ನವದೆಹಲಿ : ಪ್ರಧಾನಿ ಮೋದಿ ಇತ್ತೀಚೆಗೆ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ದೇಶದ ಜನತೆಗೆ ದೀಪಾವಳಿ ಸಂದರ್ಭದಲ್ಲಿ ಗುಡ್ ನ್ಯೂಸ್ ನೀಡುವುದಾಗಿ ಘೋಷಿಸಿದ್ದರು. ಇದೀಗ ಭಾರತ ಸರ್ಕಾರ ಕೊನೆಗೂ ಜಿಎಸ್‌ಟಿ ವ್ಯವಸ್ಥೆಯಲ್ಲಿ ಬಿಗ್ ಅಪ್ಡೇಟ್ ಕೊಟ್ಟಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ದೇಶದ ಜನತೆಗೆ ಸಿಹಿ ಸುದ್ದಿ ನೀಡಿದ್ದಾರೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆಯುತ್ತಿರುವ 56ನೇ ಜಿಎಸ್‌ಟಿ ಕೌನ್ಸಿಲ್ ಮೀಟಿಂಗ್ನಲ್ಲಿ ಜಿಎಸ್‌ಟಿಗೆ ಸಂಬಂಧಿಸಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಪ್ರಸ್ತುತ, ನಾಲ್ಕು GST ಸ್ಲ್ಯಾಬ್‌ಗಳಿದ್ದು, ಶೇ. 5, ಶೇ, 12, ಶೇ. 18 ಮತ್ತು ಶೇ, 28ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಇದೀಗ ಶೇ. 12 ಮತ್ತು ಶೇ. 28ರ ತೆರಿಗೆ ಸ್ಲ್ಯಾಬ್‌ಗಳನ್ನು ತೆಗೆದುಹಾಕಿ, ಕೇವಲ ಶೇ. 5 ಮತ್ತು ಶೇ. 18ರ ಎರಡು ಹಂತದ ತೆರಿಗೆ ರಚನೆಯನ್ನು ಜಾರಿಗೆ ತರಲು ಸಭೆ ಒಪ್ಪಿಗೆ ಸೂಚಿಸಿದ್ದು, ಇದು ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ. ಸಾಮಾನ್ಯ ಜನರು ಮತ್ತು ಮಧ್ಯಮ ವರ್ಗದವರು ಬಳಸುವ ವಸ್ತುಗಳ ಮೇಲೆ “ಸಂಪೂರ್ಣ ತೆರಿಗೆ ಕಡಿತ ಮಾಡಲಾಗಿದೆ” ಎಂದು ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದಾರೆ.
- 2500 ರೂ.ಗಿಂತ ಕಡಿಮೆ ಬೆಲೆಯ ಬಟ್ಟೆಗಳು ಅಗ್ಗ
- ಹೇರ್ ಆಯಿಲ್, ಶ್ಯಾಂಪೂ, ಟೂತ್ ಪೇಸ್ಟ್, ಟಾಯ್ಲೆಟ್ ಸೋಪ್, ಕ್ರೀಮ್
- ಟ್ರ್ಯಾಕ್ಟರ್ ಟೈರ್‌ಗಳು ಮತ್ತು ಪಾರ್ಟ್‌ಗಳು
- ಬೆಣ್ಣೆ, ಹಾಲು, ತುಪ್ಪ, ಚೀಸ್ ಮತ್ತು ಡೈರಿ ಪ್ರೊಡಕ್ಟ್‌ಗಳು
- ಪ್ರಿ ಪ್ಯಾಕ್ ಮಾಡಿ ನಮ್‌ಕೀನ್ಸ್, ಬುಜಿಯಾ ಮತ್ತು ಮಿಕ್ಸರ್‌ಗಳು
- ಗೃಹಪಯೋಗಿ ವಸ್ತುಗಳಲ್ಲಿ ಬಹುತೇಕ 12 ಪರ್ಸೆಂಟ್ ಜಿಎಸ್‌ಟಿಯಿಂದ 5 ಶೇಕಡಾಗೆ ಇಳಿಸಿದೆ.
- ಇನ್ನು ಹೆಲ್ತ್ ಕೇರ್‌ಗೆ ಸಂಬಂಧಿಸಿ ಹಲವು ಉತ್ಪನ್ನಗಳ ತೆರಿಗೆಯಲ್ಲಿ ಇಳಿಕೆ ಮಾಡಲಾಗಿದೆ. ( ಥರ್ಮೋಮೀಟರ್, ಮೆಡಿಕಲ್ ಗ್ರೇಡ್ ಆಕ್ಸಿಜನ್, ಡಯಾಗ್ನಾಸ್ಟಿಕ್ ಕಿಟ್‌ಗಳು, ಗ್ಲುಕೋಮೀಟರ್ ಮತ್ತು ಟೆಸ್ಟ್ ಸ್ಟ್ರಿಪ್ಸ್)
- ಇನ್ನು ಕೃಷಿ ಸಂಬಂಧಿತ ಉತ್ಪನ್ನಗಳನ್ನೂ ಕೂಡಾ 5% ಜಿಎಸ್‌ಟಿ ತೆರಿಗೆಗೆ ಇಡಲಾಗಿದೆ.
28%ನಿಂದ 18%ಗೆ ಇಳಿದಿರುವ ವಸ್ತುಗಳು :
- ಹವಾನಿಯಂತ್ರಣ ಯಂತ್ರಗಳು (ಎಸಿ)
- 32 ಇಂಚುಗಳಿಗಿಂತ ದೊಡ್ಡದಾದ ಟಿವಿಗಳು (ಎಲ್ಲಾ ಟಿವಿಗಳು ಈಗ 18% ಜಿಎಸ್‌ಟಿ ವ್ಯಾಪ್ತಿಗೆ)
- ಡಿಶ್‌ವಾಷಿಂಗ್ ಯಂತ್ರಗಳು
- ಸಣ್ಣ ಕಾರುಗಳು
- 350 ಸಿಸಿ ಅಥವಾ ಅದಕ್ಕಿಂತ ಕಡಿಮೆ ಸಾಮರ್ಥ್ಯದ ಬೈಕ್ಗಳು
- ಬಸ್‌ಗಳು, ಟ್ರಕ್‌ಗಳು, ಆಂಬ್ಯುಲೆನ್ಸ್‌ಗಳು
- ಎಲ್ಲಾ ಆಟೋ ಭಾಗಗಳು
- ತ್ರಿಚಕ್ರ ವಾಹನಗಳು
- ಸಿಮೆಂಟ್
ಶೂನ್ಯಕ್ಕೆ ಇಳಿದಿರುವ ವಸ್ತುಗಳು (0%):
- ಅಲ್ಟ್ರಾ-ಹೈ ಟೆಂಪರೇಚರ್ ಹಾಲು
- ಪನೀರ್
- ರೊಟ್ಟಿ, ಪರೋಟಾ
- 33 ಜೀವರಕ್ಷಕ ಔಷಧಗಳು, ಕ್ಯಾನ್ಸರ್ ಔಷಧಿಗಳು, ಅಪರೂಪದ ಕಾಯಿಲೆಗಳಿಗೆ ಔಷಧಿಗಳು
- ವೈಯಕ್ತಿಕ ಜೀವ ವಿಮೆ, ಆರೋಗ್ಯ ಪಾಲಿಸಿಗಳು
ಜೂಜು ಮತ್ತು ಬೆಟ್ಟಿಂಗ್: ಲಾಟರಿ ಟಿಕೆಟ್‌ಗಳು, ಕ್ಯಾಸಿನೊ ಸೇವೆಗಳು ಮತ್ತು ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳ ಮೇಲೆ ಕೆಲವು ಸಂದರ್ಭಗಳಲ್ಲಿ ಹೆಚ್ಚುವರಿ ಸೆಸ್ ಇಲ್ಲದೆ 40% ತೆರಿಗೆ

