Download Our App

Follow us

Home » ಕ್ರೀಡೆ » ಶೀಘ್ರ ಸ್ಟಾರ್ ಕ್ರಿಕೆಟಿಗನ ದಾಂಪತ್ಯ ಅಂತ್ಯವಾಗುತ್ತಾ ? – ಡಿವೋರ್ಸ್‌ ಆದ್ರೆ ಪತ್ನಿಗೆ ಜೀವನಾಂಶ ಎಷ್ಟು ಗೊತ್ತಾ ?

ಶೀಘ್ರ ಸ್ಟಾರ್ ಕ್ರಿಕೆಟಿಗನ ದಾಂಪತ್ಯ ಅಂತ್ಯವಾಗುತ್ತಾ ? – ಡಿವೋರ್ಸ್‌ ಆದ್ರೆ ಪತ್ನಿಗೆ ಜೀವನಾಂಶ ಎಷ್ಟು ಗೊತ್ತಾ ?

ಮುಂಬೈ: ಟೀಂ ಇಂಡಿಯಾದ ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಅವರು ಪತ್ನಿ ಧನಶ್ರೀ ವರ್ಮಾಗೆ ಡಿವೋರ್ಸ್‌ ಕೊಡಲಿದ್ದಾರೆ ಎಂಬ ವದಂತಿಗಳು ಪ್ರಕಟವಾಗುತ್ತಿದೆ. ಈ ಸುದ್ದಿ ಒಂದು ವೇಳೆ ನಿಜವಾಗಿ ಕೋರ್ಟ್‌ ಮೂಲಕ ವಿಚ್ಛೇದನ ಪಡೆದರೆ ಚಹಲ್‌ ಧನಶ್ರೀ ಅವರಿಗೆ ಭಾರೀ ಜೀವನಾಂಶ  ನೀಡಬೇಕಾಗುತ್ತದೆ.

ಚಹಲ್‌ ಪತ್ನಿ ಧನಶ್ರೀ ವರ್ಮಾ
ಚಹಲ್‌ ಪತ್ನಿ ಧನಶ್ರೀ ವರ್ಮಾ

ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ 200 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವ ಯಜುವೇಂದ್ರ ಚಹಲ್‌ ಟೀಂ ಇಂಡಿಯಾದ ಟಾಪ್‌ ಬೌಲರ್‌ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಚಹಲ್‌ ಅವರು 160 ಐಪಿಎಲ್‌ ಪಂದ್ಯವಾಡಿ 22.44 ರ ಸರಾಸರಿಯಲ್ಲಿ 205 ವಿಕೆಟ್ ಪಡೆದಿದ್ದಾರೆ.

2024ರ ಆವೃತ್ತಿಯಲ್ಲಿ ಚಹಲ್‌ ರಾಜಸ್ಥಾನ ರಾಯಲ್ಸ್‌ ಪರ ಆಡಿದ್ದರು. ಈ ವೇಳೆ ಅವರಿಗೆ 6.5 ಕೋಟಿ ರೂ. ನೀಡಿತ್ತು. ಐಪಿಎಲ್ 2025 ರ ಮೆಗಾ ಹರಾಜಿಗೆ ಮೊದಲು ಚಹಲ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡ ಕೈಬಿಟ್ಟಿತ್ತು. ನಂತರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪಂಜಾಬ್‌ ಕಿಂಗ್ಸ್‌ 18 ಕೋಟಿ ರೂ. ನೀಡಿ ಚಹಲ್‌ ಅವರನ್ನು ಖರೀದಿಸಿತ್ತು.

