ಬೆಂಗಳೂರು : ಯಲಹಂಕ ಉಪನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ವಿದೇಶಿ ಪ್ರಜೆಗಳಿಂದ 70 ಲಕ್ಷ ಮೌಲ್ಯದ 700 ಗ್ರಾಂ MDMA ಸೀಜ್ ಮಾಡಿದ್ದಾರೆ.

ಯಲಹಂಕದ ದೊಡ್ಡಬೆಟ್ಟಹಳ್ಳಿ ಗ್ರಾಮದ ಮನೆಯಲ್ಲಿದ್ದ ಡ್ರಗ್ಸ್ನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಡ್ರಗ್ಸ್ ಶೇಖರಿಸಿಟ್ಟಿದ್ದ ಇಬ್ಬರು ಘಾನಾ ದೇಶದ ಪ್ರಜೆಗಳನ್ನು ಅರೆಸ್ಟ್ ಮಾಡಿದ್ದಾರೆ. ಅಡ್ಮ್ಮಾಕೊ ಬ್ರೈಟ್ ಮತ್ತು ಎನ್ಕೇಟೈ ಕೋಫಿ ಎಂಬುವರ ಬಂಧಿತ ಆರೋಪಿಗಳು.

ಆರೋಪಿಗಳ ಮಾಹಿತಿ ಆಧರಿಸಿ ಪೊಲೀಸರು ನಗರದ 7 ಕಡೆ ದಾಳಿ ನಡೆಸಿದ್ದು, ಈ ವೇಳೆ ಪಾಸ್ಪೋರ್ಟ್ ಅವಧಿ ಮೀರಿ ವಾಸ ಮಾಡ್ತಿದ್ದ 9 ವಿದೇಶಿಗರನ್ನು ಬಂಧಿಸಿದ್ದಾರೆ. ಇದೇ ವೇಳೆ ಇಬ್ಬರು ಮಹಿಳಾ ವಿದೇಶಿಗಳ ಮನೆಯಲ್ಲೂ ಡ್ರಗ್ಸ್ ಪತ್ತೆಯಾಗಿದ್ದು, ಸುಮಾರು 800 ಗ್ರಾಂ. ವಿವಿಧ ಮಾದರಿ ಡ್ರಗ್ಸ್ ಸೀಜ್ ಮಾಡಲಾಗಿದೆ. ಬೆನೆಡಿಕ್ಟ್ ಮತ್ತು ಪ್ರಿಸ್ಕಿಲ್ ಎಂಬ ಬಂಧಿತ ಮಹಿಳೆಯರು.

Author: Btv Kannada
Post Views: 283







