Download Our App

Follow us

Home » ಸಿನಿಮಾ » ಸಿನಿಮಾ ರಂಗದಲ್ಲಿ ಕೆಲಸ ಮಾಡುವ ಕನಸು ಇದ್ಯಾ ? – ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಸಂಸ್ಥೆಯಿಂದ ಉಚಿತ ತರಬೇತಿ!

ಸಿನಿಮಾ ರಂಗದಲ್ಲಿ ಕೆಲಸ ಮಾಡುವ ಕನಸು ಇದ್ಯಾ ? – ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಸಂಸ್ಥೆಯಿಂದ ಉಚಿತ ತರಬೇತಿ!

ಬೆಂಗಳೂರು : ಖ್ಯಾತ ನಿರ್ಮಾಪಕ ಟಿ.ಜಿ. ವಿಶ್ವಪ್ರಸಾದ್ ಅವರ ನೇತೃತ್ವದ ಪೀಪಲ್ ಮೀಡಿಯಾ ಫ್ಯಾಕ್ಟರಿ ಈಗಾಗಲೇ ಚಿತ್ರೋದ್ಯಮದಲ್ಲಿ ದಿಟ್ಟ ಹೆಜ್ಜೆ ಇರಿಸಿದೆ. ಗೂಢಚಾರಿ, ಕಾರ್ತಿಕೇಯ 2, ವೆಂಕಿ ಮಾಮಾ, ಓ ಬೇಬಿ ಮತ್ತು ಧಮಾಕಾದಂತಹ ಬ್ಲಾಕ್‌ಬಸ್ಟರ್ ಹಿಟ್‌ ಸಿನಿಮಾಗಳನ್ನು ನೀಡಿದೆ. ಈಗ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ಹೊಸ ಹೆಜ್ಜೆ ಇರಿಸಿದೆ.

ಶೈಕ್ಷಣಿಕ ರಂಗವೀಗ ಉದ್ಯಮವಾಗಿ ಬೆಳೆದು ನಿಂತಿದೆ. ಹಾಗಾಗಿ ಪೀಪಲ್‌ ಮೀಡಿಯಾ ಫ್ಯಾಕ್ಟರಿ ಉಚಿತವಾಗಿ ಸಿನಿಮಾ ತರಬೇತಿ ನೀಡುವ ಕೆಲಸಕ್ಕೆ ಇಳಿದಿದೆ. ಈ ತರಬೇತಿಯ ಮೂಲಕ ಪ್ರತಿಭಾನ್ವಿತರನ್ನು ಉದ್ಯಮಕ್ಕೆ ಪರಿಚಯಿಸುವ ಮತ್ತು ಇಂದಿನ ಯುವಕರಲ್ಲಿ ಆತ್ಮವಿಶ್ವಾಸವನ್ನು ತುಂಬುವ ಉದ್ದೇಶ ಈ ಸಂಸ್ಥೆಯದ್ದಾಗಿದೆ. ಅಂದಹಾಗೆ ಭಾರತದಲ್ಲಿ ಇದೇ ಮೊದಲ ಬಾರಿಗೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಆನ್‌ ಜಾಬ್‌ ಟ್ರೈನಿಂಗ್‌ ಸಿನಿಮಾ ಅಕಾಡೆಮಿ ತೆರೆದಿದೆ.

ಪೀಪಲ್‌ ಮೀಡಿಯಾ ಫ್ಯಾಕ್ಟರಿಯ ಅಧ್ಯಕ್ಷೆ ಟಿ.ಜಿ. ವಂದನಾ ಪ್ರಸಾದ್ ಅವರ ಮಾರ್ಗದರ್ಶನದೊಂದಿಗೆ PMFA ಉನ್ನತ ಗುಣಮಟ್ಟದ ತರಬೇತಿ ಸೌಲಭ್ಯಗಳನ್ನು ಒದಗಿಸುವ ಮೂಲಕ ಮತ್ತು ಮುಂದಿನ ಪೀಳಿಗೆಗೆ ಉಜ್ವಲ ಭವಿಷ್ಯಕ್ಕಾಗಿ ದಾರಿ ಮಾಡಿಕೊಡುವ ಮೂಲಕ ಹೊಸ ಹೆಜ್ಜೆ ಇರಿಸಿದೆ. ತರಬೇತಿಯಲ್ಲಿ ಮೊದಲ ದಿನದಿಂದಲೇ ವಿದ್ಯಾರ್ಥಿಗಳಿಗೆ ಸಿನಿಮಾ ಪ್ರಾಜೆಕ್ಟ್‌ಗಳಲ್ಲಿಯೇ ಕೆಲಸ ಮಾಡಲು ಅವಕಾಶ ನೀಡಲಾಗುತ್ತದೆ. ಇದಲ್ಲದೆ, ಆಯ್ಕೆಯಾದ ವಿದ್ಯಾರ್ಥಿಗಳು ಯಾವುದೇ ಶುಲ್ಕವಿಲ್ಲದೆ ಸಂಪೂರ್ಣವಾಗಿ ಉಚಿತ ಸಿನಿಮಾ ಕೋರ್ಸ್‌ಗಳನ್ನು ಪಡೆಯುತ್ತಾರೆ.

