ಫೀಲ್ಡಿಂಗ್ ವೇಳೆ ಮುಖಕ್ಕೆ ಬಡಿದ ಚೆಂಡು – ಕನ್ನಡಿಗ ರಚಿನ್ ರವೀಂದ್ರಗೆ ಗಂಭೀರ ಗಾಯ!  

ಲಾಹೋರ್ : ಪಾಕಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ನ್ಯೂಜಿಲೆಂಡ್ ಆಟಗಾರ, ಕನ್ನಡಿಗ ರಚಿನ್ ರವೀಂದ್ರ ಗಂಭೀರವಾಗಿ ಗಾಯಗೊಂಡಿದ್ದಾರೆ. ಲಾಹೋರ್​ನ ಗದ್ದಾಫಿ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ನ್ಯೂಜಿಲೆಂಡ್ ತಂಡ 50 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 330 ರನ್ ಕಲೆಹಾಕಿತ್ತು.

ಈ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು 35 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 183 ರನ್ ಕಲೆಹಾಕಿ ಮುನ್ನುಗುತ್ತಿತ್ತು. ಈ ಹಂತದಲ್ಲಿ ಕಣಕ್ಕಿಳಿದ ಎಡಗೈ ದಾಂಡಿಗ ಖುಷ್ದಿಲ್ ಶಾ, ಮೈಕೆಲ್ ಬ್ರೇಸ್​ವೆಲ್ ಎಸೆದ 38ನೇ ಓವರ್​ನ 3ನೇ ಎಸೆತದಲ್ಲಿ ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್​ನತ್ತ ಚೆಂಡನ್ನು ಬಾರಿಸಿದ್ದಾರೆ.

ಅತ್ತ ಬೌಂಡರಿ ಲೈನ್​ನಲ್ಲಿದ್ದ ರಚಿನ್ ರವೀಂದ್ರ ಕ್ಯಾಚ್ ಹಿಡಿಯಲು ಓಡಿ ಬಂದಿದ್ದು, ಫೆಡ್‌ಲೈಟ್‌ ಬೆಳಕಿನಿಂದಾಗಿ ಚೆಂಡನ್ನು ಸರಿಯಾಗಿ ಗುರುತಿಸುವಲ್ಲಿ ಎಡವಿದ್ದಾರೆ. ಪರಿಣಾಮ ಬಾಲ್ ನೇರವಾಗಿ ಅವರ ಮುಖಕ್ಕೆ ಬಡಿದಿದೆ.

ಚೆಂಡು ಮುಖಕ್ಕೆ ಬಡಿಯುತ್ತಿದ್ದಂತೆ ರಚಿನ್ ರವೀಂದ್ರ ಅಲ್ಲಿಯೇ ಕುಸಿದು ಬಿದಿದ್ದು, ತಕ್ಷಣವೇ ವೈದ್ಯಕೀಯ ಸಿಬ್ಬಂದಿಗಳು ಮೈದಾನಕ್ಕೆ ಆಗಮಿಸಿದ್ದು, ಈ ವೇಳೆ ರಚಿನ್​ ಮುಖದಿಂದ ರಕ್ತ ಸುರಿಯುತ್ತಿರುವುದು ಕಂಡುಬಂದಿದೆ. ಇನ್ನು ಗಂಭೀರ ಗಾಯದ ಕಾರಣ ರಚಿನ್ ರವೀಂದ್ರ ಅರ್ಧದಲ್ಲೇ ಮೈದಾನ ತೊರೆದಿದ್ದಾರೆ. ಸದ್ಯ ರಚಿನ್​ ರವೀಂದ್ರಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗಿದ್ದು, ಗುಣಮುಖರಾಗಿದ್ದಾರೆ ಎಂದು ತಿಳಿದುಬಂದಿದೆ.  

Btv Kannada
Author: Btv Kannada

Leave a Comment

Read More