Download Our App

Follow us

Home » ಸಿನಿಮಾ » ಹೊಸ ವರ್ಷದ ಆರಂಭದಲ್ಲೇ ಬಿಗ್ ಶಾಕ್​​.. ಸ್ಟಾರ್ ನಟನಿಗೆ ಅನಾರೋಗ್ಯ – ಫ್ಯಾನ್ಸ್ ಆತಂಕ.. ಹೆಲ್ತ್​ ಬುಲೆಟಿನ್​​​ನಲ್ಲಿ ಏನಿದೆ ?

ಹೊಸ ವರ್ಷದ ಆರಂಭದಲ್ಲೇ ಬಿಗ್ ಶಾಕ್​​.. ಸ್ಟಾರ್ ನಟನಿಗೆ ಅನಾರೋಗ್ಯ – ಫ್ಯಾನ್ಸ್ ಆತಂಕ.. ಹೆಲ್ತ್​ ಬುಲೆಟಿನ್​​​ನಲ್ಲಿ ಏನಿದೆ ?

ಚೆನ್ನೈ : ತಮಿಳು ನಟ ವಿಶಾಲ್‌ ಅವರು ಗಂಭೀರವಾದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆಯೇ ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ತಮಿಳು ಚಿತ್ರರಂಗದಲ್ಲಿ ವಿಶಾಲ್‌ ಫೇಮಸ್‌ ಆಗಿದ್ದಾರೆ. ಅಲ್ಲದೆ ಅವರ ಸಿನಿಮಾಗಳು ಫ್ಯಾಮಿಲಿ ಸೇರಿ ನೋಡುವಂತಹದ್ದೇ ಆಗಿದೆ. ನಟ ವಿಶಾಲ್‌ ಅವರು ಇತ್ತೀಚೆಗೆ ಮದಗಜರಾಜ ಚಿತ್ರದ ಪ್ರೀ -ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಿನಿಮಾ 12 ವರ್ಷಗಳ ಹಿಂದೆ ಚಿತ್ರೀಕರಣವಾಗಿತ್ತು.

ನಟ ವಿಶಾಲ್​ ಕೈ ಶೇಕ್​.. ಶೇಕ್​!
ನಟ ವಿಶಾಲ್​ ಕೈ ಶೇಕ್​.. ಶೇಕ್​!

ಕೆಲ ದಿನಗಳಿಂದ ನಟ ವಿಶಾಲ್ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿರಲಿಲ್ಲ. ಇದೀಗ ವಿಶಾಲ್​ ನಟಿರುವ,​ 12 ವರ್ಷಗಳ ಹಿಂದೆ ಚಿತ್ರೀಕರಣ ಮುಗಿಸಿದ್ದ  ಮದಗಜರಾಜ ಚಿತ್ರ ಈಗ ಥಿಯೇಟರ್​ನಲ್ಲಿ ಬಿಡುಗಡೆಯಾಗುತ್ತಿದೆ. ಸಂಕ್ರಾಂತಿ ಉಡುಗೊರೆಯಾಗಿ ಜನವರಿ 12 ರಂದು ಸಿನಿಮಾ ತೆರೆಗೆ ಬರಲಿದೆ. ಸಿನಿಮಾ ಪ್ರಚಾರದ ಅಂಗವಾಗಿ ಮದಗಜರಾಜ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹೀರೋ ವಿಶಾಲ್ ಕೂಡ ಭಾಗವಹಿಸಿದ್ದರು. ನಟ ವಿಶಾಲ್ ಅವರನ್ನು ನೋಡಿದ ಅಭಿಮಾನಿಗಳು ಬಿಚ್ಚಿಬಿದ್ದಿದ್ದಾರೆ.

