Download Our App

Follow us

Home » ಸಿನಿಮಾ » ಧಾರ್ಮಿಕ ಭಾವನೆಗಳಿಗೆ ಧಕ್ಕೆ : ನೆಟ್​ಫ್ಲಿಕ್ಸ್​ನಿಂದ ಅನ್ನಪೂರ್ಣಿ ಸಿನಿಮಾ ಔಟ್..!

ಧಾರ್ಮಿಕ ಭಾವನೆಗಳಿಗೆ ಧಕ್ಕೆ : ನೆಟ್​ಫ್ಲಿಕ್ಸ್​ನಿಂದ ಅನ್ನಪೂರ್ಣಿ ಸಿನಿಮಾ ಔಟ್..!

ನಯನತಾರಾ ಅಭಿನಯದ ಅನ್ನಪೂರ್ಣಿ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ ಓಟಿಟಿ ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕಲಾಗಿದೆ. ಅನ್ನಪೂರ್ಣಿ ಸಿನಿಮಾ ರಿಲೀಸ್ ಆದ ಬಳಿಕ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. 

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಚಿತ್ರತಂಡದ ವಿರುದ್ಧ ಹಿಂದೂಪರ ಸಂಘಟನೆಗಳು ದೂರು ನೀಡಿದ್ದವು. ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿದ್ದ ಈ ಸಿನಿಮಾವನ್ನು ತೆಗೆದುಹಾಕಲಾಗಿದೆ.

ಈ ಚಿತ್ರದ ಸಹ-ನಿರ್ಮಾಪಕರಾದ ಜೀ ಸ್ಟುಡಿಯೋಸ್ ಈಗ ವಿಶ್ವ ಹಿಂದೂ ಪರಿಷತ್‌ಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಕ್ಷಮೆಯಾಚಿಸುವ ಪತ್ರವನ್ನು ನೀಡಿದೆ.

ಅನ್ನಪೂರ್ಣಿ ಸಿನಿಮಾದ ಸಹ ನಿರ್ಮಾಪಕರಾದ ನಮಗೆ ಹಿಂದೂಗಳು ಮತ್ತು ಬ್ರಾಹ್ಮಣ ಸಮುದಾಯಕ್ಕೆ ನೋವುಂಟು ಮಾಡುವ ಯಾವುದೇ ಉದ್ದೇಶ ಇರಲಿಲ್ಲ. ಈ ಸಮುದಾಯಗಳ ಧಾರ್ಮಿಕ ಭಾವನೆಗಳಿಗೆ ನೋವು ಉಂಟಾಗಿರುವುದಕ್ಕೆ ನಾವು ಕ್ಷಮಾಪಣೆ ಕೇಳಲು ಬಯಸುತ್ತೇವೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಈ ಚಿತ್ರದ ಒಂದು ದೃಶ್ಯದಲ್ಲಿ ವನವಾಸದ ಸಮಯದಲ್ಲಿ ರಾಮ, ಸೀತೆ ಹಾಗೂ ಲಕ್ಷ್ಮಣ ಹಸಿವಾದಾಗ ಪ್ರಾಣಿನ ಬೇಟೆ ಆಡಿ ಸೇವಿಸಿದ್ದರು. ರಾಮಾಯಣದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ ಎಂಬ ಸಂಭಾಷಣೆಗೆ ಅನೇಕರು ಟೀಕೆ ಮಾಡಿದ್ದರು.

ಇನ್ನೊಂದು ದೃಶ್ಯದಲ್ಲಿ ಹಿಂದೂ ಅರ್ಚಕನ ಮಗಳು ಬಿರಿಯಾನಿ ಮಾಡಲು ನಮಾಜ್ ಮಾಡುತ್ತಾಳೆ. ಹಾಗಾಗಿ ಈ ದೃಶ್ಯಗಳು ಹಿಂದೂ ಭಾವನೆಗೆ ದಕ್ಕೆ ಉಂಟಾಗಿದೆ ಎಂದು ಅನೇಕರು ಹೇಳಿದ್ದರು.

ನಯನತಾರಾ ನಟನೆಯ 75ನೇ ಸಿನಿಮಾ ‘ಅನ್ನಪೂರ್ಣಿ’ ಆಗಿದ್ದು, ನಿಲೇಶ್ ಕೃಷ್ಣ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಜತಿನ್ ಸೇಥಿ, ಆರ್ ರವೀಂದ್ರನ್ ಜೊತೆಗೆ ಜೀ ಸ್ಟುಡಿಯೋಸ್ ಸಂಸ್ಥೆಯು ಈ ಸಿನಿಮಾವನ್ನು ನಿರ್ಮಾಣ ಮಾಡಿತ್ತು.

ಈ ಚಿತ್ರದ ಹಾಡುಗಳಿಗೆ ಎಸ್ ಥಮನ್ ಸಂಗೀತ ನೀಡಿದ್ದರು. ನಯನತಾರಾ ಜೊತೆಗೆ ಜೈ, ಸತ್ಯರಾಜ್, ಅಚ್ಯುತ್ ಕುಮಾರ್, ಕೆ ಎಸ್ ರವಿಕುಮಾರ್, ಕಾರ್ತಿಕ್ ಕುಮಾರ್, ರೇಣುಕಾ ಮುಂತಾದವರು ನಟಿಸಿದ್ದಾರೆ.

ಇದನ್ನೂ ಓದಿ : ಉಡುಪಿ, ಚಿಕ್ಕಮಗಳೂರು ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಸ್ಪರ್ಧೆಗೆ ವಿರೋಧ..!

Leave a Comment

DG Ad

RELATED LATEST NEWS

Top Headlines

ಪ್ಲೀಸ್‌ ಒಂದು ಚಾನ್ಸ್​ ಕೊಡಿ ಬಿಗ್​ಬಾಸ್… ಜಗದೀಶ್, ರಂಜಿತ್ ಹೊರಹೋಗ್ತಿದ್ದಂತೆ ಕಣ್ಣೀರಿಟ್ಟ ಸ್ಪರ್ಧಿಗಳು..!

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಶಾಕಿಂಗ್ ಬೆಳವಣಿಗೆ ನಡೆಯುತ್ತಿದೆ. ಸ್ಪರ್ಧಿಗಳೆಲ್ಲರೂ ಜಗದೀಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದರಿಂದ ಜಗದೀಶ್ ಕೋಪಗೊಂಡು ಮಹಿಳಾ ಸ್ಪರ್ಧಿಗಳ ವಿರುದ್ಧ ಅಶ್ಲೀಲ

Live Cricket

Add Your Heading Text Here