ಚಹಲ್ ಅವರು 2019ರಲ್ಲಿ ಜೀವನಶೈಲಿ ಬ್ರ್ಯಾಂಡ್ ‘ಚೆಕ್ಮೇಟ್’ ಅನ್ನು ಪ್ರಾರಂಭಿಸಿದ್ದರು. ಅಷ್ಟೇ ಅಲ್ಲದೇ ಅವರು ಫಿಟ್‌ನೆಸ್ ಅಪ್ಲಿಕೇಶನ್ ʼಗ್ರಿಪ್ʼ ಮತ್ತು ʼYUZOʼ ಬಟ್ಟೆ ಲೈನ್‌ನಲ್ಲಿ ಪಾಲನ್ನು ಹೊಂದಿದ್ದಾರೆ. ಚಹಲ್‌ ಪೋರ್ಷೆ ಕೆಯೆನ್ನೆ ಎಸ್, ಮರ್ಸಿಡಿಸ್ ಬೆಂಜ್ ಸಿ-ಕ್ಲಾಸ್, ಲ್ಯಾಂಬೋರ್ಗಿನಿ ಸೆಂಟೆನಾರಿಯೊ ಮತ್ತು ರೋಲ್ಸ್ ರಾಯ್ಸ್ ಸೇರಿದಂತೆ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳಿಂದ ಉತ್ತಮ ಮೊತ್ತವನ್ನು ಪಡೆಯುತ್ತಿರುವ ಚಹಲ್‌ ಅವರ ನಿವ್ವಳ ಮೌಲ್ಯ ಸುಮಾರು 45 ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ. ಒಂದು ವೇಳೆ ಅಧಿಕೃತವಾಗಿ ಕೋರ್ಟ್‌ ಮೂಲಕ ಧನಶ್ರೀಗೆ ಡಿವೋರ್ಸ್‌ ನೀಡಿದರೆ ಚಹಲ್‌ ಅವರು ತಮ್ಮ ಸಂಪತ್ತಿನ 20% ರಿಂದ 30% ವರೆಗಿನ ಪಾಲನ್ನು ನೀಡಬೇಕಾಗಬಹುದು. ಎಷ್ಟು ಜೀವನಾಂಶ ನೀಡಬೇಕು ಎಂಬುದನ್ನು ಕೋರ್ಟ್‌ ನಿರ್ಧರಿಸಲಿದೆ.

ಇನ್ನು ನೃತ್ಯ ಸಂಯೋಜನೆ, ಬ್ರಾಂಡ್ ಪ್ರಚಾರ, ಸೋಶಿಯಲ್‌ ಮೀಡಿಯಾಗಳಿಂದ ಧನಶ್ರೀ ಆದಾಯ ಸಂಪಾದಿಸುತ್ತಿದ್ದಾರೆ. ಧನಶ್ರೀ ಅವರು ಅಂದಾಜು 25 ಕೋಟಿ ರೂ. ಮೌಲ್ಯದ ಸಂಪತ್ತು ಹೊಂದಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ : ಕೋಟಿ ಕೋಟಿ ವಂಚಕಿ ಐಶ್ವರ್ಯ ಗೌಡ, ಪತಿ ಹರೀಶ್ ಮತ್ತೆ ಅರೆಸ್ಟ್ – ಕೋರ್ಟ್​ಗೆ ಹಾಜರುಪಡಿಸಿದ ಆರ್.ಆರ್ ನಗರ ಪೊಲೀಸ್!

 

Leave a Comment

DG Ad

RELATED LATEST NEWS

Top Headlines

“ಫಾರೆಸ್ಟ್”ಚಿತ್ರದ “ಪೈಸಾ ಪೈಸಾ ಪೈಸಾ” ಹಾಡಿಗೆ ಫ್ಯಾನ್ಸ್ ಫಿದಾ – ಅಡ್ವೆಂಚರ್ಸ್ ಕಾಮಿಡಿಯ ಸಿನಿಮಾ ಜನವರಿ 24ಕ್ಕೆ ರಿಲೀಸ್!

ಬೆಂಗಳೂರು : ಆರಂಭದಿಂದಲೂ ಕುತೂಹಲ ಮೂಡಿಸಿರುವ ಅಡ್ವೆಂಚರ್ಸ್ ಕಾಮಿಡಿ ಕಥಾಹಂದರ ಒಳಗೊಂಡಿರುವ ಮಲ್ಟಿ ಸ್ಟಾರರ್ ಸಿನಿಮಾ “ಫಾರೆಸ್ಟ್” ಚಿತ್ರದ “ಪೈಸಾ ಪೈಸಾ ಪೈಸಾ” ಹಾಡು ಇತ್ತೀಚೆಗೆ ಬಿಡುಗಡೆಯಾಗಿ 5

Live Cricket

Add Your Heading Text Here