ಬೆಂಗಳೂರು : ಅಕ್ರಮ, ಆನ್‌ಲೈನ್ ಬೆಟ್ಟಿಂಗ್ ಆರೋಪದ ಮೇಲೆ ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿ, ₹100 ಕೋಟಿಗೂ ಹೆಚ್ಚು ಅಕ್ರಮ ಆಸ್ತಿಯನ್ನು ಜಪ್ತಿ ಮಾಡಿದೆ. ಇದೀಗ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಕಾಂಗ್ರೆಸ್ನಿಂದ ವಜಾ ಯಾವಾಗ ಎಂದು ಟೀಕಿಸಿದೆ.

ಈ ಬಗ್ಗೆ ಬಿಜೆಪಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಅಕ್ರಮ ಆನ್‌ಲೈನ್ ಬೆಟ್ಟಿಂಗ್ ದಂಧೆ, ಮನಿ ಲ್ಯಾಂಡ್ರಿಂಗ್ ನಿಂದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಅಲಿಯಾಸ್ ಪಪ್ಪಿ ಸಂಪಾದಿಸಿದ ₹100 ಕೋಟಿಗೂ ಹೆಚ್ಚು ಅಕ್ರಮ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಅಕ್ರಮ ಆನ್‌ಲೈನ್ ಬೆಟ್ಟಿಂಗ್ ದಂಧೆಯಿಂದ ಬಡವರ ಬದುಕನ್ನು ಹಾಳು ಮಾಡಿದ ಈ ಪಪ್ಪಿಯನ್ನು ಕಾಂಗ್ರೆಸ್ ಏಕೆ ಇದುವರೆಗೂ ಪಕ್ಷದಿಂದ ಉಚ್ಛಾಟಿಸಿಲ್ಲ? ಪಪ್ಪಿ ನಡೆಸುತ್ತಿದ್ದ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ದಂಧೆಯಲ್ಲಿ ಕಾಂಗ್ರೆಸ್ಸಿಗೂ ಒಂದು ಪಾಲಿತ್ತೇ? ಎಂದು ಪ್ರಶ್ನಿಸಿದೆ.
ಅಷ್ಟೇ ಅಲ್ಲದೆ ಬಿಜೆಪಿ ಹಾಸ್ಯಾಸ್ಪದ ಪೋಸ್ಟರ್ ಹಂಚಿಕೊಂಡಿದ್ದು, ಬೆಟ್ಟಿಂಗ್ನಿಂದ ಬಂಗಾರದ ಮನುಷ್ಯನಾದ ಪಪ್ಪಿ ಎಂದು ಕಾಲೆಳೆದಿದೆ. ಇನ್ನು ಕಾಂಗ್ರೆಸ್ನಿಂದ ಬೆಟ್ಟಿಂಗ್ ಪಪ್ಪಿಯ ವಜಾ ಯಾವಾಗ? ಎಂದು ಕಾಂಗ್ರೆಸ್ ನಾಯಕರಿಗೆ ಪ್ರಶ್ನೆಗಳ ಸುರಿಮಳೆ ಹರಿಸಿದೆ.
ಇದನ್ನೂ ಓದಿ : ಕಲ್ಲು ತೂರಾಟ ಕೇಸ್ - ಕರ್ತವ್ಯ ಲೋಪದಡಿ ಮದ್ದೂರು ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ಸಸ್ಪೆಂಡ್!







