ದೆಹಲಿ : ಲೋಕಸಭಾ ಚುನಾವಣೆ ಸಮೀಪದಲ್ಲಿ ಅನುದಾನ ಹಂಚಿಕೆ ವಿಚಾರವಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಡುವಿನ ಫೈಟ್ ಇದೀಗ ಅಂತಿಮ ಘಟ್ಟ ತಲುಪಿದೆ.
ಇಂದು ಬೆಳಗ್ಗೆ 11 ಗಂಟೆಗೆ ದೆಹಲಿಯ ಜಂತರ್‌ಮಂತರ್‌ನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಎಂಎಲ್‌ಸಿಗಳು, ಸಂಸದರು, ಸಚಿವರು ಸೇರಿ 136 ಶಾಸಕರೂ ಪ್ರತಿಭಟನೆ ನಡೆಸಲಿದ್ದಾರೆ.
ಇತಿಹಾಸದಲ್ಲಿ ಇದೇ ಮೊದಲ ಬಾರಿ ಸರ್ಕಾರದಿಂದಲೇ ಹೋರಾಟ ನಡೆಯಲಿದೆ. ಈಗಾಗಲೇ ಕಾಂಗ್ರೆಸ್ ಶಾಸಕರು, ಮುಖಂಡರು ದೆಹಲಿಯಲ್ಲಿದ್ದು, ಸಿಎಂ ಡಿಸಿಎಂ ಜತೆಗೆ ಹಿರಿಯ ಸಚಿವರಾದ ಡಾ.ಜಿ.ಪರಮೇಶ್ವರ್, ಹೆಚ್.ಕೆ.ಪಾಟೀಲ್, ಕೆ.ಹೆಚ್.ಮುನಿಯಪ್ಪ, ಕೆ.ಜೆ.ಜಾರ್ಜ್, ಹೆಚ್.ಸಿ.ಮಹಾದೇವಪ್ಪ, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ್ ಸೇರಿದಂತೆ ಎಲ್ಲ ಸಚಿವರೂ ದೆಹಲಿಯಲ್ಲಿದ್ದಾರೆ.
ಈ ಪ್ರತಿಭಟನೆಗೆ ಕಾಂಗ್ರೆಸ್ನ ರಾಜ್ಯಸಭೆ ಸದಸ್ಯರು ಸೇರಿ ಎಲ್ಲರಿಂದಲೂ ಸಾಥ್ ಸಿಕ್ಕಿದ್ದು, ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್ನ ದೆಹಲಿ ಚಲೋ ಶುರುವಾಗಲಿದೆ. ಒಂದು ವರ್ಷಕ್ಕೆ ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ 1.87 ಲಕ್ಷ ಕೋಟಿ ನಷ್ಟ, ಬರೋಬ್ಬರಿ 62 ಸಾವಿರ ಕೋಟಿ ರೂ.ನಷ್ಟು ತಾರತಮ್ಯ ಎಂದು ಆರೋಪ ಕೇಳಿಬಂದಿದೆ.
ಕಾಂಗ್ರೆಸ್ ಪ್ರೊಟೆಸ್ಟ್ ಯಾಕೆ..?
- ಕರ್ನಾಟಕಕ್ಕೆ ಒಂದು ವರ್ಷದಲ್ಲಿ 1.87 ಕೋಟಿ ತೆರಿಗೆ ನಷ್ಟ
- 4.32 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿ ಕೊಟ್ಟರೂ ಸರಿಯಾದ ಪಾಲಿಲ್ಲ
- ತೆರಿಗೆ ಹಣ ಹಂಚಿಕೆಯಲ್ಲಿ ತಾರತಮ್ಯ ಆಗ್ತಾ ಇದೆ
- ಭದ್ರಾ ಮೇಲ್ದಂಡೆಗೆ ಘೋಷಿಸಿದ್ದ 5300 ಕೋಟಿ ರಿಲೀಸ್ ಆಗಿಲ್ಲ
- ಮಹದಾಯಿ ಯೋಜನೆಗೂ ಪರಿಸರ ಅನುಮತಿ ಕೊಟ್ಟಿಲ್ಲ
- ಕೇಂದ್ರ ತಂಡ ಭೇಟಿ ಕೊಟ್ಟರೂ ಬರ ಪರಿಹಾರ ರಿಲೀಸ್ ಆಗಿಲ್ಲ
- ಪ್ರವಾಹ ಸಂದರ್ಭದಲ್ಲೂ ನಮಗೆ ಕೇಂದ್ರ ಪರಿಹಾರ ಸಿಕ್ಕಿಲ್ಲ
- ನಾವು 100 ತೆರಿಗೆ ಕಟ್ಟಿದರೆ 12 ರೂ. ಪಾತ್ರ ವಾಪಸ್ ಬರ್ತಾ ಇದೆ
- ಕೇಂದ್ರ ಬಜೆಟ್ ಗಾತ್ರ ಹೆಚ್ಚಿದರೂ ಕರ್ನಾಟಕದ ಪಾಲು ಡಬಲ್ ಆಗಿಲ್ಲ
- ಮೇಕೆದಾಟು ಯೋಜನೆಗೂ ಕೇಂದ್ರ ಅನುಮತಿ ಕೊಡ್ತಾ ಇಲ್ಲ
ಇದನ್ನೂ ಓದಿ : ಬೆಂಗಳೂರಿನಲ್ಲಿ ಮನೆಗೆ ಎಂಟ್ರಿ ಕೊಟ್ಟು ಯುವಕನ ಮೇಲೆ ಫೈರಿಂಗ್ : ನಿವೃತ್ತ ಮಿಲಿಟರಿ ಅಧಿಕಾರಿ ಅರೆಸ್ಟ್..!