ಬೆಂಗಳೂರು : ಹೊಸ ವರ್ಷದ ಆರಂಭದಲ್ಲೇ ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ರೀಲ್ಸ್ ಸ್ಟಾರ್ ಸೋನು ಶ್ರೀನಿವಾಸಗೌಡ ನಾಡಿನ ಜನತೆಗೆ ಗೋಲ್ಡನ್ ಆಪರ್ಚುನಿಟಿ ಕಲ್ಪಿಸಿದ್ದಾರೆ. ತನ್ನ ಜೊತೆಯೇ ಇರಬಹುದಾದ ಬಹುದೊಡ್ಡ ಕೆಲಸದ ಆಫರ್ ನೀಡಿದ್ದಾರೆ. ಚೆಲುವೆ ಸೋನು ಶ್ರೀನಿವಾಸಗೌಡ ಅವರ ಜೊತೆಯೇ 24*7 ಇರಬಹುದಾದ ಕೆಲಸದ ಆಫರ್ ನೀಡಿದ್ದು ಯಾರಿಗುಂಟು ಯಾರಿಗಿಲ್ಲ ಅನ್ನೋ ತರ ಆಗಿದೆ.
ಸೋನು ಶ್ರೀನಿವಾಸಗೌಡ ಅವರ ಮನೆಗೆ ಕೆಲಸ ಮಾಡಲು ಕೆಲಸಗಾರರೊಬ್ಬರು ಬೇಕಾಗಿದ್ದಾರೆ. ಆ ಕೆಲಸಗಾರರು 24*7 ಕೂಡ ಸೋನು ಶ್ರೀನಿವಾಸಗೌಡ ಅವರ ಮನೆಯಲ್ಲೇ ಇರಬೇಕಾಗುತ್ತದೆ. ದಿನದಲ್ಲಿ 3 ಹೊತ್ತು ಅಡುಗೆ ಮಾಡಬೇಕು.. ಮುದ್ದು ನಾಯಿ ಸೇರಿ ಪ್ರೀತಿಯ ಪ್ರಾಣಿಗಳನ್ನು ಹೊರಗೆ ಸುತ್ತಾಡಿಸಬೇಕು ಅದಕ್ಕೆ ಎಲ್ಲಾ ರೀತಿಯಲ್ಲೂ ವ್ಯವಸ್ಥೆ ಮಾಡಿ ಚೆನ್ನಾಗಿ ನೋಡಿಕೊಳ್ಳಬೇಕು.
ಕೆಲಸಗಾರರಿಗೆ 15-20 ದಿನಗಳಿಗೊಮ್ಮೆ ತಮ್ಮ ಊರಿಗೆ ಹೋಗಲು ಅವಕಾಶ ಕೂಡ ಇದೆ. ಸೋನು ಶ್ರೀನಿವಾಸಗೌಡ ಅವರು ಒಕ್ಕಲಿಗ ಸಮುದಾಯದಾಗಿರುವುದರಿಂದ ಅವರ ಮನೆ ಕೆಲಸಕ್ಕೆ ಗೌಡ ಸಮುದಾಯದವರೇ ಬೇಕಂತೆ. ಕಾರಣ ಸೋನು ಶ್ರೀನಿವಾಸಗೌಡ ಅವರು ಸಕ್ಕರೆ ನಾಡು ಮಂಡ್ಯ ಜಿಲ್ಲೆ ಮೂಲದವರು. ಸೋನು ಯಾವುದೇ ಕಾರಣಕ್ಕೂ ಊಟದ ವಿಷಯದಲ್ಲಿ ಕಾಂಪ್ರಮೈಸ್ ಆಗೋದಿಲ್ಲವಂತೆ. ಹಾಗಾಗಿ ಮಂಡ್ಯ ಸ್ಟೈಲ್ ಅಡುಗೆ, ಊಟ ಬೇಕಾಗಿದೆ ಎಂದು ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಮಾಡುವ ಮೂಲಕ ಕೆಲಸದ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೆಲಸ ಮಾಡಲು ಆಸಕ್ತಿ ಇರೋರು ಅದರಲ್ಲೂ ಸೋನು ಶ್ರೀನಿವಾಸಗೌಡ ಅವರ ಜೊತೆಯೇ ವರ್ಷದ 365 ದಿನ, ವಾರದ 7 ದಿನ ಇರಬೇಕು ಅನ್ನೋ ಆಸೆ.. ಆಕಾಂಕ್ಷೆ ಇರೋರು ಸೋನು ಶ್ರೀನಿವಾಸಗೌಡ ಅವರ ಫೋನ್ ನಂಬರ್ ಹಾಗೂ ಈ-ಮೇಲ್ಗೆ ಅರ್ಜಿ ಸಲ್ಲಿಸಿ ಕೆಲಸದ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.
ಮನೆಗೆ ಕೆಲಸ ಮಾಡಲು ಕೆಲಸಗಾರರು ತುಂಬಾ ಎಮೆರ್ಜೆನ್ಸಿ ಇದ್ದು 2-3 ದಿನಗಳಲ್ಲಿ ಸೋನು ಶ್ರೀನಿವಾಸಗೌಡ ಅವರನ್ನು ಸಂಪರ್ಕ ಮಾಡಿದ್ರೆ ನಿಮ್ಮ ಕೆಲಸದ ಆಸೆ ಖಂಡಿತ ಈಡೇರುತ್ತದೆ. ಕೆಲಸ ಮಾಡುವ ಆಸಕ್ತಿ ಇರೋರು ತಮ್ಮ ಫೋನ್ ನಂಬರ್ ಮೂಲಕ ಅವರನ್ನು ಸಂಪರ್ಕಿಸಿದರೆ ಸಂಬಳದ ವಿಚಾರ, ಬೇರೆ ಬೇರೆ ಸವಲತ್ತುಗಳು ಸಹಿತ ಎಲ್ಲವನ್ನೂ ಸೋನು ಶ್ರೀನಿವಾಸಗೌಡ ತಿಳಿಸಲಿದ್ದಾರೆ.
ಇನ್ನೂ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ವಿವಿಧ ಡ್ಯಾನ್ಸ್ ರೀಲ್ಸ್ ಹಾಗೂ ಪ್ರೊಮೋಷನ್ ಮಾಡುತ್ತಲೇ ಸುದ್ದಿಯಾದವರು ಸೋನು ಗೌಡ. ನಂತರ ಬಿಗ್ ಬಾಸ್ ಸೀಸನ್-9 ರಲ್ಲಿ ಕಾಣಿಸಿಕೊಂಡು ಮತ್ತಷ್ಟು ಜನಪ್ರಿಯತೆ ಪಡೆದುಕೊಂಡರು. ಜೊತೆಗೆ ಅಭಿಮಾನಿಗಳ ಬಳಗವನ್ನು ಸಹ ಹೆಚ್ಚಿಸಿಕೊಂಡಿದ್ದಾರೆ. ಹಾಟ್ ರೀಲ್ಸ್ ಮೂಲಕ ಪಡ್ಡೆ ಹುಡುಗರ ಕನಸಿನ ಮಹಾ ರಾಣಿಯಾಗಿದ್ದಾರೆ.
ಇದನ್ನೂ ಓದಿ : ಕೈಯಲ್ಲಿ ಮಚ್ಚು ಹಿಡಿದು ಮಾಸ್ ಅವತಾರ ತಾಳಿದ ‘ಅಭಿನಯ ಚತುರ’ – ‘ದಿ ರೈಸ್ ಆಫ್ ಅಶೋಕ’ ಮೋಷನ್ ಪೋಸ್ಟರ್ ರಿಲೀಸ್!