Download Our App

Follow us

Home » ಸಿನಿಮಾ » ನಟ ದರ್ಶನ್​ಗೆ ಬಿಗ್​ ಶಾಕ್​.. ಶುರುವಾಯ್ತು ‘ಜಾಮೀನು’ ಸಂಕಷ್ಟ – ಬೇಲ್​ ಪ್ರಶ್ನಿಸಿ ಸುಪ್ರೀಂ ಮೊರೆ ಹೋದ ಪೊಲೀಸರು!

ನಟ ದರ್ಶನ್​ಗೆ ಬಿಗ್​ ಶಾಕ್​.. ಶುರುವಾಯ್ತು ‘ಜಾಮೀನು’ ಸಂಕಷ್ಟ – ಬೇಲ್​ ಪ್ರಶ್ನಿಸಿ ಸುಪ್ರೀಂ ಮೊರೆ ಹೋದ ಪೊಲೀಸರು!

ಬೆಂಗಳೂರು :  ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್​ಗೆ ಬಿಗ್ ಶಾಕ್​ ಎದುರಾಗಿದೆ. ದರ್ಶನ್​​ ಮತ್ತೆ ಜೈಲಿಗೆ ಹೋಗೋದು ಫಿಕ್ಸ್ ಎನ್ನಲಾಗ್ತಿದೆ. ‘ದಾಸ’ನಿಗೆ ಹೈಕೋರ್ಟ್​ ನೀಡಿರುವ ರೆಗ್ಯುಲರ್ ಜಾಮೀನು ಆದೇಶ ಪ್ರಶ್ನಿಸಿ ಪೊಲೀಸರು ಸುಪ್ರೀಂಕೋರ್ಟ್​ ಕದ ತಟ್ಟಿದ್ದಾರೆ. ದರ್ಶನ್​ಗೆ ನೀಡಿರುವ ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್​ಗೆ ಪೊಲೀಸರು ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ದರ್ಶನ್, ಪವಿತ್ರಾ ಗೌಡ , ಲಕ್ಷಣ, ಪ್ರದೋಶ್, ನಾಗರಾಜು, ಅನುಕುಮಾರ್, ಜಗದೀಶ್ ಸೇರಿ 7 ಆರೋಪಿಗಳ ಜಾಮೀನು ರದ್ದುಪಡಿಸುವಂತೆ ಸುಪ್ರೀಂಕೋರ್ಟ್​ಗೆ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿದೆ. ವಕೀಲ ಅನಿಲ್​ ಸಿ ನಿಶಾನಿ ಮೂಲಕ ಪೊಲೀಸರು ಅರ್ಜಿ ಸಲ್ಲಿಸಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಡಿಸೆಂಬರ್​​ 13ರಂದು ನಟ ದರ್ಶನ್​ಗೆ ಹೈಕೋರ್ಟ್ ​ಬೇಲ್​​​ ನೀಡಿತ್ತು. ಇದೀಗ ಹೈಕೋರ್ಟ್ ಬೇಲ್​ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಈ ಮೂಲಕ ರೆಗ್ಯುಲರ್ ಜಾಮೀನಿನ ಮೇಲೆ ಹೊರಗೆ ಇರುವ ದಾಸನಿಗೆ ಸಂಕಷ್ಟ ಫಿಕ್ಸ್ ಎನ್ನಲಾಗ್ತಿದೆ.

ಇದನ್ನೂ ಓದಿ : 3ನೇ ಕ್ಲಾಸ್ ವಿದ್ಯಾರ್ಥಿನಿಗೆ ಹೃದಯಾಘಾತ.. ಟೀಚರ್‌‌ ಕಣ್ಣೆದುರೇ ಕೊನೆಯುಸಿರೆಳೆದ ಬಾಲಕಿ..!

 

Leave a Comment

DG Ad

RELATED LATEST NEWS

Top Headlines

“ಫಾರೆಸ್ಟ್”ಚಿತ್ರದ “ಪೈಸಾ ಪೈಸಾ ಪೈಸಾ” ಹಾಡಿಗೆ ಫ್ಯಾನ್ಸ್ ಫಿದಾ – ಅಡ್ವೆಂಚರ್ಸ್ ಕಾಮಿಡಿಯ ಸಿನಿಮಾ ಜನವರಿ 24ಕ್ಕೆ ರಿಲೀಸ್!

ಬೆಂಗಳೂರು : ಆರಂಭದಿಂದಲೂ ಕುತೂಹಲ ಮೂಡಿಸಿರುವ ಅಡ್ವೆಂಚರ್ಸ್ ಕಾಮಿಡಿ ಕಥಾಹಂದರ ಒಳಗೊಂಡಿರುವ ಮಲ್ಟಿ ಸ್ಟಾರರ್ ಸಿನಿಮಾ “ಫಾರೆಸ್ಟ್” ಚಿತ್ರದ “ಪೈಸಾ ಪೈಸಾ ಪೈಸಾ” ಹಾಡು ಇತ್ತೀಚೆಗೆ ಬಿಡುಗಡೆಯಾಗಿ 5

Live Cricket

Add Your Heading Text Here