ಕನ್ನಡ ಕಿರುತೆರೆಯಲ್ಲಿ ಬಿಗ್ಬಾಸ್ ಶೋ ದಾಖಲೆಗಳ ಮೇಲೆ ದಾಖಲೆಗಳನ್ನು ಸೃಷ್ಟಿಸಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಹಲವು ದಾಖಲೆಗಳನ್ನು ಬರೆದಿತ್ತು. ಇದೀಗ ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಫಿನಾಲೆ ಟಿಆರ್ಪಿ ಹೊರ ಬಿದ್ದಿದ್ದು, ಟಿಆರ್ಪಿ ವಿಚಾರದಲ್ಲಿ ಫಿನಾಲೆ ಎಪಿಸೋಡ್ ದಾಖಲೆ ಬರೆದಿದೆ.
ಬಿಗ್ ಬಾಸ್ ಶನಿವಾರದ ಎಪಿಸೋಡ್ 9.9 ಟಿವಿಆರ್ ಪಡೆದರೆ ಭಾನುವಾರದ ಎಪಿಸೋಡ್ 13.7 ಟಿವಿಆರ್ ಪಡೆದುಕೊಂಡಿದೆ. ಈ ಮೂಲಕ ಈ ರಿಯಾಲಿಟಿ ಶೋ ದಾಖಲೆಯ ಟಿಆರ್ಪಿ ಪಡೆದುಕೊಂಡಿದೆ. ಕಳೆದ ಸೀಸನ್ಗಿಂತ ಈ ಸೀಸನ್ ಉತ್ತಮ ಟಿಆರ್ಪಿ ಪಡೆದು ಸೀಸನ್ನ ಕೊನೆಗೊಳಿಸಿದೆ.
ಕಿಚ್ಚ ಸುದೀಪ್ ಅವರು ನಡೆಸಿಕೊಟ್ಟ ಫಿನಾಲೆ ಎಪಿಸೋಡ್ನಲ್ಲಿ ಹನುಮಂತ ಲಮಾಣಿ ಅವರು ಕಪ್ ಗೆದ್ದರೆ ತ್ರಿವಿಕ್ರಂ ಅವರು ರನ್ನರ್ ಅಪ್ ಆದರು. ಈ ಎಪಿಸೋಡ್ನ ಸಾಕಷ್ಟು ಸಂಖ್ಯೆಯಲ್ಲಿ ವೀಕ್ಷಣೆ ಮಾಡಲಾಗಿದೆ.
ಧಾರಾವಾಹಿಗಳಲ್ಲಿ ನೋಡೋದಾದ್ರೆ ‘ಶ್ರಾವಣಿ ಸುಬ್ರಮಣ್ಯ’ ಟಿಆರ್ಪಿಯಲ್ಲಿ ಮೊದಲ ಸ್ಥಾನದಲ್ಲಿ ಇದೆ. ಈ ಮೊದಲು ಎರಡು ಹಾಗೂ ಮೂರನೇ ಸ್ಥಾನದಲ್ಲಿ ಇರುತ್ತಿದ್ದ ಈ ಧಾರಾವಾಹಿ ಈಗ ಮೊದಲ ಸ್ಥಾನ ಪಡೆದುಕೊಂಡಿದೆ ಅನ್ನೋದು ವಿಶೇಷ.
ಇನ್ನು ಇತ್ತೀಚೆಗೆ ಪ್ರಸಾರ ಆರಂಭಿಸಿರೋ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಬ್ಲಾಕ್ಬಸ್ಟರ್ ಎನಿಸಿಕೊಂಡಿದೆ. ಈ ಧಾರಾವಾಹಿ, ನಗರ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದಿದೆ. ಓಪನಿಂಗ್ ವೀಕ್ನಲ್ಲಿ ಇಷ್ಟು ಒಳ್ಳೆಯ ಟಿಆರ್ಪಿ ಪಡೆದುಕೊಂಡಿದ್ದು ತಂಡಕ್ಕೆ ಖುಷಿ ನೀಡಿದೆ. ಮೂರನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’, ನಾಲ್ಕನೇ ಸ್ಥಾನದಲ್ಲಿ ‘ಅಣ್ಣಯ್ಯ’ ಧಾರಾವಾಹಿ ಇದೆ. ಕಲರ್ಸ್ನಲ್ಲಿ ಆರಂಭ ಆದ ‘ವಧು’, ‘ಅಣ್ಣಯ್ಯ’, ‘ನೂರು ಜನ್ಮಕು’ ಧಾರಾವಾಹಿಗಳು ಸಾಧಾರಣ ಟಿಆರ್ಪಿ ಪಡೆದುಕೊಂಡಿವೆ.
ಇದನ್ನೂ ಓದಿ : http://ದಯವಿಟ್ಟು ಕ್ಷಮಿಸಿ.. ಈ ವಿಚಾರ ಇಲ್ಲಿಗೆ ಬಿಡಿ.. ‘ಬಿಗ್’ ವಿನ್ನರ್ ಹನುಮಂತು ಅವಮಾನಿಸಿದ್ದಕ್ಕೆ ಹಂಸಾ ಕ್ಷಮೆಯಾಚನೆ!