ಐಷಾರಾಮಿ ವಾಹನಗಳು : 1,500 ಸಿಸಿ ಎಂಜಿನ್‌ಗಿಂತ ಹೆಚ್ಚಿನ ಸಾಮರ್ಥ್ಯದ ಎಸ್‌ಯುವಿಗಳಂತಹ ಉನ್ನತ ದರ್ಜೆಯ ಕಾರುಗಳು ಮತ್ತು 4 ಮೀಟರ್‌ಗಿಂತ ಉದ್ದದ ವಾಹನಗಳು 40% ಜಿಎಸ್‌ಟಿ ವ್ಯಾಪ್ತಿಗೆ ಬರುತ್ತವೆ, ಜೊತೆಗೆ 22% ಪರಿಹಾರ ಸೆಸ್ ಕೂಡ ಸೇರುತ್ತದೆ.

ಸಂಸ್ಕರಿಸಿದ ಜಂಕ್ ಫುಡ್‌ಗಳು : ಹೆಚ್ಚಿನ ಸಕ್ಕರೆ, ಉಪ್ಪು ಅಥವಾ ಕೊಬ್ಬಿನ ಅಂಶವಿರುವ ಫಾಸ್ಟ್ ಫುಡ್ ಮತ್ತು ಪ್ಯಾಕ್ ಮಾಡಿದ ತಿಂಡಿಗಳಂತಹ ವಸ್ತುಗಳು ಸಹ 40% ಏರಿಕೆ





ಇದನ್ನೂ ಓದಿ : ದರ್ಶನ್ಗೆ ಗಲ್ಲು ಶಿಕ್ಷೆ ವಿಧಿಸಿ – ಕೋರ್ಟ್ ಹಾಲ್ಗೆ ನುಗ್ಗಿ ಅಪರಿಚಿತ ವ್ಯಕ್ತಿ ಮನವಿ!







