ಬೆಂಗಳೂರಿಗರೇ ಗಮನಿಸಿ​.. ಇಂದಿನಿಂದ 3 ದಿನ ಕಾವೇರಿ ನೀರು ಬರಲ್ಲ – ಜಲಮಂಡಳಿ ಮಾಹಿತಿ!

ಬೆಂಗಳೂರು : ಇಂದಿನಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ. ಕಾವೇರಿ ನೀರು ಸರಬರಾಜು ಮಾಡುವ ಪಂಪಿಂಗ್ ಸ್ಟೇಷನ್​ನಲ್ಲಿ ಕಾಮಗಾರಿ ನಡೆಯಲಿರುವ ಹಿನ್ನೆಲೆ ಸೆಪ್ಟೆಂಬರ್ 17ರವರೆಗೆ, ಅಂದರೆ ಇಂದಿನಿಂದ 3 ದಿನ ಬೆಂಗಳೂರಿನ ಹಲವೆಡೆ ಕಾವೇರಿ ನೀರಿನ ಸರಬರಾಜಾಗುವುದಿಲ್ಲ. ಕಾವೇರಿ 5ನೇ ಹಂತದ ನಿರ್ವಹಣೆಗಾಗಿ ಕಾವೇರಿ ನೀರು ಬಂದ್ ಆಗಲಿದ್ದು, ಹೀಗಾಗಿ ಜನರು ಇಂದೇ ಮೂರು ದಿನಗಳಿಗೆ ಆಗುವಷ್ಟು ನೀರನ್ನ ಸಂಗ್ರಹಿಸಿ ಇಟ್ಟುಕೊಳ್ಳುವಂತೆ ಬೆಂಗಳೂರು ಜಲಮಂಡಳಿ ಸಲಹೆ ನೀಡಿದೆ.

ನೀರು ಪೂರೈಕೆ ಸ್ಥಗಿತದ ಸಮಯ : ಕಾವೇರಿ 5ನೇ ಹಂತದ ಪಂಪಿಂಗ್ ಸ್ಟೇಷನ್​ನಿಂದ ನೀರು ಪೂರೈಕೆ ಬಂದ್ ಆಗಲಿದ್ದು, ಇಂದು ಮಧ್ಯರಾತ್ರಿ 1ರಿಂದ ಸೆ.17ರ ಮಧ್ಯಾಹ್ನ 1 ಗಂಟೆವರೆಗೆ ಕಾವೇರಿ 5ನೇ ಹಂತದಲ್ಲಿ 60 ಗಂಟೆ ಕಾವೇರಿ ನೀರು ಪೂರೈಕೆ ಸ್ಥಗಿತವಾಗಲಿದೆ. ಕಾವೇರಿ 1, 2, 3, 4ನೇ ಹಂತದಲಲ್ಲಿಯೂ 24 ಗಂಟೆ ನೀರು ಪೂರೈಕೆ ಸ್ಥಗಿತವಾಗಲಿದ್ದು, ಅಗತ್ಯ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳುವಂತೆ ಜಲಮಂಡಳಿ ಮನವಿ ಮಾಡಿದೆ.

ದಿಢೀರ್ ಆಗಿ 3 ದಿನ ಕಾವೇರಿ ನೀರು ಬಂದ್ ಮಾಡುತ್ತಿರುವುದಕ್ಕೆ ಹಲವೆಡೆ ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ. ಮೂರು ದಿನ ನಗರವಾಸಿಗಳಿಗೆ ನೀರಿನ ಅಭಾವ ಎದುರಾಗಲಿದೆ. ಇದನ್ನೇ ವಾಟರ್ ಟ್ಯಾಂಕ್​ನನವರು ಅಸ್ತ್ರವಾಗಿಸಿಕೊಂಡು, ಡಬಲ್ ವಸೂಲಿ ಮಾಡುವ ಭೀತಿಯೂ ಜನರನ್ನು ಕಾಡುತ್ತಿದೆ.

ಇದನ್ನೂ ಓದಿ : ಪಾಕಿಸ್ತಾನವನ್ನು ಬಗ್ಗು ಬಡಿದ ಭಾರತ.. ಸೂರ್ಯ ಪಡೆಗೆ 7 ವಿಕೆಟ್​​ಗಳ ಭರ್ಜರಿ ಜಯ!

Btv Kannada
Author: Btv Kannada

Read More