ನಟ ವಿಶಾಲ್ ಕೈ ನಡುಗುತ್ತಿದೆ, ಮಾತು ತೊದಲುತ್ತಿದೆ : ತಮಿಳು ನಟ ವಿಶಾಲ್ ಅವರು ಗುರುತಿಸಲಾಗದಷ್ಟು ಬದಲಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನಲಾಗ್ತಿದೆ. ಸಿನಿಮಾ ಕುರಿತು ಮಾತಾಡಲು ಮೈಕ್​ ಹಿಡಿದ ನಟ ವಿಶಾಲ್​ ಕೈ ನಡುಗುತ್ತಿತ್ತು. ದೊಡ್ಡ ದೊಡ್ಡ ಡೈಲಾಗ್​ ಹೇಳ್ತಾ, ಚಟ-ಪಟ ಮಾತಾಡ್ತಿದ್ದ ನಟ ವಿಶಾಲ್​​, ಯಾಕೋ ಇವತ್ತಿನ ಕಾರ್ಯಕ್ರಮದಲ್ಲಿ ತೊದಲುತ್ತಿದ್ರು. ವಿಶಾಲ್ ಲುಕ್ ಬದಲಾಗಿತ್ತು. ವಿಶಾಲ್​ ನೋಡಿ ಶಾಕ್ ಆದ ಅಭಿಮಾನಿಗಳು ನಿಜಕ್ಕೂ ನಟನಿಗೆ ಏನಾಗಿದೆ ಅಂತ ಕಂಗಾಲಾಗಿದ್ದಾರೆ.

ಸಿನಿಮಾದ ಬಗ್ಗೆ ಮಾತನಾಡುವಾಗ ಅವರ ಕೈಗಳು ನಡಗುತ್ತಿರುವುದು ಹಾಗೂ ಮಾತನಾಡಲು ತೊದಲಿದ್ದಾರೆ. ಅಲ್ಲದೆ ತೀವ್ರವಾಗಿ ಆಯಾಸ ಹಾಗೂ ನಿಶಕ್ತರಾಗಿರುವಂತೆ ಇದೆ. ಅವರು ಸ್ಟೇಜ್‌ ಮೇಲೆ ಮಾತನಾಡುವುದಕ್ಕೆ ಕಷ್ಟಪಡುತ್ತಿರುವುದನ್ನು ನೋಡಿರುವ ನಿರೂಪಕರು ಸ್ಟೇಜ್‌ ಮೇಲೆ ಸಂವಾದವನ್ನು ಮಾಡುವಂತೆ ಕಾರ್ಯಕ್ರಮವನ್ನು ತುಸು ಬದಲಾಯಿಸಿದ್ದಾರೆ. ಅವರು ಕುಳಿತುಕೊಳ್ಳುವಾಗಲೂ ತಮಿಳಿನ ಇನ್ನೊಬ್ಬ ನಟರು ಸಹಾಯ ಮಾಡಿದ್ದಾರೆ.

ತಮ್ಮ ನೆಚ್ಚಿನ ನಾಯಕನಿಗೆ ಏನಾಯಿತು ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ನಟ ವಿಶಾಲ್ ಅವರು ತೀವ್ರ ಚಳಿ, ಜ್ವರ, ನೆಗಡಿಯಿಂದ ಬಳಲುತ್ತಿದ್ದಾರಂತೆ. ವೈರಲ್​ ಫೀವರ್ ಅವರನ್ನ ಕಾಡ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ ಎನ್ನಲಾಗ್ತಿದೆ. ವಿಶಾಲ್​ ಆರೋಗ್ಯ ಕುರಿತ ಹೆಲ್ತ್ ಬುಲೆಟಿನ್ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ. ಆದರೆ ಇದು ನಿಜವಾಗಿಯೂ ಜ್ವರವೇ ಅಥವಾ ಬೇರೆ ಏನಾದರೂ ಸಮಸ್ಯೆ ಇದೆಯೇ ಎಂದು ತಿಳಿಯಲು ವಿಶಾಲ್ ಪ್ರತಿಕ್ರಿಯೆಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ. ನಟ ವಿಶಾಲ್ ಶೀಘ್ರ ಗುಣಮುಖರಾಗಿ ಸಹಜ ಸ್ಥಿತಿಗೆ ಮರಳಲಿ ಎಂದು ಎಲ್ಲರೂ ಹಾರೈಸಿದ್ದಾರೆ.

