ತಲೇ ದೊಡ್ಮನೆಗೆ ಬಂದಿದ್ದಾರೆ ಎಂಬುದು ವಿಶೇಷ.

ಎರಡನೇ ಸ್ಪರ್ಧಿಯಾಗಿ ನಟಿ ಮಂಜು ಭಾಷಿಣಿ ದೊಡ್ಮನೆಗೆ ಎಂಟ್ರಿಯಾಗುತ್ತಿದ್ದಾರೆ. ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್‌ನ ಬಡ್ಡಿ ಬಂಗಾರಮ್ಮ ಪಾತ್ರದ ಮೂಲಕ ಜನಪ್ರಿಯರಾಗಿರುವ ಅವರು, ʻಸಿಲ್ಲಿ ಲಲ್ಲಿʼಯ ಸಮಾಜ ಸೇವಕಿ ಲಲಿತಾಂಬಾ ಪಾತ್ರಕ್ಕಾಗಿ ಇನ್ನೂ ಹೆಚ್ಚು ಪ್ರೀತಿಯನ್ನ ಗಳಿಸಿದ್ದಾರೆ. ʻಕಲರ್ಸ್ ಕನ್ನಡʼ ವಾಹಿನಿಯೂ ಈ ಎಂಟ್ರಿಯನ್ನ ಅಧಿಕೃತವಾಗಿ ಘೋಷಿಸಿದ್ದು, ಪ್ರೇಕ್ಷಕರಲ್ಲಿ ಭಾರೀ ಕುತೂಹಲವನ್ನ ಮೂಡಿಸಿದೆ.

ಮೂರನೇ ಸ್ಪರ್ಧಿಯಾಗಿ ಮಲ್ಲಮ್ಮ ಅವರು ಬರುತ್ತಿದ್ದಾರೆ. ಅವರು ಉತ್ತರ ಕರ್ನಾಟಕದವರು. ಮಾತಿನ ಮಲ್ಲಿ ಮಲ್ಲಮ್ಮ ಎಂದೇ ಫೇಮಸ್. ರೀಲ್ಸ್ ಮಾಡಿಯೂ ಫೇಮಸ್ ಆಗಿದ್ದಾರೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ಸೆಪ್ಟೆಂಬರ್ 28ರಂದು ರಿವೀಲ್ ಆಗಲಿದೆ.

ಇನ್ನು ಉಳಿದ 14 ಅಥವಾ 15 ಸ್ಪರ್ಧಿಗಳ ಹೆಸರು ಇಂದು ರಿವೀಲ್ ಆಗಲಿದೆ. ಸಂಪೂರ್ಣ ಪಟ್ಟಿ ನೋಡಲು ಬಿಗ್ ಬಾಸ್ ಅಭಿಮಾನಿಗಳು ಕಾದಿದ್ದಾರೆ.
ಇದನ್ನೂ ಓದಿ : ತಮಿಳು ನಟ ವಿಜಯ್ ರ‍್ಯಾಲಿಯಲ್ಲಿ ಕಾಲ್ತುಳಿತ – ಮಕ್ಕಳು ಸೇರಿ 33 ಮಂದಿ ಸಾವು!







