ಬೆಳ್ಳಿಗೆ ಕಾಂಪೀಟ್ ಮಾಡಿದ್ದ ಬೆಳ್ಳುಳ್ಳಿ ದರ ದಿಢೀರ್ ಕುಸಿತ – ಕೆಜಿಗೆ ಎಷ್ಟು ಗೊತ್ತಾ?

ಎರಡು ತಿಂಗಳ ಹಿಂದೆ ಅಕ್ಷರಶಃ ಗಗನಕ್ಕೇರಿ ಗ್ರಾಹಕರಿಗೆ ಸಂಕಷ್ಟ ಸೃಷ್ಟಿಸಿದ್ದ ಬೆಳ್ಳುಳ್ಳಿ ದರ ಈಗ ಭಾರೀ ಪ್ರಮಾಣದಲ್ಲಿ ಕುಸಿದಿದ್ದು, ಗ್ರಾಹಕರಲ್ಲಿ ಮಂದಹಾಸ ಮೂಡಿಸಿದೆ.

ಕಳೆದ 3-4 ತಿಂಗಳಲ್ಲಿ ಗರಿಷ್ಠ 500 ರೂ. ವರೆಗೂ ಏರಿಕೆ ಕಂಡಿದ್ದ ಪ್ರಥಮ ದರ್ಜೆ ಬೆಳ್ಳುಳ್ಳಿ ಗ್ರಾಹಕರ ನಿದ್ದೆಗೆಡಿಸಿತ್ತು. ಎರಡನೇ ದರ್ಜೆ ಬೆಳ್ಳುಳ್ಳಿ ಸಹ ಸರಾಸರಿ ಕೆಜಿಗೆ 400 ರೂ. ತಲುಪಿತ್ತು. ಹೀಗಾಗಿ ಮಧ್ಯಮ ಹಾಗೂ ಬಡವರ ಅಡುಗೆ ಮನೆಗಳಲ್ಲಿ ಬೆಳ್ಳುಳ್ಳಿ ಒಗ್ಗರಣೆ ಘಾಟು ಮರೆಯಾಗಿತ್ತು.

ಈಗ ಮಾರುಕಟ್ಟೆಗೆ ಹೊಸ ಬೆಳ್ಳುಳ್ಳಿ ಯಥೇಚ್ಛವಾಗಿ ಬರುತ್ತಿದ್ದು, ಬೆಳ್ಳುಳ್ಳಿ ದರ ಅರ್ಧಕ್ಕೆ ಅರ್ಧ ಕುಸಿದಿದೆ. ಸಗಟು ಮಾರುಕಟ್ಟೆಯಲ್ಲಿ ಉತ್ತಮ ದರ್ಜೆ ಬೆಳ್ಳುಳ್ಳಿ ಕೆಜಿಗೆ 120ರಿಂದ 150 ರೂ. ಖರೀದಿಯಾಗುತ್ತಿದೆ. ಇನ್ನು ಎರಡನೇ, ಮೂರನೇ ದರ್ಜೆ ಬೆಳ್ಳುಳ್ಳಿ ಕೆಜಿ.ಗೆ 70-80 ರೂ.ಗಳಿಗೆ ಖರೀದಿಯಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಸರಾಸರಿ 120ರಿಂದ 200 ರೂ.ಗಳಿಗೆ ಬೆಳ್ಳುಳ್ಳಿ ಮಾರಾಟವಾಗುತ್ತಿದೆ.

ಬೆಳ್ಳುಳ್ಳಿ ದರ ಗಗನಕ್ಕೇರಿದಾಗ ಹೊಟೇಲ್ ಮಾಲಕರು ತತ್ತರಿಸಿ ಹೋಗಿದ್ದರು. ಸದ್ಯ ದರ ಇಳಿಕೆಯಾಗಿರುವುದು ಎಲ್ಲರಲ್ಲಿಯೂ ಸಂತಸ ತಂದಿದೆ.

ಇದನ್ನೂ ಓದಿ : http://ನಟೋರಿಯಸ್ ರೌಡಿಶೀಟರ್ ಮೊಹಮ್ಮದ್ ಅಕ್ರಂ ಗೂಂಡಾ ಕಾಯ್ದೆಯಡಿ ಬಂಧನ – ಕಲಬುರಗಿ ಜೈಲಿಗೆ ಶಿಫ್ಟ್!

Btv Kannada
Author: Btv Kannada

Leave a Comment

Read More