Download Our App

Follow us

Home » ಜಿಲ್ಲೆ » ಸಚಿವ ಪ್ರಿಯಾಂಕ್​ ಖರ್ಗೆ ರಾಜೀನಾಮೆಗೆ ‘ಕೇಸರಿ’ ಬಿಗಿಪಟ್ಟು – ಜೂ.ಖರ್ಗೆ ನಿವಾಸದ ಬಳಿ ಭಾರೀ ಹೈಡ್ರಾಮಾ!

ಸಚಿವ ಪ್ರಿಯಾಂಕ್​ ಖರ್ಗೆ ರಾಜೀನಾಮೆಗೆ ‘ಕೇಸರಿ’ ಬಿಗಿಪಟ್ಟು – ಜೂ.ಖರ್ಗೆ ನಿವಾಸದ ಬಳಿ ಭಾರೀ ಹೈಡ್ರಾಮಾ!

ಕಲಬುರಗಿ : ಗುತ್ತಿಗೆದಾರ ಸಚಿನ್ ಪಾಂಚಾಳ್​​ ಆತ್ಮಹತ್ಯೆ ಪ್ರಕರಣವನ್ನು ಅಸ್ತ್ರ ಮಾಡಿಕೊಂಡಿರುವ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ಸಚಿವ ಪ್ರಿಯಾಂಕ್​ ಖರ್ಗೆಯನ್ನೇ ಟಾರ್ಗೆಟ್ ಮಾಡಿರುವ ಕೇಸರಿ ಪಡೆ ಅವರ ರಾಜೀನಾಮೆಗೆ ಆಗ್ರಹಿಸಿ ಭಾರೀ ಪ್ರತಿಭಟನೆ ನಡೆಸಿದೆ. ಕಲಬುರಗಿಯಲ್ಲಿರುವ ಸಚಿವ ಪ್ರಿಯಾಂಕ್​ ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕಲು ಬಿಜೆಪಿ ನಾಯಕರು, ಕಾರ್ಯಕರ್ತರು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ಭಾರೀ ಹೈಡ್ರಾಮಾ ನಡೆದಿದೆ.

ಬೀದರ್​ ಯುವ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್​ ಖರ್ಗೆ ರಾಜೀನಾಮೆ ಕೊಡುವಂತೆ ಬಿಜೆಪಿ ನಾಯಕರು ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಿಂದ ಪ್ರಿಯಾಂಕ್​​ ಖರ್ಗೆ ನಿವಾಸದ ರಸ್ತೆಗೆ ಬಂದ ಬಿಜೆಪಿ ನಾಯಕರನ್ನು ಐವಾನ್ ಏ ಶಾಹಿ ರಸ್ತೆಯಲ್ಲೇ ಪೊಲೀಸರು ತಡೆದಿದ್ದಾರೆ.

ಈ ವೇಳೆ ಪೊಲೀಸರು ಮತ್ತು ಬಿಜೆಪಿ ನಾಯಕರ ಮಧ್ಯೆ ವಾಗ್ವಾದ ನಡೆದಿದ್ದು ಪ್ರತಿಭಟನಾಕಾರರು-ಬಿಜೆಪಿ ನಾಯಕರ ನಡುವೆ ತಳ್ಳಾಟ-ನೂಕಾಟ ನಡೆದಿದೆ. ಬಳಿಕ ಬಿಜೆಪಿ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು ಎರಡು ಬಸ್‌ಗಳಲ್ಲಿ ಕರೆದೊಯ್ದಿದ್ದಾರೆ.

ವಿಪಕ್ಷ ನಾಯಕ ಆರ್. ಅಶೋಕ್, ಪರಿಷತ್​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, MLC ಸಿ.ಟಿ.ರವಿ, ರವಿಕುಮಾರ್ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗಿಯಾದರು. ಸಚಿವ ಪ್ರಿಯಾಂಕ್ ಖರ್ಗೆ ಮನೆಗೆ ಬಿಜೆಪಿ ಮುತ್ತಿಗೆ ಹಿನ್ನೆಲೆ ಕಲಬುರಗಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪ್ರಿಯಾಂಕ್ ಖರ್ಗೆ ಮನೆಗೆ ತೆರಳುವ ಮಾರ್ಗ ಮಧ್ಯದಲ್ಲಿ ಪೊಲೀಸ್ ಹೈ ಅಲರ್ಟ್ ಆಗಿದ್ದಾರೆ.

ಇದನ್ನೂ ಓದಿ : ಅರೆಸ್ಟ್​ ಆದ್ರೂ ಫೋನ್​ನಲ್ಲಿ DySP ಸಖತ್​ ಬ್ಯುಸಿ – ಮೆಡಿಕಲ್ ಚೆಕಪ್ ವೇಳೆ ಕಾಮುಕ ರಾಮಚಂದ್ರಪ್ಪ ಬಿಂದಾಸ್ ಟಾಕ್!

 

Leave a Comment

DG Ad

RELATED LATEST NEWS

Top Headlines

ಇಬ್ರಾಹಿಂ ಅಲಿ ಖಾನ್ ಜೊತೆ ಶ್ರೀಲೀಲಾ ಮಿಂಚಿಂಗ್​​ – ಬಾಲಿವುಡ್‌ಗೆ ಹಾರಿದ್ರಾ ಕನ್ನಡದ ಚೆಲುವೆ ?

ಮುಂಬೈ : ಕನ್ನಡದ ನಟಿ ಶ್ರೀಲೀಲಾ ಅವರು ಸೂಪರ್​ ಹಿಟ್​ ‘ಪುಷ್ಪ 2’ ಚಿತ್ರದಲ್ಲಿ ಕಿಸ್ಸಿಕ್ ಹಾಡಿಗೆ ಸೊಂಟ ಬಳುಕಿಸಿದ ಮೇಲೆ ಬೇಡಿಕೆ ಹೆಚ್ಚಾಗಿದೆ. ಬಾಲಿವುಡ್‌ಗೆ ಪಾದಾರ್ಪಣೆ

Live Cricket

Add Your Heading Text Here