ಆನೇಕಲ್ : ರಾಜಿ ಮಾಡಲು ಕರೆಸಿ ಮುನಿಯಲ್ಲಪ್ಪ ಅಲಿಯಾಸ್ ಕರಿಯ ಅಂಡ್ ಗ್ಯಾಂಗ್ ಮಾರಕಾಸ್ತ್ರಗಳಿಂದ ಯುವಕನ ಮೇಲೆ ಅಟ್ಯಾಕ್ ಮಾಡಿದ ಘಟನೆ ತಾಲೂಕಿನ ಮುತ್ತಾನಲ್ಲೂರು ಸಮೀಪದ ಗೋಪಸಂದ್ರ ಗ್ರಾಮದಲ್ಲಿ ನಡೆದಿದೆ.
ಮುನಿಯಲ್ಲಪ್ಪ ಅಲಿಯಾಸ್ ಕರಿಯ ಅಂಡ್ ಗ್ಯಾಂಗ್ ರಾಜಿ ಮಾಡಲು ಗೋಪಸಂದ್ರ ಮೂಲದ ಮೂಲದ ಸತೀಶ್ನನ್ನು ಕರೆಸಿ ಆತನ ಮೇಲೆ ಅಟ್ಯಾಕ್ ಮಾಡಿದ್ದಾರೆ. ನಿನ್ನೆ ರಾತ್ರಿ ಅಟ್ಯಾಕ್ ಮಾಡಿದ್ದು, ಸತೀಶ್ ಸ್ಥಿತಿ ಸದ್ಯ ಗಂಭೀರವಾಗಿದೆ.
ನಿನ್ನೆ ಮಧ್ಯಾಹ್ನ ಮುನಿಯಪ್ಪ ಹಾಗೂ ಸತೀಶ್ ನಡುವೆ ಗಲಾಟೆ ನಡೆದಿತ್ತು. ರಾತ್ರಿ ಮುನಿಯಲ್ಲಪ್ಪ ಮಾತನಾಡಲು ರಾಜಿ ಮಾಡಿಕೊಳ್ಳಲು ಕರೆಸಿದ್ದು, ಆ ವೇಳೆಯೇ ಮುನಿಯಲ್ಲಪ್ಪ ಅಲಿಯಾಸ್ ಕರಿಯ ಅಂಡ್ ಗ್ಯಾಂಗ್ ಏಕಾಏಕಿ ಸತೀಶ್ ಮೇಲೆ ಅಟ್ಯಾಕ್ ಮಾಡಿದೆ. ಸದ್ಯ ಸತೀಶ್ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಚಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸ್ಥಳಕ್ಕೆ ಸೂರ್ಯ ನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಕಾಪಿ ರೈಟ್ ಉಲ್ಲಂಘನೆ ಆರೋಪ – ಅಜಯ್ ದೇವಗನ್ ಅಭಿನಯದ “ಮೈದಾನ್” ಸಿನಿಮಾಗೆ ಮೈಸೂರು ಕೋರ್ಟ್ನಿಂದ ತಡೆಯಾಜ್ಞೆ..!