ಬೆಂಗಳೂರು : ಸ್ಯಾಂಡಲ್ವುಡ್ನ ಸೂಪರ್ ಹಿಟ್ ಸಿನಿಮಾ ಉಗ್ರಂ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಹರಿಪ್ರಿಯಾಗೆ ಇಂದು ಸೀಮಂತ ಸಂಭ್ರಮ. ನಟ ವಸಿಷ್ಠ ಸಿಂಹ ಅವರನ್ನು ಪ್ರೀತಿಸಿ ಮದುವೆಯಾಗಿರುವ ನಟಿ ಹರಿಪ್ರಿಯಾ ಅವರಿಗೆ ಇಂದು ಅದ್ದೂರಿಯಾಗಿ ಸೀಮಂತ ಸಂಭ್ರಮ ನೆರವೇರಿಸಲಾಯ್ತು.
ಸೀಮಂತ ಕಾರ್ಯಕ್ರಮದಲ್ಲಿ ನಟಿ ಹರಿಪ್ರಿಯಾ ಅವರು ಹಸಿರು ಬಣ್ಣದ ಸೀರೆಯಲ್ಲಿ ಮಿಂಚಿದರೆ ಪತಿ ವಸಿಷ್ಠ ಸಿಂಹ ಅವರು ಬಿಳಿ ಪಂಚೆ, ಶಲ್ಯ ಧರಿಸಿ ಸಂಭ್ರಮದಲ್ಲಿ ಮಿಂಚಿದರು. ಹಿರಿಯ ನಟಿ ತಾರಾ ಸೇರಿ ಹಲವು ಗಣ್ಯರು, ಸಂಬಂಧಿಕರು, ಕಲಾವಿದರು ಶುಭಾಶಯ ಕೋರಿದ್ದಾರೆ.
ಅಂದಹಾಗೆ, ವಸಿಷ್ಠ ಸಿಂಹ ಕನ್ನಡದ ಜೊತೆ ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಲವು ಪಾತ್ರಗಳ ಮೂಲಕ ಗಮನ ಸೆಳೆಯಲು ಸಜ್ಜಾಗಿದ್ದಾರೆ. ಹರಿಪ್ರಿಯಾ ಪ್ರಸ್ತುತ ನಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ : “ರಾಮರಸ” ಸಿನಿಮಾದಲ್ಲಿ “ಅಧ್ಯಕ್ಷ” ನಟಿ ಹೆಬ್ಬಾ ಪಟೇಲ್ ಮಿಂಚು – ಕವಿತೆ ಮೂಲಕ ಹುಟ್ಟು ಹಬ್ಬದ ಸಂಭ್ರಮ ಕೋರಿದ ಚಿತ್ರತಂಡ!
Post Views: 406