ಮಾಯಾನಗರಿ ಮುಂಬೈನಲ್ಲಿ ‘ಟಾಕ್ಸಿಕ್’ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದ ನಟ ಯಶ್ ಅವರು ಮುಂಬೈನಲ್ಲಿ ‘ಟಾಕ್ಸಿಕ್’ ಶೂಟಿಂಗ್ ಮುಗಿಸಿ ಇದೀಗ ಲಂಡನ್ಗೆ ಹಾರಿದ್ದಾರೆ ಎಂದು ತಿಳಿದುಬಂದಿದೆ.

ಟಾಕ್ಸಿಕ್ ಚಿತ್ರದ ಗ್ಲೋಬಲ್ ಪಾರ್ಟನರ್ ಶಿಪ್ ಮಾತುಕತೆಗಾಗಿ ಯಶ್ ಲಂಡನ್ಗೆ ಹೊರಟಿದ್ದಾರೆ. ಚಿತ್ರದಲ್ಲಿ ಹಾಲಿವುಡ್ ಮೇಕರ್ಸ್ ಯಶ್ ಜೊತೆ ಕೆಲಸ ಮಾಡಿದ್ದು, ಚಿತ್ರವನ್ನು ಗ್ಲೋಬಲ್ ಲೆವೆಲ್ನಲ್ಲಿ ರಿಲೀಸ್ ಮಾಡೋ ಸಲುವಾಗಿ ಕನ್ನಡ ಹಾಗೂ ಇಂಗ್ಲೀಷ್ ಎರಡು ಭಾಷೆಗಳಲ್ಲಿ ಏಕಕಾಲಕ್ಕೆ ಶೂಟಿಂಗ್ ಮಾಡಲಾಗಿದೆ.

ಹಾಲಿವುಡ್ ತಂತ್ರಜ್ಞರ ಜೊತೆ ಮಾತುಕತೆ ನಡೆಸಲು ಲಂಡನ್ಗೆ ಹೋಗಿರುವ ಯಶ್, ಟಾಕ್ಸಿಕ್ ಚಿತ್ರದ ಕೊನೆಯ ಹಂತದ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ಮಾಡಲಿದ್ದಾರೆ. ಫೈನಲ್ ಶೂಟಿಂಗ್ ಅನ್ನು ಸಿಲಿಕಾನ್ ಸಿಟಿಯಲ್ಲಿ ಮಾಡಲು ನಿರ್ದೇಶಕಿ ಗೀತು ಮೋಹನ್ ದಾಸ್ ಪ್ಲಾನ್ ಮಾಡಿದ್ದಾರೆ. ಈ ಮೂಲಕ ನಾವು ಬಾಲಿವುಡ್ಗೆ ಹೋಗಲ್ಲ, ಬಾಲಿವುಡ್ನ ಇಲ್ಲಿಗೆ ಕರೆಸ್ತೀನಿ ಅನ್ನೋ ಯಶ್ ಮಾತು ಈಗ ಕನ್ನಡ ಭಾಷೆಯ ಅಭಿಮಾನಕ್ಕೆ ಸಾಕ್ಷಿಯಾಗಿದೆ.

Author: Btv Kannada
Post Views: 276







