ವಿಮಾನ ದುರಂತದಲ್ಲಿ ಎಲ್ಲವೂ ಸುಟ್ಟು ಕರಕಲಾದರೂ ‘ಭಗವದ್ಗೀತೆ’ಗೆ ಏನು ಆಗಿಲ್ಲ.. ವಿಡಿಯೋ ವೈರಲ್​!

ಅಹಮದಾಬಾದ್​​ : 242 ಪ್ರಯಾಣಿಕರಿದ್ದ ಏರ್‌ ಇಂಡಿಯಾ ವಿಮಾನ ಗುಜರಾತಿನ ಅಹಮದಾಬಾದ್‌ನಲ್ಲಿ ಪತನಗೊಂಡ ಆಘಾತಕಾರಿ ಘಟನೆ ಗುರುವಾರ ಸಂಭವಿಸಿದೆ. ಈ ಘೋರ ದುರಂತವನ್ನು ವಿಮಾನ ಅಪಘಾತಗಳ ಇತಿಹಾಸದಲ್ಲೇ ಅತ್ಯಂತ ದೊಡ್ಡ ಅಪಘಾತವೆಂದು ಪರಿಗಣಿಸಲಾಗಿದೆ. ಈ ದುರಂತದಲ್ಲಿ ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪಾನಿ ಸೇರಿದಂತೆ ಒಟ್ಟು 265 ಮಂದಿ ಸಾವಿಗೀಡಾಗಿದ್ದಾರೆ.

ಇನ್ನೂ ಈ ಅಪಘಾತದಲ್ಲಿ ಎಲ್ಲವೂ ಸುಟ್ಟು ಭಸ್ಮವಾಗಿದ್ದು, ಇದಕ್ಕೆ ಸಂಬಂಧಪಟ್ಟ ಆಘಾತಕಾರಿ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇನ್ನೂ ಈ  ಘನಘೋರ ದುರಂತ ಸಂಭವಿಸಿದ ಸ್ಥಳದಲ್ಲಿನ ರಕ್ಷಣಾ ಕಾರ್ಯಾಚರಣೆಯ ವೇಳೆ ಅವಶೇಷಗಳ ಅಡಿಯಲ್ಲಿ ಭಗವದ್ಗೀತೆಯೊಂದು ಸಿಕ್ಕಿದ್ದು, ಎಲ್ಲವೂ ಸುಟ್ಟುಕರಕಲಾದರೂ ಈ ಭಗವದ್ಗೀತೆಯ ಪುಸ್ತಕ ಮಾತ್ರ ಏನು ಆಗದೇ ಇದ್ದಿದ್ದನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.

ವಿಮಾನ ಪತನವಾದ ಸ್ಥಳಕ್ಕೆ ಸಂಬಂಧಪಟ್ಟ ವಿಡಿಯೋವೊಂದು ವೈರಲ್‌ ಆಗುತ್ತಿದ್ದು, ವಿಮಾನ ಪತನದ ನಂತರ ಭಾರೀ ಬೆಂಕಿ ಹೊತ್ತಿಕೊಂಡು ಎಲ್ಲವೂ ಸುಟ್ಟು ಕರಕಲಾದರೂ ಅಲ್ಲಿದ್ದ ಭಗವದ್ಗೀತೆಯೊಂದು ಹಾಗೆಯೇ ಇತ್ತು. ಸುಟ್ಟುಕರಕಲಾದ ಅವಶೇಷಗಳ ಅಡಿಯಲ್ಲಿ ಭಗವದ್ಗೀತೆ ಸುರಕ್ಷಿತವಾಗಿ ಪತ್ತೆಯಾಗಿದೆ.

ಈ ಕುರಿತ ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗುತ್ತಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಕಾರ್ಯಾಚರಣೆಯ ವೇಳೆ ಸಿಕ್ಕ ಭಗವದ್ಗೀತೆ ಪುಸ್ತಕವನ್ನು ವ್ಯಕ್ತಿಯೊಬ್ಬರು ತೆರೆದು ತೋರಿಸುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಈ ದೃಶ್ಯವನ್ನು ಕಂಡು ನೋಡುಗರು ಆಶ್ಚರ್ಯಚಕಿತರಾಗಿದ್ದಾರೆ.

ಇದನ್ನೂ ಓದಿ : ವಿಮಾನ ದುರಂತ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ – ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಣೆ!

Btv Kannada
Author: Btv Kannada

Read More