ಬೆಂಗಳೂರು : ರೇವ್ ಪಾರ್ಟಿಯಲ್ಲಿದ್ದ ನಟಿಯರಿಗೆ ಸಂಕಷ್ಟ ಫಿಕ್ಸ್ ಆಗಿದೆ. ನಟಿ ಹೇಮಾ ಬ್ಲಡ್ ರಿಪೋರ್ಟ್ ಪಾಸಿಟಿವ್ ಬಂದಿದ್ದು, ಪಾರ್ಟಿಯಲ್ಲಿದ್ದ 103 ಮಂದಿ ಪೈಕಿ 86 ಮಂದಿಯಲ್ಲಿ ಡ್ರಗ್ಸ್ ಪತ್ತೆಯಾಗಿದೆ. ಡ್ರಗ್ ಸೇವನೆ ಮಾಡಿರೋದು ರಕ್ತ ಪರೀಕ್ಷೆಯಲ್ಲಿ ಪತ್ತೆಯಾಗಿದ್ದು, 73 ಮಂದಿ ಪುರುಷರ ಪೈಕಿ 59 ಮಂದಿ ಬ್ಲಡ್ ರಿಪೋರ್ಟ್ ಪಾಸಿಟಿವ್ ಬಂದಿದೆ.
30 ಯುವತಿಯರ ಪೈಕಿ 27 ಮಂದಿ ಬ್ಲಡ್ ರಿಪೋರ್ಟ್ ಪಾಸಿಟಿವ್ ಬಂದಿದ್ದು, ಡ್ರಗ್ಸ್ ಸೇವನೆ ಮಾಡಿರೋದು ಬ್ಲಡ್ ರಿಪೋರ್ಟ್ನಲ್ಲಿ ಸಾಬೀತಾಗಿದೆ. ರೇವ್ ಪಾರ್ಟಿಯಲ್ಲಿ ಅಪಾರ ಪ್ರಮಾಣದ ಡ್ರಗ್ಸ್ ಬಳಕೆ ಮಾಡಿದ್ದಾರೆ. ರೇವ್ ಪಾರ್ಟಿಯಲ್ಲಿ MDMA, ಕೊಕೇನ್, ಹೈಡ್ರೋಗಾಂಜಾ ಪತ್ತೆಯಾಗಿತ್ತು, ವಾಸು ಎಂಬಾತನ ಬರ್ತ್ ಡೇ ಅಂಗವಾಗಿ ರೇವ್ ಪಾರ್ಟಿ ಆಯೋಜನೆ ಮಾಡಿದ್ದ. Sunset To Sun Rise victory ಶೀರ್ಷಿಕೆಯಡಿ ರೇವ್ ಪಾರ್ಟಿ ಆಯೋಜನೆ ಮಾಡಿದ್ದ.
ಪಾರ್ಟಿಯಲ್ಲಿ 100-150 ಮಂದಿ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ರು, ಬ್ಲಡ್ ರಿಪೋರ್ಟ್ನಲ್ಲಿ ಪಾಸಿಟಿವ್ ಬಂದವರಿಗೆ ಶೀಘ್ರವೇ CCBಯಿಂದ ನೋಟಿಸ್ ಜಾರಿಯಾಗಿದ್ದು, ಸಿಸಿಬಿ ತನಿಖಾ ಟೀಂ ನೋಟಿಸ್ ನೀಡಿ ವಿಚಾರಣೆ ಮಾಡಲಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಉದ್ಯಮಿಗೆ ರೌಡಿ ನಾಗನ ಸಹಚರ ಬ್ಲಾಕ್ ಬಾಲನಿಂದ ಧಮ್ಕಿ – FIR ದಾಖಲು..!