Download Our App

Follow us

Home » ಅಪರಾಧ » ಬೆಂಗಳೂರಿನಲ್ಲಿ ಉದ್ಯಮಿ​ಗೆ ರೌಡಿ ನಾಗನ ಸಹಚರ ಬ್ಲಾಕ್​ ಬಾಲನಿಂದ ಧಮ್ಕಿ – FIR ದಾಖಲು..!

ಬೆಂಗಳೂರಿನಲ್ಲಿ ಉದ್ಯಮಿ​ಗೆ ರೌಡಿ ನಾಗನ ಸಹಚರ ಬ್ಲಾಕ್​ ಬಾಲನಿಂದ ಧಮ್ಕಿ – FIR ದಾಖಲು..!

ಬೆಂಗಳೂರು : ಬೆಂಗಳೂರಿನಲ್ಲಿ ಉದ್ಯಮಿಗೆ ರೌಡಿ ನಾಗನ ಹೆಸರು ಹೇಳಿ ಧಮ್ಕಿ ಹಾಕಿದ್ದಾನೆ. ಬಿಲ್ಡರ್​ಗೆ ನಾಗನ ಸಹಚರ ಬ್ಲಾಕ್​ ಬಾಲ ಕನ್​ಸ್ಟ್ರಕ್ಷನ್​​​​ ಉದ್ಯಮಿ ರಾಘವಪ್ಪ ಮೂರ್ತಿಗೆ ಜಾಗವನ್ನು ತಮ್ಮ ಹೆಸರಿಗೆ ಬರೆದುಕೊಡಬೇಕು ಎಂದು ಧಮ್ಕಿ ಹಾಕಿದ್ದಾನೆ.

ಪ್ರತಿ ತಿಂಗಳೂ ನಮಗೆ ಮಂತ್ಲಿ ಕೊಡಬೇಕು, ಹಫ್ತಾ ಕೊಡದೇ ಇದ್ರೆ ನಿಮ್ಮ ಫ್ಯಾಮಿಲಿ ಮುಗಿಸ್ತೇವೆ ಎಂದು ಬ್ಲಾಕ್​ ಬಾಲ ವಾರ್ನಿಂಗ್​​​ ಕೊಟ್ಟಿದ್ದಾನೆ. ಸಹಚರರು ವಿಲ್ಸನ್​​​ ಗಾರ್ಡನ್ ನಾಗನಿಂದ ಪ್ರೆಶರ್ ಇದೆ ಎಂದಿದ್ದು, ಹೊಂಗಸಂದ್ರದ ಸೈಟ್​ ತಮ್ಮ ಹೆಸರಿಗೆ ಬರೆದುಕೊಡುವಂತೆ ಧಮ್ಕಿ ಬ್ಲಾಕ್​ ಬಾಲ ಹಾಕಿದ್ದಾನೆ. ಮುತ್ತು ಎಂಬಾತ ಪದೇ ಪದೇ ಕರೆ ಮಾಡಿ ಧಮ್ಕಿ ಹಾಕ್ತಿದ್ದ, ವಿಲ್ಸನ್ ಗಾರ್ಡನ್ ನಾಗನ ಸಹಚರ ಬ್ಲಾಕ್ ಬಾಲ ಟೀಂನಿಂದ ಬೆದರಿಕೆ ಬಂದಿದೆ. ಮನೆಯವರನ್ನು ಕಿಡ್ನಾಪ್​ ಮಾಡಿ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ.

ಮಹೇಶ್ ಮರ್ಡರ್ ಕೇಸ್​ನಲ್ಲಿ ಜೈಲು ಸೇರಿರುವ ವಿಲ್ಸನ್​​ ಗಾರ್ಡನ್​ ನಾಗ ಇದೀಗ ಜೈಲಿಂದ್ಲೇ ಆಪರೇಟ್ ಮಾಡ್ತಿದ್ದಾನೆ. ರಿಮೋಟ್ ರೌಡಿಯಾಗಿ ವಿಲ್ಸನ್​ ಗಾರ್ಡನ್​ ನಾಗ ಆ್ಯಕ್ಟೀವ್​ ಆಗ್ತಿದ್ದಾನಾ ಅನ್ನೊ ಪ್ರಶ್ನೆ ಹುಟ್ಟಿಕೊಂಡಿದ್ದು, ಮಡಿವಾಳ ಠಾಣೆಯಲ್ಲಿ ವಿಲ್ಸನ್ ಗಾರ್ಡನ್ ನಾಗ ಮತ್ತು ಸಹಚರರ ವಿರುದ್ದ FIR ದಾಖಲಾಗಿದೆ.

ಇದನ್ನೂ ಓದಿ : ಇನ್ಮುಂದೆ ಹೊಸ ಅಧ್ಯಾಯದೊಂದಿಗೆ ಬರಲಿದೆ “ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ” ಧಾರಾವಾಹಿ..!

Leave a Comment

DG Ad

RELATED LATEST NEWS

Top Headlines

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಡಿವೈಡರ್​​ಗೆ ಡಿಕ್ಕಿ ಹೊಡೆದ ಕಾರು – ತಾಯಿ, ಮಗ ಸ್ಥಳದಲ್ಲೇ ಸಾವು..!

ಮಂಡ್ಯ : ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ ವೇ ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ತಾಯಿ ಮಗ ಬಲಿಯಾಗಿರುವ ಘಟನೆ ನಡೆದಿದೆ. ರುದ್ರಾಕ್ಷಿಪುರ ಗ್ರಾಮದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕಾರಿನಲ್ಲಿ

Live Cricket

Add Your Heading Text Here