Download Our App

Follow us

Home » ಅಪರಾಧ » ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಆರೋಪ : ಅಪರಿಚಿತ ವ್ಯಕ್ತಿಯ ವಿರುದ್ದ FIR..!

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಆರೋಪ : ಅಪರಿಚಿತ ವ್ಯಕ್ತಿಯ ವಿರುದ್ದ FIR..!

ಬೆಂಗಳೂರು : ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಆರೋಪ ಸಂಬಂಧ ಅಪರಿಚಿತ ವ್ಯಕ್ತಿಯ ವಿರುದ್ದ FIR ದಾಖಲಾಗಿದೆ. ವಿಧಾನಸೌಧದ ACP ಶಿವಕುಮಾರ್ ಕೊಟ್ಟ ದೂರಿನಡಿ ವಿಧಾನಸೌಧ ಠಾಣೆಯಲ್ಲಿ FIR ದಾಖಲಿಸಲಾಗಿದೆ.

IPC‌ ಸೆಕ್ಷನ್ 153B ಮತ್ತು 501(1) (B) ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದ್ದು, 153(B) – ವಿವಿಧ ಧಾರ್ಮಿಕ, ಜನಾಂಗೀಯ, ಭಾಷೆ ಅಥವಾ ಪ್ರಾದೇಶಿಕ ಗುಂಪುಗಳ ನಡುವೆ ದ್ವೇಷ ಸೃಷ್ಟಿಸುವ ಹೇಳಿಕೆ. 505 (1) (B) – ಯಾವುದೇ ಹೇಳಿಕೆ, ವದಂತಿ ಅಥವಾ ವರದಿ ಮೂಲಕ ಸಾರ್ವಜನಿಕ ನೆಮ್ಮದಿ ಹಾಳುಮಾಡಲು ಮಾಡಲು ಪ್ರಚೋದಿಸುವುದು. ಈ ಎರಡು ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ಸದ್ಯ ಘೋಷಣೆ ಕೂಗಿರುವ ವಿಡಿಯೋ ಮತ್ತು ಆಡಿಯೋ ಪರಿಶೀಲನೆ ನಡೆಸಿದ್ದು, ಖುದ್ದು ಕೇಂದ್ರ ವಿಭಾಗ ಡಿಸಿಪಿ ಶೇಖರ್ ಪರಿಶೀಲಿಸಿದ್ದಾರೆ. ಹಾಗೆಯೇ ತನಿಖೆ ಭಾಗವಾಗಿ ಆಡಿಯೊ, ವಿಡಿಯೋವನ್ನು ಕಲೆಕ್ಟ್ ಮಾಡಿ FSL ಗೆ ಕಳಿಸಲು ನಿರ್ಧಾರ ಮಾಡಿದ್ದಾರೆ. ಪೊಲೀಸರು ಆರೋಪಿತ ವ್ಯಕ್ತಿಯ ಹುಡುಕಾಟ ನಡೆಸುತ್ತಿದ್ದಾರೆ.

ಏನಿದು ಪ್ರಕರಣ ?

ರಾಜ್ಯಸಭಾ ಚುನಾವಣೆ ನಡೆದು ಅದರ ಫಲಿತಾಂಶ ಘೋಷಣೆಯಾದ ಬಳಿಕ, ವಿಧಾನಸೌಧದ ಆವರಣದಲ್ಲಿಯೇ ದೇಶದ್ರೋಹದ ಘೋಷಣೆ ಮೊಳಗಿರುವ ಘಟನೆ ನಿನ್ನೆ ನಡೆದಿದೆ. ರಾಜ್ಯಸಭೆಯ ನೂತನ ಸಂಸದರಾಗಿ ಆಯ್ಕೆಯಾದ ಕಾಂಗ್ರೆಸ್‌ನ ನಾಸಿರ್‌ ಹುಸೇನ್‌ ಅವರ ಬೆಂಬಲಿಗರ ಪೈಕಿ ಒಬ್ಬರು ಪಾಕಿಸ್ತಾನ್‌ ಜಿಂದಾಬಾದ್‌ ಎನ್ನುವ ಘೋಷಣೆ ಕೂಗಿದ್ದಾರೆ.

ಇದನ್ನೂ ಓದಿ : ‘ಕರಟಕ ದಮನಕ’ ಚಿತ್ರದ ಕ್ಯಾರೆಕ್ಟರ್ ಟೀಸರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್..!

Leave a Comment

DG Ad

RELATED LATEST NEWS

Top Headlines

ವಾಲ್ಮೀಕಿ ಹಗರಣ – ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ 10 ಕೆ.ಜಿ‌ ಚಿನ್ನದ ಬಿಸ್ಕೆಟ್ SIT ವಶಕ್ಕೆ..!

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಸಂಬಂಧ ತನಿಖೆಯನ್ನ SIT ಚುರುಕುಗೊಳಿಸಿದೆ. ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ ಬರೋಬ್ಬರಿ 10 ಕೆ.ಜಿ‌ ಚಿನ್ನದ

Live Cricket

Add Your Heading Text Here