ಆನೇಕಲ್ : ಪುಡಿ ರೌಡಿಗಳು ಎಲ್ಲೆಡೆ ರಾಜರೋಷವಾಗಿ ಓಡಾಡುತ್ತ ಅಟ್ಟಹಾಸದಿಂದ ಮೇರೆಯುತ್ತಿದ್ದಾರೆ. ಇದೀಗ ಕ್ಷುಲ್ಲಕ ಕಾರಣಕ್ಕೆ ಪುಡಿ ರೌಡಿಗಳು ವ್ಯಕ್ತಿಯೋರ್ವನ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಘಟನೆ ಆನೇಕಲ್ ತಾಲೂಕಿನ ಹೀಲಲಿಗೆಯಲ್ಲಿ ನಡೆದಿದೆ. ಅಂಕಿತ್ ಎಂಬಾತ ಹಲ್ಲೆಗೆ ಒಳಾಗದ ವ್ಯಕ್ತಿಯಾಗಿದ್ದಾನೆ.
ಟಿಟಿಯಲ್ಲಿ ಬಂದಿದ್ದ ಶ್ರೀಧರ್ನಿಂದ ಎಂಬಾತ ಅಂಕಿತ್ ಮೆಲೆ ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಭಯಗೊಂಡ ಅಂಕಿತ್ ಹಲ್ಲೆ ಮಾಡುತ್ತಿದ್ದಂತೆ ಸುನೀಲ್ ಮತ್ತು ಕಾರ್ತಿಕ್ ಎಂಬುವವರಿಗೂ ಕರೆ ಮಾಡಿದ್ದಾನೆ.
ಗಲಾಟೆ ಬಿಡಿಸಲು ಸ್ಥಳಕ್ಕೆ ಬಂದ ಸುನೀಲ್ ಮತ್ತು ಕಾರ್ತಿಕ್ ಮೇಲೂ ಪುಡಿ ರೌಡಿಗಳಾದ ಕಿಶೋರ್, ಶ್ರೀಧರ್, ವಾಲೆಮಂಜ, ಹೇಮಂತ್, ಮನೋಜ್, ತುಕಡಿ@ವೆಂಕಟರಾಜು ಎಂಬವರು ಚಾಕುವಿನಿಂದ ಇರಿದಿದ್ದಾರೆ. ಪುಡಿ ರೌಡಿಗಳ ಗುಂಪಲ್ಲಿದ್ದ ಕಿಶೋರ್ ಎಂಬಾತ ಇತ್ತೀಚೆಗೆ ಅಷ್ಟೇ ಜೈಲಿನಿಂದ ಬಿಡುಗಡೆ ಆಗಿದ್ದ. ಇನ್ನು ಹಲ್ಲೆಗೊಳಗಾದ ಕಾರ್ತಿಕ್, ಸುನೀಲ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯ ಬಗ್ಗೆ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ನೀತಿ ಸಂಹಿತೆ ಉಲ್ಲಂಘನೆ – ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ವಿರುದ್ದ FIR ದಾಖಲು..!