ವಕೀಲರ ಆಫೀಸನ್ನೇ ಅಕ್ರಮವಾಗಿ ಸೀಜ್ – ಭಾರತ್ ಕೋ – ಆಪರೇಟಿವ್ ಬ್ಯಾಂಕ್ ಅಧಿಕಾರಿಗಳ ವಿರುದ್ಧ FIR!

ಬೆಂಗಳೂರು : ವಕೀಲರ ಆಫೀಸನ್ನೇ ಕೋ-ಆಪರೇಟಿವ್ ಬ್ಯಾಂಕ್ ಅಕ್ರಮವಾಗಿ ಸೀಜ್ ಮಾಡಿರುವ ಆರೋಪ ಕೇಳಿಬಂದಿದೆ. ಕೋ-ಆಪರೇಟಿವ್ ಕಳ್ಳರು ಪ್ಯಾಲೇಸ್ ರಸ್ತೆಯಲ್ಲಿರುವ ಪ್ರೇಮ್ ಪ್ರಸಾದ್ ಶೆಟ್ಟಿ ಎಂಬ ವಕೀಲರ ಕಚೇರಿ ಸೀಜ್ ಮಾಡಿದ್ದು, ಈ ಸಂಬಂಧ ಕೋ-ಆಪರೇಟಿವ್ ಬ್ಯಾಂಕ್​ನ ಅಧಿಕಾರಿಗಳ ಮೇಲೆ FIR ದಾಖಲಾಗಿದೆ.

ಭಾರತ್ ಕೋ-ಆಪರೇಟಿವ್ ಬ್ಯಾಂಕ್​ನ ಅಧಿಕಾರಿಗಳಾದ ಮುರುಳೀಧರ ಕೋಟ್ಯಾನ್, ಅನುಕುಮಾರ್ ಕೋಟ್ಯಾನ್, ಸಂದೇಶ್, ರವೀಂದ್ರ ಕುಂದರ್, ಇಂಧುಮತಿ ಹಾಗೂ ಕಾಜೋಲ್ ಭಾಟಿಯ ಮೇಲೆ FIR ದಾಖಲಾಗಿದೆ. ವಕೀಲ ಪ್ರೇಮ್ ಕುಮಾರ್ ಶೆಟ್ಟಿಯವರು ಕಚೇರಿಯಿದ್ದ ಸ್ವಂತ ಜಾಗದ ಮೇಲೆ ಮುಂಬೈ ಮೂಲದ ಭಾರತ್ ಕೋ-ಆಪರೇಟಿವ್ ಬ್ಯಾಂಕ್​​ನಿಂದ ಸಾಲವನ್ನೂ ಪಡೆದಿದ್ದರು.

ಕೊರೋನಾ ಟೈಮಲ್ಲಿ ಲೋನ್ EMI ಕಟ್ಟೋಕೆ ವಕೀಲ ಪ್ರೇಮ್ ಪ್ರಸಾದ್​ಗೆ ಕಷ್ಟಆಯ್ತು. ಇತ್ತೀಚೆಗೆ OTS ಒನ್ ಟೈಮ್ ಸೆಟ್ಲ್ ಮೆಂಟ್​ಗೆ ಪ್ರೇಮ್ ಪ್ರಸಾದ್ ಬ್ಯಾಂಕ್ ಬಳಿ ಕೇಳಿದ್ದರು. ಈ ವೇಳೆ ಬ್ಯಾಂಕ್​ನವ್ರೂ ಕೂಡ ಮೇಲ್ ಮೂಲಕ OTSಗೆ ಪರ್ಮಿಷನ್ ಕೊಟ್ಟಿದ್ದರು. 1.6 ಕೋಟಿ ರೂಪಾಯಿಗೆ ಒನ್ ಟೈಮ್ ಸೆಟ್ಲ್ ಮೆಂಟ್ ಕೂಡ ಗ್ರೀನ್ ಸಿಗ್ನಲ್ ಸಿಕ್ಕಿರುತ್ತೆ. ಆದರೆ OTSಗೆ ಪರ್ಮಿಷನ್ ಕೊಟ್ಟ ನಂತರ ಬ್ಯಾಂಕ್ ಕೋ-ಆಪರೇಟಿವ್ ಬ್ಯಾಂಕ್ ಪರ್ಮಿಷನ್ ಕೊಡಲ್ಲ‌ ಎಂದಿದ್ದು, ಶಾಂತಿನಗರದ ಭಾರತ್ ಕೋ-ಆಪರೇಟಿವ್ ಬ್ಯಾಂಕ್​ಗೆ ಡಿಡಿ ನೀಡಲು ಪ್ರೇಮ್ ಪ್ರಸಾದ್ ಅವರು ರೆಡಿ ಮಾಡಿಕೊಂಡಿದ್ದರು. ಆದ್ರೆ, ಭಾರತ್ ಕೋ-ಆಪರೇಟಿವ್ ಕೋರ್ಟ್ ಕಮೀಷನ್ ಸಿಬ್ಬಂದಿ ಕರೆತರದೇ ಕಚೇರಿಯನ್ನು ಸೀಜ್ ಮಾಡಿದೆ.

