Download Our App

Follow us

Home » ರಾಜ್ಯ » ಪರಪ್ಪನ ಅಗ್ರಹಾರಕ್ಕೆ 6 ಮಂದಿ ನಕ್ಸಲರು ಶಿಫ್ಟ್ – ನ್ಯಾಯಾಂಗ ಬಂಧನ ವಿಧಿಸಿದ NIA ವಿಶೇಷ ಕೋರ್ಟ್!

ಪರಪ್ಪನ ಅಗ್ರಹಾರಕ್ಕೆ 6 ಮಂದಿ ನಕ್ಸಲರು ಶಿಫ್ಟ್ – ನ್ಯಾಯಾಂಗ ಬಂಧನ ವಿಧಿಸಿದ NIA ವಿಶೇಷ ಕೋರ್ಟ್!

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲೇ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ಮಂದಿ ನಕ್ಸಲರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮುಂಡಗಾರು ಲತಾ, ಸುಂದ್ರಿ ಕೊತ್ಲೂರು, ವನಜಾಕ್ಷಿ ಬಾಳೆಹೊಳೆ, ಜಿಶಾ, ವಸಂತ್, ಮಾರೆಪ್ಪ ಅರೋಲಿ ಸೇರಿ 6 ಮಂದಿ ನಕ್ಸಲರಿಗೆ ನ್ಯಾಯಾಂಗ ಬಂಧನ ವಿಧಿಸಿ ಎನ್​​ಐಎ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ.

ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಬೆಂಗಳೂರಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ 6 ಮಂದಿ ನಕ್ಸಲರು ಶಸ್ತ್ರಾಸ್ತ್ರ ತ್ಯಜಿಸಿ ಶರಣಾದರು.

 

ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಶರಣಾಗತಿಯಾದ ಆರು ಮಂದಿ ನಕ್ಸಲರನ್ನು NIA ವಿಶೇಷ ಕೋರ್ಟ್​ಗೆ ಹಾಜರುಪಡಿಸಿದ್ದರು. ಇದೀಗ ಮುಂಡಗಾರು ಲತಾ, ಸುಂದ್ರಿ ಕೊತ್ಲೂರು, ವನಜಾಕ್ಷಿ ಬಾಳೆಹೊಳೆ, ಜಿಶಾ, ವಸಂತ್, ಮಾರೆಪ್ಪ ಅರೋಲಿ ಸೇರಿ 6 ಮಂದಿ ನಕ್ಸಲರಿಗೆ NIA ವಿಶೇಷ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಆರು ಜನ ನಕ್ಸಲರನ್ನು ಪೊಲೀಸರು ಬಿಗಿ ಭದ್ರತೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಕರೆದುಕೊಂಡು ಹೋಗಲಿದ್ದಾರೆ. 6 ಮಂದಿ ನಕ್ಸಲರು ಸೆಂಟ್ರಲ್​ ಜೈಲಿನಲ್ಲಿ ಇರಲಿದ್ದಾರೆ.

ಇದನ್ನೂ ಓದಿ : ಕನ್ನಡದ ಹೆಸರಾಂತ ನಟನಿಗೆ ಒಲಿದ ಗೌರವ – ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ಕುಮಾರ್ ರಾಯಭಾರಿ!

Leave a Comment

DG Ad

RELATED LATEST NEWS

Top Headlines

ವೈದ್ಯಕೀಯ ಕ್ಷೇತ್ರದಲ್ಲಿ 4 ದಶಕಗಳ ನಿಸ್ವಾರ್ಥ ಸೇವೆ – ಪ್ರತಿಷ್ಠಿತ API ಪಿಜಿಶಿಯನ್ ಅವಾರ್ಡ್​ಗೆ ಭಾಜನರಾದ ಡಾ.ಚಂದ್ರಕಾಂತ ಗುದಗೆ!

ಬೀದರ್ : ಬೀದರ್ ನಗರದ ಪ್ರಸಿದ್ಧ ‘ಗುದಗೆ’ ಆಸ್ಪತ್ರೆ ಸಂಸ್ಥಾಪಕರಾದ ಖ್ಯಾತ ಹೃದ್ರೋಗ ತಜ್ಞ ಡಾ.ಚಂದ್ರಕಾಂತ ಗುದಗೆ ಅವರು ಪ್ರತಿಷ್ಠಿತ API ಪಿಜಿಶಿಯನ್ ಅವಾರ್ಡ್​ಗೆ ಭಾಜನರಾಗಿದ್ದಾರೆ. ಇತ್ತೀಚೆಗೆ

Live Cricket

Add Your Heading Text Here