ಸಚಿವ ಜಮೀರ್​ಗೆ ಮನೆ ಖರೀದಿಸಲು 3 ಕೋಟಿ ಸಾಲ ಕೊಟ್ಟಿದ್ದೆ – ಕೆಜಿಎಫ್ ಬಾಬು!

ಬೆಂಗಳೂರು : ಸಚಿವ ಜಮೀರ್ ಅಹ್ಮದ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಸಂಬಂಧ ಕೆಜಿಎಫ್ ಬಾಬು ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿದ್ದರು. ಈ ಸಂಬಂಧ ಕೆಜಿಎಫ್ ಬಾಬು ಪ್ರತಿಕ್ರಿಯಿಸಿ, 2013ರಲ್ಲಿ ಜಮೀರ್ ಅಹಮ್ಮದ್‌ ಸಾಹೆಬ್ರು ಮನೆ ಖದೀದಿಸಲು 3 ಕೋಟಿ ಸಾಲ ಪಡೆದಿದ್ರು. ಆ ಸಮಯದಲ್ಲಿ ಸಹಾಯ ಕೇಳಿದ್ರು ಸಾಲ ಕೊಟ್ಟೆ ಎಂದಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಕೆಜಿಎಫ್ ಬಾಬು ಮಾತನಾಡಿ, ಸಾಲ ಕೊಟ್ಟಿದ್ದನ್ನು ಎರಡು-ಮೂರು ಸಲ‌ ಕೇಳಿದೆ ಕೊಟ್ಟಿಲ್ಲ, ಇಡಿ ರೇಡ್ ಆಯ್ತು. ಇಡಿಯಿಂದ ನನಗೆ ಸಮನ್ಸ್​ ಬಂತು. ಈ‌ ಕೇಸ್​ನ್ನು ಇಡಿಯಿಂದ ಲೋಕಾಯುಕ್ತಗೆ ವರ್ಗಾವಣೆ ಮಾಡಿದ್ದಾರೆ. ಜಮೀರ್ ಅವ್ರು ನನಗೆ ಒಳ್ಳೆ ಫ್ರೆಂಡ್, ವಿಚಾರಣೆಗೆ ಕರೆದಿದ್ರು ಬಂದು ಹಾಜರಾಗಿದ್ದೆ. ನಸೀರ್ ಜಮೀರ್ ಸೇರಿ 6 ಕೋಟಿ ಕೊಡಬೇಕು. ವಿಚಾರಣೆ ಮಾಡಿದ್ದಾರೆ, ದಾಖಲೆ ಕೇಳಿದ್ದಾರೆ ಅದನ್ನ ಕೊಡ್ತಿನಿ. ದುಡ್ಡು ಬರುತ್ತೆ ಹೋಗುತ್ತೆ, ಆದ್ರೆ ಈಗ ಅವ್ರ ಪರಿಸ್ಥಿತಿ ಟೈಟ್ ಇದೆ. ನನಗೂ ಅವ್ರಿಗೂ ಯಾವುದೇ ಸಮಸ್ಯೆ ಇಲ್ಲಾ‌ ಎಂದಿದ್ದಾರೆ.

2013 ರಲ್ಲಿ ಮನೆ ಸೈಟ್ ತಗೊಂಡಿದ್ರು, ಮನೆ ಖದೀದಿಸಲು ಸಾಲ ಕೇಳಿದ್ರು ಅದಕ್ಕೆ ಕೊಟ್ಟಿದ್ದೆ. ಈ ದುಡ್ಡುನ್ನ ಯಾಕೆ ಕೊಟ್ರಿ, ಯಾವ ಕಾರಣಕ್ಕೆ ಕೊಟ್ರಿ ನಿಮ್ಮ ಅವ್ರ ಮಧ್ಯೆ ವ್ಯವಹಾರ ಇದೆಯಾ ಅಂತಾ ವಿಚಾರಣೆ ಮಾಡಿದ್ರು. ಮತ್ತೆ ಬರೋದಕ್ಕೆ ಹೇಳಿದ್ದಾರೆ ಎಂದು ಕೆಜಿಎಫ್ ಬಾಬು ಹೇಳಿದರು.

ಇದನ್ನೂ ಓದಿ : ಯೂಟ್ಯೂಬ್, ಇನ್​​ಸ್ಟಾದಲ್ಲಿ ದಾಖಲೆ ಬರೆದ ಕಿಚ್ಚನ ‘ಮಾರ್ಕ್’ ಟೈಟಲ್ ಟೀಸರ್!

Btv Kannada
Author: Btv Kannada

Read More