ಬೆಂಗಳೂರು : ನಟ ಶರಣ್ ಅಭಿನಯದ “ಅಧ್ಯಕ್ಷ” ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿ ಕನ್ನಡಿಗರ ಮನಗೆದ್ದಿದ್ದ ನಟಿ ಹೆಬ್ಬಾ ಪಟೇಲ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಹೆಬ್ಬಾ ಪಟೇಲ್ ಅವರು ಭಾರತೀಯ ಚಲನಚಿತ್ರ ರಂಗದ ಹೆಸರಾಂತ ನಟಿಯರಲ್ಲಿ ಒಬ್ಬರು.
ಹೆಬ್ಬಾ ಪಟೇಲ್ ಅವರು ಕನ್ನಡ ಚಿತ್ರರಂಗದಿಂದ ನಟನೆಯನ್ನು ಶುರು ಮಾಡಿ ಹತ್ತು ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಹೆಬ್ಬಾ ಪಟೇಲ್ ನಟಿಸಿದ ಮೊದಲ ಚಿತ್ರ ಕನ್ನಡದ ಹೆಸರಾಂತ ಸಿನಿಮಾ “ಅಧ್ಯಕ್ಷ” ಚಿತ್ರದಲ್ಲಿ ಶರಣ್ ಅವರ ಜೊತೆ ನಟಿಸಿ ಕನ್ನಡ ಪ್ರೇಕ್ಷಕರ ಮನಸ್ಸನ್ನು ಮುಟ್ಟಿ ಕನ್ನಡದ ಮನೆ ಮಗಳಾದರು. ನಂತರ ತೆಲುಗಿನಲ್ಲಿ ‘ಕುಮಾರಿ 21F” ಚಿತ್ರ ಹೆಬ್ಬಾ ಪಟೇಲ್ಗೆ ಖ್ಯಾತಿಯನ್ನ ತಂದು ಕೊಟ್ಟಿತು.
ಹೆಬ್ಬಾ ಪಟೇಲ್ ಅವರು ಸದ್ಯಕ್ಕೆ ಗುರು ದೇಶಪಾಂಡೆ ಅವರ ನಿರ್ಮಾಣದ ಜಿ ಸಿನಿಮಾಸ್ ಹಾಗೂ ಸೆವೆನ್ ಸ್ಟಾರ್ ಸ್ಟುಡಿಯೋ ಮತ್ತು ಬಿ.ಎಂ ಗಿರಿರಾಜ್ ಅವರ ನಿರ್ದೇಶನದ “ರಾಮರಸ” ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರೀಕರಣ ಮುಗಿಸಿರುವ “ರಾಮರಸ” ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಶೀಘ್ರದಲ್ಲೇ “ರಾಮರಸ” ಸಿನಿಮಾ ತೆರೆಗೆ ಬರಲಿದೆ.
ಹೆಬ್ಬಾ ಪಟೇಲ್ ಅವರಿಗೆ ಕವಿತೆ ಮೂಲಕ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ “ರಾಮರಸ” ಚಿತ್ರತಂಡ :
ಅವಳ ಅಂದಕ್ಕೆ ಸೋತವರು
ಮಾತಿಗೆ ಮರುಳಾದವರು
ನಡಿಗೆಗೆ ನಡುಗಿದವರಾರೂ
ಭೂಮಿ ಮೇಲೆ ಉಳಿದೇ ಇಲ್ಲ.
ಗಂಡಸರ ಆಸೆಗೆ ಅವಳು ಒಂದು ಮಿಸ್ಟರಿ.. ಅವಳೇ ಭ್ರಮರಿ
ರಾಮರಸ ಕುಡಿಸಲು,
ನಿತ್ಯ ರತಿರಸವ ಸುರಿಸಲು,
ಪಾತಾಳ ಮೋಹಿನಿ ಭ್ರಮರಿಯಾಗಿರುವ
ಹೆಬ್ಬಾ ಪಟೇಲ್ಗೆ ಹುಟ್ಟು ಹಬ್ಬದ ನಲ್ವಾರೈಕೆಗಳು.
ಇದನ್ನೂ ಓದಿ : ಯಶ್ ಫ್ಯಾನ್ಸ್ಗೆ ಸರ್ಪ್ರೈಸ್.. ಪೋಸ್ಟರ್ ಮೂಲಕ ಅಪ್ಡೇಟ್ ಕೊಟ್ಟ ‘ಟಾಕ್ಸಿಕ್’ ಚಿತ್ರತಂಡ..!