ಬೆಂಗಳೂರು : ಖತರ್ನಾಕ್ ದಂಪತಿ ಮಗನಿಗೆ ನಿಶ್ಚಿತಾರ್ಥ ಮಾಡಿಸಿ ಹಣ ಪಡೆದು ವಂಚನೆ ಮಾಡಿರುವ ಘಟನೆ ಬೆಂಗಳೂರಿನ ಸುದ್ದುಗುಂಟೆಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹುಮೇರಾ ಬಾನು ಮತ್ತು ಈಕೆ 2ನೇ ಗಂಡ ಅಕ್ಬರ್ ಪಾಷಾ ವಿರುದ್ಧ ಸ್ವಂತ ಮಗನನ್ನೇ ಬಳಸಿಕೊಂಡು ಮ್ಯಾರೇಜ್ ದೋಖಾ ಬ್ಯುಸಿನೆಸ್ ನಡೆಸಿರುವ ಆರೋಪ ಕೇಳಿಬಂದಿದೆ.

ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿ ಹುಮೇರಾ ಬಾನು & ಅಕ್ಬರ್ ಪಾಷಾ ತನ್ನ ಮಗ ಯಾಸೀನ್ ಪಾಷಾನನ್ನು ಬಳಸಿಕೊಂಡು ಲಕ್ಷ ಲಕ್ಷ ಹಣ ಪಡೆದು ವಂಚಿಸಿದ್ದಾರೆ. ಹುಮೇರಾ ಬಾನು ತನ್ನ ಮಗನಿಗೆ ಹೆದರಿಸಿ ಎಂಗೇಜ್ಮೆಂಟ್ ಮಾಡಿರೋ ಆರೋಪವಿದೆ. 2ನೇ ಗಂಡನಾಗಿ ಅಕ್ಬರ್ ಮದುವೆ ಬಳಿಕ ಹುಮೇರಾ ಬಾನು ಮ್ಯಾರೇಜ್ ಬ್ಯುಸಿನೆಸ್ಗೆ ಕೈ ಹಾಕ್ತಾರೆ. ಮುಂಬೈನಲ್ಲಿ ಒಬ್ಬ ಯುವತಿ, ಬನಶಂಕರಿಯಲ್ಲಿ ಒಬ್ಬ ಯುವತಿ ಜೊತೆ ನಿಶ್ಚಿತಾರ್ಥ ಮಾಡಿದ್ದು, ಇದೇ ರೀತಿ ಹಲವು ಕಡೆ ಖತರ್ನಾಕ್ ದಂಪತಿ ನಿಶ್ಚಿತಾರ್ಥ ಮಾಡಿ ವಂಚಿಸಿರುವ ಆರೋಪ ಕೇಳಿಬಂದಿದೆ.

ಖತರ್ನಾಕ್ ದಂಪತಿ ಬರೋಬ್ಬರಿ 3 ಲಕ್ಷದಿಂದ 5 ಲಕ್ಷ ಹಣ ಪಡೆದು ವಂಚಿಸಿದ್ದಾರೆ. ಪೋಷಕರ ವಿರೋಧ ಮಧ್ಯೆ ಯಾಸೀನ್-ಶಾಸೀಯಾ ಮೈಸೂರಲ್ಲಿ ಮದುವೆಯಾಗಿದ್ದಕ್ಕೆ ಪೋಷಕರು ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಸೊಸೆ ಶಾಸೀಯಾಗೆ ಮಾವ ಅಕ್ಬರ್ ಜೊತೆ ಮಲಗುವಂತೆ ಅತ್ತೆ ಕಿರುಕುಳ ನೀಡಿದ್ದು, ಈ ಸಂಬಂಧ ಯಾಸೀನ್ ಪಾಷ ಹಾಗೂ ಪತ್ನಿ ಶಾಸೀಯಾ ದೂರು ಸಲ್ಲಿಕೆ ಮಾಡಿದ್ದಾರೆ.

ತನ್ನ ತಾಯಿ ಹುಮೇರಾ, ಮಲತಂದೆ ಅಕ್ಬರ್ ವಿರುದ್ಧ ಯಾಸೀನ್ ದೂರು ನೀಡಿದ್ದು, ತಮಗೆ ಇಷ್ಟವಿಲ್ಲದೇ ಮದುವೆಯಾಗಿದ್ದಕ್ಕೆ ಮಗ ಯಾಸೀನ್ ಪಾಷಗೆ ಕಿರುಕುಳ ನೀಡಿರುವ ಆರೋಪವಿದೆ. ಈ ಬಗ್ಗೆ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, FIR ದಾಖಲಿಸಿ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇನ್ನು ಮಾನಸಿಕ ಕಿರುಕುಳ ಹಿನ್ನಲೆ ಶಾಸೀಯಾ ದಂಪತಿ ಕಮಿಷನರ್ಗೂ ದೂರು ನೀಡಿದ್ದು, ನಮ್ಮ ಜೀವಕ್ಕೆ ಭಯ ಇದೆ ಎಂದು ಕಮಿಷನರ್ ಸೀಮಂತ್ ಕುಮಾರ್ ಸಿಂಗ್ಗೆ ದೂರು ಸಲ್ಲಿಕೆ ಮಾಡಿದ್ದಾರೆ.


ಇದನ್ನೂ ಓದಿ : ಇಂದು ಭಾರತ – ಪಾಕ್ ನಡುವೆ ಹೈವೋಲ್ಟೇಜ್ ಕದನ – ಪಂದ್ಯಕ್ಕೆ ದೇಶಾದ್ಯಂತ ಭಾರೀ ಆಕ್ರೋಶ!







