ಹಾವೇರಿ : ಮಣ್ಣು ಅಗೆದ ಗುಂಡಿಗೆ ಬಿದ್ದು ಎರಡೂವರೆ ವರ್ಷದ ಮಗು ಸಾವು!

ಹಾವೇರಿ : ಮಣ್ಣು ಅಗೆದ ಗುಂಡಿಗೆ ಬಿದ್ದು ಎರಡೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಚಿಕ್ಕ ಅಣಜಿ ಗ್ರಾಮದಲ್ಲಿ ನಡೆದಿದೆ. ಪೂಜಾ ನಾಗಪ್ಪ ಎರಡೂವರೆ ವರ್ಷದ ಮೃತ ಮಗು.
ಮನೆ ಪಕ್ಕದಲ್ಲಿದ್ದ ಕೆರೆಯಲ್ಲಿ ಮಣ್ಣು ಅಗೆದಿದ್ದರಿಂದ ಗುಂಡಿ ಬಿದ್ದಿತ್ತು. ಮಗು ಆಟವಾಡ್ತ ಕೆರೆ ಬಳಿ ಹೋಗಿ ಮಣ್ಣಿನ ಗುಂಡಿಗೆ ಬಿದ್ದು ಮೃತಪಟ್ಟಿದೆ. ಅಕ್ರಮವಾಗಿ ಮಣ್ಣು ಸಾಗಾಟದಿಂದ ಕೆರೆಯಲ್ಲಿ ಗುಂಡಿ ಬಿದ್ದಿತ್ತು. ಈ ಗುಂಡಿ ಮುಚ್ಚಿಸುವಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಹಿಂದೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರ ಬಳಿಯೂ ಗ್ರಾಮಸ್ಥರು ಕೋರಿದ್ದರು.
ನಾಗಲಕ್ಷ್ಮೀ ಚೌಧರಿ ಅವರು ಅಧಿಕಾರಿಗಳಿಗೆ ಗುಂಡಿ ಮುಚ್ಚುವಂತೆ ಹೇಳಿದ್ದರು. ಆದರೆ ಈವರೆಗೂ ಗುಂಡಿ ಮುಚ್ಚದೆ ನಿರ್ಲಕ್ಷ್ಯ ವಹಿಸಿದ್ದ ಅಧಿಕಾರಿಗಳಿಗೆ ಈಗ ಕಂದಮ್ಮನ ಕುಟುಂಬಸ್ಥರು ಹಿಡಿಶಾಪ ಹಾಕ್ತಿದ್ದಾರೆ.

 

ಇದನ್ನೂ ಓದಿ : ಆಕಸ್ಮಿಕ ಬೆಂಕಿಯಿಂದ ಹೊತ್ತಿ ಉರಿದ ಕಾರು – ಯುವಕ ಸಜೀವ ದಹನ!

Btv Kannada
Author: Btv Kannada

Read More