Download Our App

Follow us

Home » ಅಪರಾಧ » ಅನೈತಿಕ ಸಂಬಂಧ ಆರೋಪ : ಪತ್ನಿ ಮೇಲೆ ಮಚ್ಚಿನಿಂದ ಹ*ಲ್ಲೆ ಮಾಡಿದ ಪತಿರಾಯ..!

ಅನೈತಿಕ ಸಂಬಂಧ ಆರೋಪ : ಪತ್ನಿ ಮೇಲೆ ಮಚ್ಚಿನಿಂದ ಹ*ಲ್ಲೆ ಮಾಡಿದ ಪತಿರಾಯ..!

ಬೆಂಗಳೂರು : ಗಂಡ ತನ್ನ ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಜೀವನ್​ ಭೀಮಾನಗರದ ವಿಂಡ್ ಟನಲ್ ರಸ್ತೆಯಲ್ಲಿ ನಡೆದಿದೆ. ಅನೈತಿಕ ಸಂಬಂಧದ ಹಿನ್ನೆಲೆ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ನಿನ್ನೆ ರಾತ್ರಿ 28 ವರ್ಷದ ಪತ್ನಿ ಮೇಲೆ ಗಂಡ ಮುಜೀಬ್​​​ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ದಂಪತಿ ಆರು ವರ್ಷಗಳ ಹಿಂದೆ ಮದುವೆಯಾಗಿದ್ದರು. 6 ತಿಂಗಳ ನಂತರ ಮುಜೀಬ್​ಗೆ ತನ್ನ ಪತ್ನಿ ಮತ್ತೊಬ್ಬ ವ್ಯಕ್ತಿಯ ಜೊತೆ ಅನೈತಿಕ ಸಂಬಂಧದ ಹೊಂದಿರುವುದು ತಿಳಿದಿದೆ. ಹೀಗಾಗಿ ನಿನ್ನೆ ಸಂಜೆ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ.

ಸಲೀಂ ಎಂಬಾತನ ಜೊತೆ ಪತ್ನಿ​ ಸಂಬಂಧ ಹೊಂದಿದ್ದು, ಈ ವಿಚಾರ ಗೊತ್ತಾಗಿ ಆಕೆ ಮೇಲೆ ಮುಜೀಬ್ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ಪತ್ನಿ ತಲೆಗೆ ಗಂಭೀರ ಗಾಯವಾಗಿದೆ. HAL ನ ಖಾಸಗಿ ಆಸ್ಪತ್ರೆಗೆ ಗಾಯಾಳುವನ್ನು ದಾಖಲಿಸಲಾಗಿದೆ. ಪೊಲೀಸರು ಶೇಕ್ ಮುಜೀಬ್​​ನನ್ನು ಬಂಧಿಸಿದ್ದು, ಈ ಸಂಬಂಧ ಜೀವನ್ ಭೀಮಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಆನೆ ದಾಳಿಗೆ ಬ*ಲಿಯಾದ ಕೇರಳದ ವ್ಯಕ್ತಿಗೆ ಕರ್ನಾಟಕದಿಂದ ಪರಿಹಾರ – ಸರ್ಕಾರದ ವಿರುದ್ಧ ಬಿಜೆಪಿ ಕಿಡಿ..!

Btv Kannada1
Author: Btv Kannada1

Leave a Comment

RELATED LATEST NEWS

Top Headlines

ಉಡುಪಿ : ಮನೆಯಲ್ಲಿ ಮತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ವೃದ್ಧೆ ಸಾ*ವು..!

ಉಡುಪಿ : 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶವಿದೆ. ಹಾಗಾಗಿ ಮನೆಯಲ್ಲಿ ಮತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ. ಪಿ.ಯಶೋಧಾ ನಾರಾಯಣ ಉಪಾಧ್ಯ

Live Cricket

Add Your Heading Text Here