ನೇರಾನೇರಾ ವಕೀಲರಾದ ಪ್ರೇಮ್ ಪ್ರಸಾದ್ ಪ್ರಾಪರ್ಟಿಯನ್ನು ಬ್ಯಾಂಕ್ ಸೀಜ್ ಮಾಡಿದೆ. ವಕೀಲರ ಕಚೇರಿಯಲ್ಲಿದ್ದ ಬೆಲೆಬಾಳುವ ಎಲೆಕ್ಟ್ರಾನಿಕ್ ವಸ್ತುಗಳು, ಫೈಲ್ಸ್, ದಾಖಲೆಗಳು ಹಾಗೂ ಇನ್ನಿತರ ವಸ್ತುಗಳನ್ನ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಸಿಬ್ಬಂದಿ ಕದ್ದೊಯ್ದಿದ್ದರು. ನಂತರ ಅದೇ ಪ್ರಾಪರ್ಟಿಯನ್ನು ಭಾರತ್ ಕೋ-ಆಪರೇಟಿವ್ ಬ್ಯಾಂಕ್ 90 ಲಕ್ಷಕ್ಕೆ ಹರಾಜು ಮಾಡಿದ್ದಾರೆ.

ಭಾರತ್ ಕೋ-ಆಪರೇಟಿವ್ ಬ್ಯಾಂಕ್​ನ ಅಧಿಕಾರಿಗಳು ಡಿಫಾಲ್ಟರ್​ಗಳನ್ನ ಟಾರ್ಗೆಟ್ ಮಾಡಿ ಪ್ರಾಪರ್ಟಿಗಳನ್ನ ಕಬ್ಜಾ ಮಾಡಿದ್ದಾರೆ. ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಮುಂಬೈ, ಬೆಂಗಳೂರು ಸೇರಿ 60ಕ್ಕೂ ಹೆಚ್ಚು ಬ್ರ್ಯಾಂಚ್ ಹೊಂದಿದ್ದು, ಡಿಫಾಲ್ಟರ್​ಗಳ ಆಸ್ತಿಪಾಸ್ತಿ ಕಿತ್ತು ತಾವೇ ಡೀಲ್‌ ಮಾಡ್ತಿದೆ. ಹಾಗಾಗಿ RBI ರೂಲ್ಸ್ ಆ್ಯಂಡ್ ರೆಗ್ಯಲೇಷನ್ ಗಾಳಿಗೆ ತೂರೋ ಇಂತಹ ಬ್ಯಾಂಕ್​ಗಳನ್ನ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು. ಆಡಿಟಿಂಗ್ ರಿಪೋರ್ಟ್ ಜೊತೆ ಠೇವಣಿದಾರರ ದೂರನ್ನು ಪರಿಗಣಿಸಿ ಈ ಕೂಡ್ಲೇ ತನಿಖೆ ನಡೆಸಿ. ಕೆಪಿಐಡಿ ಆ್ಯಕ್ಟ್ ಅಡಿಯಲ್ಲೂ ಪ್ರಕರಣ ದಾಖಲಿಸಿ ಇಂತಹ ಬ್ಯಾಂಕ್ ಗಳಿಗೆ ಬೀಗ ಜಡಿಬೇಕು ಎಂದು ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಸಿಬ್ಬಂದಿ ನಡೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ : ವಕ್ಫ್‌ ತಿದ್ದುಪಡಿ ಕಾಯ್ದೆಯ ಕೆಲ ನಿಬಂಧನೆಗಳಿಗೆ ಸುಪ್ರೀಂ ಕೋರ್ಟ್ ತಡೆ!

Btv Kannada
Author: Btv Kannada

Read More