ರಾಜಾ ಸಾಬ್, ಗೂಢಚಾರಿ 2, ಮಿರೈ, ತೆಲುಸು ಕದ, ಜಾಟ್‌ ಮತ್ತು ಪಿನಾಕಾದಂತಹ ಅತ್ಯಾಕರ್ಷಕ ಸಿನಿಮಾ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುವ ಅವಕಾಶವಿದೆ. ಇದಷ್ಟೇ ಅಲ್ಲದೆ, ವೆಬ್ ಸರಣಿಗಳು, OTT ಸಿನಿಮಾ, ಮ್ಯೂಸಿಕ್‌ ಆಲ್ಬಮ್‌ಗಳು, YouTube ಕಂಟೆಂಟ್‌ ಮತ್ತು ಬಹುಭಾಷಾ ಪ್ರಾಜೆಕ್ಟ್‌ಗಳಲ್ಲಿಯೂ ಪೀಪಲ್‌ ಮೀಡಿಯಾ ಫ್ಯಾಕ್ಟರಿ ತೊಡಗಿಸಿಕೊಂಡಿದೆ.

ಪೀಪಲ್ ಮೀಡಿಯಾ ಫ್ಯಾಕ್ಟರಿ ಈಗಾಗಲೇ ಇಂಗ್ಲಿಷ್, ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಬಂಗಾಳಿ ಭಾಷೆಗಳಲ್ಲಿ ಪ್ರಾಜೆಕ್ಟ್‌ಗಳನ್ನು ನಿರ್ಮಾಣ ಮಾಡಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಭಾಷೆಗಳಿಗೆ ವಿಸ್ತರಿಸುವ ಯೋಜನೆಗಳನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಹಮ್ಮಿಕೊಂಡಿದೆ.

ಲಭ್ಯವಿರುವ ಕೋರ್ಸ್‌ಗಳು : ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ತರಬೇರಿ ಕೋರ್ಸ್‌ಗಳನ್ನು ನಡೆಸಲಾಗುವುದು. ನಟನೆ, ನಿರ್ದೇಶನ, ಸ್ಕ್ರಿಪ್ಟ್ ಬರವಣಿಗೆ, ಛಾಯಾಗ್ರಹಣ, ಸಂಕಲನ, ಕಲೆ, ಮೇಕಪ್, ವಸ್ತ್ರ ವಿನ್ಯಾಸ, ವರ್ಚುವಲ್ ನಿರ್ಮಾಣ ಮತ್ತು DI, ಲೈಟಿಂಗ್‌ ಸೇರಿ ಹಲವು ವಿಷಯಗಳ ಬಗ್ಗೆ ಕೋರ್ಸ್‌ಗಳು ಇರಲಿವೆ. ಸಿನಿಮಾ ರಂಗದಲ್ಲಿ ಭವಿಷ್ಯ ಕಾಣುವ, ಚಿತ್ರರಂಗದ ಪ್ರವೇಶಕ್ಕೆ ಕನಸು ಕಾಣುವವರಿಗೆ ಅದ್ಭುತ ಅವಕಾಶವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ನೀಡಿದೆ. ಈ ಮೂಲಕ ತಮ್ಮ ಸಿನಿಮಾ ಕನಸನ್ನು ನನಸಾಗಿಸಿಕೊಳ್ಳಬಹುದಾಗಿದೆ.

ಈಗಲೇ ಅರ್ಜಿ ಸಲ್ಲಿಸಿ.. ಗಮನಿಸಿ: ಸೀಮಿತ ಸೀಟುಗಳು ಮಾತ್ರ ಲಭ್ಯ ಇರಲಿವೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
ಪೀಪಲ್ ಮೀಡಿಯಾ ಫ್ಯಾಕ್ಟರಿ ಫಿಲ್ಮ್ ಅಕಾಡೆಮಿ
ಇಮೇಲ್: contact@pmffilmacademy.com
WhatsApp: +91 90322 57101

ಇದನ್ನೂ ಓದಿ : ‘ಹುಚ್ಚ’ನ ಪದ ಸ್ಪೂರ್ತಿಯಿಂದ “ತುರ್ರಾ” ಹಾಡು ಬರೆದ ಯೋಗರಾಜ್ ಭಟ್ – “ಮನದ ಕಡಲು” ಸಿನಿಮಾದಿಂದ ಮತ್ತೊಂದು ಹಾಡು ರಿಲೀಸ್!

Leave a Comment

DG Ad

RELATED LATEST NEWS

Top Headlines

ವೈದ್ಯಕೀಯ ಕ್ಷೇತ್ರದಲ್ಲಿ 4 ದಶಕಗಳ ನಿಸ್ವಾರ್ಥ ಸೇವೆ – ಪ್ರತಿಷ್ಠಿತ API ಪಿಜಿಶಿಯನ್ ಅವಾರ್ಡ್​ಗೆ ಭಾಜನರಾದ ಡಾ.ಚಂದ್ರಕಾಂತ ಗುದಗೆ!

ಬೀದರ್ : ಬೀದರ್ ನಗರದ ಪ್ರಸಿದ್ಧ ‘ಗುದಗೆ’ ಆಸ್ಪತ್ರೆ ಸಂಸ್ಥಾಪಕರಾದ ಖ್ಯಾತ ಹೃದ್ರೋಗ ತಜ್ಞ ಡಾ.ಚಂದ್ರಕಾಂತ ಗುದಗೆ ಅವರು ಪ್ರತಿಷ್ಠಿತ API ಪಿಜಿಶಿಯನ್ ಅವಾರ್ಡ್​ಗೆ ಭಾಜನರಾಗಿದ್ದಾರೆ. ಇತ್ತೀಚೆಗೆ

Live Cricket

Add Your Heading Text Here