ಚಾಮರಾಜನಗರದಲ್ಲಿ ಕಬ್ಬಿನ ಲಾರಿಗೆ ಗೂಡ್ಸ್ ಆಟೋ ಡಿಕ್ಕಿ – ಇಬ್ಬರು ಸ್ಥಳದಲ್ಲೇ ಸಾವು!

ಚಾಮರಾಜನಗರ : ಬೆಳ್ಳಂಬೆಳಗ್ಗೆ ಭೀಕರ ಅಪಘಾತಕ್ಕೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಕೊಳ್ಳೇಗಾಲದ ಯಳಂದೂರು ಮಾರ್ಗ ಮಧ್ಯದ ಎಳೆ ಪಿಳ್ಳಾರಿ ದೇವಸ್ಥಾನದ ಬಳಿ ನಡೆದಿದೆ. ಸುಮಂತ್ (22), ನಿತಿನ್ ಕುಮಾರ್ (16) ಸಾವನ್ನಪ್ಪಿದ ದುರ್ದೈವಿಗಳು.

ಕಬ್ಬಿನ ಲಾರಿಗೆ ಗೂಡ್ಸ್ ಆಟೋ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ. ಲಾರಿಗೆ ಟೊಮ್ಯಾಟೊ ತುಂಬಿಕೊಂಡು ಹೋಗುತ್ತಿದ್ದ ಆಟೋ ಡಿಕ್ಕಿ ಹೊಡೆದಿದೆ. ಅಪಘಾತವಾಗುತ್ತಿದ್ದಂತೆ ರಸ್ತೆಗೆ ಟೊಮ್ಯಾಟೊ ಬಾಕ್ಸ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎಳೆಪಿಳ್ಳಾರಿ ಸಮೀಪದ ಜಮೀನಿನಿಂದ ಕಬ್ಬು ತುಂಬಿಸಿಕೊಂಡ ಲಾರಿ ಕಾರ್ಖಾನೆಗೆ ತೆರಳಲು ರಸ್ತೆಯ ಬಳಿ ನಿಂತಿತ್ತು. ಈ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಗೂಡ್ಸ್ ಅಟೋ ಹಿಂಬದಿಂದ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಈ ಸಂಬಂಧ ಯಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಬೆಂಗಳೂರಿಂದ ನಟೋರಿಯಸ್ ರೌಡಿಗಳ ಗಡಿಪಾರಿಗೆ CCB ಪ್ಲಾನ್!

Btv Kannada
Author: Btv Kannada

Read More