ಬೆಂಗಳೂರು : ಇತ್ತೀಚೆಗೆ ಬೆಂಗಳೂರಿನ ಕೆಆರ್ಪುರಂನಲ್ಲಿ ಮಗನೇ ತಾಯಿಯನ್ನು ಕೊಂದ ಪ್ರಕರಣ ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹೌದು.. ತಾಯಿಯನ್ನು ಕೊಂದಿದ್ದು ಮಗ ಅಲ್ಲ ಅಪ್ಪ ಅನ್ನೊ ಸತ್ಯ ಬೆಳಕಿಗೆ ಬಂದಿದೆ.
ನೇತ್ರಾ ಎಂಬಾಕೆಗೆ ಹೊಡೆದಿದ್ದ ರಾಡ್ನ್ನು FSL ಪರೀಕ್ಷೆಗೆ ಕಳಿಸಿದಾಗ ಅಪ್ಪ ಮತ್ತು ಮಗ ಇಬ್ಬರ ಫಿಂಗರ್ ಪ್ರಿಂಟ್ ಪತ್ತೆಯಾಗಿತ್ತು. ಈ ವೇಳೆ ನಾನೇ ಕೊಂದೆ ಎಂದು ಪೊಲೀಸರ ಮುಂದೆ ಮಗ ಶರಣಾಗಿದ್ದ. ಫಿಂಗರ್ ಪ್ರಿಂಟ್ ಪತ್ತೆ ನಂತರ ನೇತ್ರಾ ಪತಿಯನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು, ಈ ವೇಳೆ ಪತಿ ಚಂದ್ರಪ್ಪ ಕೊಲೆ ರಹಸ್ಯ ಬಾಯಿಬಿಟ್ಟಿದ್ದಾನೆ.
ನನ್ನ ಪತ್ನಿಗೆ ಅಕ್ರಮ ಸಂಬಂಧ, ಕುಡಿತದ ಚಟ ಇತ್ತು ಅಂತಾ ಆರೋಪ ಮಾಡಿದ್ದಾನೆ. ಕೆಲವೊಮ್ಮೆ 2-3 ದಿನಗಳ ಕಾಲ ಮನೇಗೆ ಬರ್ತಾ ಇರಲಿಲ್ಲ, ಊಟ ಇಲ್ಲದೆ ಉಪವಾಸ ಇರ್ತಿದ್ವಿ, ಕೇಳಿದ್ರೆ ಅವಾಜ್ ಹಾಕ್ತಿದ್ದಳು. ಹೀಗಾಗಿ ಮಗನ ಜೊತೆ ಸೇರಿ ಕೊಲೆ ಮಾಡಲು ನಿರ್ಧರಿಸಿದ್ದೆ, ನನಗೆ ವಯಸ್ಸಾಗಿದೆ ಅಂತಾ ಅವನೇ ಪೊಲೀಸರ ಮುಂದೆ ಶರಣಾದ. ತಂದೆ ಜೈಲಿಗೆ ಹೋಗೋದು ಬೇಡ ಅಂತಾ ಮೈಮೇಲೆ ಎಳೆದುಕೊಂಡ ಎಂದು ನೇತ್ರಾ ಪತಿ ಬಾಯಿಬಿಟ್ಟಿದ್ದಾನೆ.
ತಂದೆ ರಾಡ್ನಿಂದ ಹೊಡೆದ ಬಳಿಕ ತಾಯಿ ನೇತ್ರಾ ಕುಸಿದು ಬಿದ್ದಿದ್ದಳು. ಸತ್ತಿರೋದು ಕನ್ಫರ್ಮ್ ಆದ ಬಳಿಕ ಚಂದ್ರಪ್ಪ ಅಲ್ಲಿಂದ ಎಸ್ಕೇಪ್ ಆಗಿದ್ದ. ಇದೀಗ ಮಗನ ಜೊತೆ ಪತಿ ಚಂದ್ರಪ್ಪ ಕೂಡ ಕೊಲೆಯಲ್ಲಿ ಭಾಗಿ ಅನ್ನೋದು ಗೊತ್ತಾಗಿದೆ.
ಇದನ್ನೂ ಓದಿ : ಮದುವೆಯಾಗೋದಾಗಿ ನಂಬಿಸಿ ಸ್ಟಾರ್ ಆಟಗಾರ್ತಿ ಮೇಲೆ ಅತ್ಯಾಚಾರ ಆರೋಪ : ಇಂಡಿಯನ್ ಹಾಕಿ ಟೀಂ ಪ್ಲೇಯರ್ ವಿರುದ್ಧ FIR..!