ಅಪ್ಪನ ಜೊತೆ ಫೋಟೋಗೆ ಪೋಸ್‌‌ ಕೊಟ್ಟ ಸಾನ್ವಿ ಸುದೀಪ್‌‌.. ನಮ್ಮ ಹೃದಯ ಕದ್ದು ಬಿಟ್ರಿ ಎಂದ ಫ್ಯಾನ್ಸ್!

ಕಿಚ್ಚ ಸುದೀಪ್ ಮಗಳು ಸಾನ್ವಿ ತಮ್ಮ ಫ್ಯಾಮಿಲಿ ಜೊತೆಗಿನ ಕ್ಯೂಟ್ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಸಾನ್ವಿ ಸುದೀಪ್ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಒಂದಷ್ಟು ಫೋಟೊಗಳಲ್ಲಿ ಒಂದು ಅಪ್ಪನ ಜೊತೆಗೆ ನಿಂತು ಮುದ್ದಾಗಿ ಸ್ಮೈಲ್ ಕೊಟ್ಟಿದ್ದಾರೆ. ಇನ್ನೊಂದು ಫ್ಯಾಮಿಲಿ ಜೊತೆಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೊ ನೋಡಿ ಕಿಚ್ಚ ಫ್ಯಾನ್ಸ್ ಫುಲ್ ಖುಷಿಯಾಗಿದ್ದು, ಅಪ್ಪ-ಮಗಳ ಜೋಡಿ ಸೂಪರ್.. ನಮ್ಮ ಹೃದಯ ಕದ್ದು ಬಿಟ್ರಿ ಎಂದು ಕಾಮೆಂಟ್ ಮಾಡಿದ್ದಾರೆ.

ಸಾನ್ವಿ ಬ್ಲ್ಯಾಕ್ ಟಾಪ್ ಜೊತೆಗೆ ಬ್ಲ್ಯಾಕ್ ಆಂಡ್ ವೈಟ್ ಓವರ್ ಕೋಟ್ ಧರಿಸಿದ್ದು, ಜೀನ್ಸ್ ಧರಿಸಿದ್ದಾರೆ, ಕಿಚ್ಚ ಸುದೀಪ್ ಕೂಡ ಬ್ಲ್ಯಾಕ್ ಹೂಡಿ ಧರಿಸಿ ಮಗಳ ಜೊತೆಗೆ ಪೋಸ್ ಕೊಟ್ಟಿದ್ದಾರೆ. ಮತ್ತೆರಡು ಫೋಟೊಗಳಲ್ಲಿ ಪ್ರಿಯಾ ಸುದೀಪ್ ಸೇರಿ ಮತ್ತಿತರರನ್ನು ಕಾಣಬಹುದು. 

ಇನ್ನು ಸುದೀಪ್ ಚಾಕಲೇಟ್ ಬಾಯ್ ಲುಕ್ ಕೂಡ ಅಭಿಮಾನಿಗಳ ಮನ ಗೆದ್ದಿದೆ. ಹೂಡಿ ಧರಿಸಿ, ಕನ್ನಡಕ ಹಾಕಿ, ಸಿಂಪಲ್ ಆಗಿ ಒಂದು ಸ್ಮೈಲ್ ಕೊಟ್ಟಿದ್ದು, ಈ ನಗುವಿಗೆ ಜನ ಫಿದಾ ಆಗಿದ್ದಾರೆ. 

ಸಾನ್ವಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡದಿದ್ದರೂ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಈಗಾಗಲೇ ಹಾಡುಗಳ ಮೂಲಕ ಗಮನ ಸೆಳೆದಿರುವ ಸಾನ್ವಿ, ಕಿಚ್ಚ ಸೋದರಳಿಯ ಸಂಚಿತ್ ಸಿನಿಮಾಗೂ ಹಾಡು ಕೂಡ ಹಾಡಿದ್ದಾರೆ. 

ಇದನ್ನೂ ಓದಿ : http://ಝೈದ್ ಖಾನ್-ರಚಿತಾ ರಾಮ್ ನಟನೆಯ “ಕಲ್ಟ್” ಸಿನಿಮಾದ ಜೊತೆ ಕೈ ಜೋಡಿಸಿದ ಪ್ರತಿಷ್ಠಿತ KVN ಸಂಸ್ಥೆ!

Btv Kannada
Author: Btv Kannada

Leave a Comment

Read More

Read More