2012ರಲ್ಲಿ ಸುಂದರ್ ಸಿ ನಿರ್ದೇಶನದ ವಿಶಾಲ್ ಅಭಿನಯದ ‘ಮದಗಜರಾಜ’ ಚಿತ್ರೀಕರಣವೂ ಅಷ್ಟೇ ವೇಗದಲ್ಲಿ ಮುಗಿದಿತ್ತು. ಇದೇ ವರ್ಷ ಚಿತ್ರ ತೆರೆಗೆ ಬರುವ ನಿರೀಕ್ಷೆ ಇತ್ತು. ಆದ್ರೆ ಬಿಡುಗಡೆ ಕಾರಣಾಂತರದಿಂದ ರಿಲೀಸ್ ಆಗಲಿಲ್ಲ. ವಿಶಾಲ್ ಜೊತೆ ಸಂತಾನಂ, ವರಲಕ್ಷ್ಮಿ, ಸತೀಶ್, ನಿತಿನ್ ಸತ್ಯ, ಸೋನುಸೂದ್, ಅಂಜಲಿ, ದಿವಂಗತ ನಟರಾದ ಮಣಿವಣ್ಣನ್, ಮನೋಬಾಲಾ, ಮೈಲಸ್ವಾಮಿ, ಚಿಟ್ಟಿಬಾಬು ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ. ‘ಮದಗಜರಾಜ’ ಚಿತ್ರವನ್ನು ಜೆಮಿನಿ ಫಿಲ್ಮ್ ಸರ್ಕ್ಯೂಟ್ ನಿರ್ಮಿಸಿದ್ದು, ವಿಜಯ್ ಆಂಟೋನಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಪಂಡೆಂ ಕೊಡಿ, ಪೊಗರು, ಭರಣಿ, ಪೂಜಾ, ಅಭಿಮನ್ಯುಡು, ಪತ್ತೇದಾರಿ, ಮಾರ್ಕ್ ಆಂಟನಿ, ಲಾಠಿ ಮುಂತಾದ ಸೂಪರ್ ಹಿಟ್ ಸಿನಿಮಾಗಳ ಮೂಲಕ ನಟ ವಿಶಾಲ್ ಪ್ರೇಕ್ಷಕರ ಮನಗೆದ್ದಿದ್ದಾರೆ.

ಇದನ್ನೂ ಓದಿ : ಬರೋಬ್ಬರಿ 22 ವರ್ಷಗಳ ಬಳಿಕ ನಟನೆಗಿಳಿದ ಸ್ಟಾರ್ ಪತ್ನಿ- ಆ್ಯಡ್​ ಶೂಟಿಂಗ್​​ನಲ್ಲಿ ಚೆಲುವೆ ಫುಲ್ ಬ್ಯುಸಿ!

Leave a Comment

DG Ad

RELATED LATEST NEWS

Top Headlines

“ಫಾರೆಸ್ಟ್”ಚಿತ್ರದ “ಪೈಸಾ ಪೈಸಾ ಪೈಸಾ” ಹಾಡಿಗೆ ಫ್ಯಾನ್ಸ್ ಫಿದಾ – ಅಡ್ವೆಂಚರ್ಸ್ ಕಾಮಿಡಿಯ ಸಿನಿಮಾ ಜನವರಿ 24ಕ್ಕೆ ರಿಲೀಸ್!

ಬೆಂಗಳೂರು : ಆರಂಭದಿಂದಲೂ ಕುತೂಹಲ ಮೂಡಿಸಿರುವ ಅಡ್ವೆಂಚರ್ಸ್ ಕಾಮಿಡಿ ಕಥಾಹಂದರ ಒಳಗೊಂಡಿರುವ ಮಲ್ಟಿ ಸ್ಟಾರರ್ ಸಿನಿಮಾ “ಫಾರೆಸ್ಟ್” ಚಿತ್ರದ “ಪೈಸಾ ಪೈಸಾ ಪೈಸಾ” ಹಾಡು ಇತ್ತೀಚೆಗೆ ಬಿಡುಗಡೆಯಾಗಿ 5

Live Cricket

Add Your Heading Text Here