Download Our App

Follow us

Home » ಅಪರಾಧ » ಬೆಂಗಳೂರು : ಕಾಲ್ ಸೆಂಟರ್ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಇಬ್ಬರ ಬಂಧನ..!

ಬೆಂಗಳೂರು : ಕಾಲ್ ಸೆಂಟರ್ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಇಬ್ಬರ ಬಂಧನ..!

ಬೆಂಗಳೂರು : ಕಾಲ್​​​ ಸೆಂಟರ್​​ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಇಬ್ಬರನ್ನು ಹುಳಿಮಾವು ಪೊಲೀಸರು ಅರೆಸ್ಟ್​​​​ ಮಾಡಿದ್ದಾರೆ. ಹುಳಿಮಾವು ಬಸ್ ನಿಲ್ದಾಣದ ಬಳಿ ಈ ಗ್ಯಾಂಗ್​​​ ಕಚೇರಿ ಮಾಡಿಕೊಂಡಿತ್ತು. ಫೀನಿಕ್ಸ್ ಇಂಟೀರಿಯರ್ಸ್ ಎಂದು ಹೊರಗೆ ಬೋರ್ಡ್ ಹಾಕಿಕೊಂಡು ಒಳಗಡೆ ಸೈಬರ್​​ ವಂಚನೆ ಮಾಡ್ತಿದ್ದರು. ನಿನ್ನೆ ಹುಳಿಮಾವು ಪೊಲೀಸರು ಅನಧಿಕೃತ ಕಾಲ್ ಸೆಂಟರ್ ಮೇಲೆ ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ. ಕಿಂಗ್​​ಪಿನ್ ಜಿತೇಂದ್ರ ಕುಮಾರ್, ಚಂದನ್ ಕುಮಾರ್ ಬಂಧಿತ ಆರೋಪಿಗಳು.

ಕಳೆದ ನಾಲ್ಕು ತಿಂಗಳಿನಿಂದ ಇದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದ ಈ ಕಿಲಾಡಿಗಳು, ಸುಮಾರು 20ಕ್ಕೂ ಹೆಚ್ಚು ಮಂದಿಯನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದರು. ಸಾವಿರಾರು ಫೋನ್ ನಂಬರ್​​ಗಳ ಲಿಸ್ಟ್ ಇಟ್ಟುಕೊಂಡಿದ್ದ ಗ್ಯಾಂಗ್, ಪೋನ್ ಮಾಡಿ ನಿಮ್ಮ ಕೆವೈಸಿ ಅಪ್ಟೇಡ್, ಒಟಿಪಿ ಲಿಂಕ್, ಗಿಫ್ಟ್ ಆಫರ್, ಕ್ರೆಡಿಟ್ ಕಾರ್ಡ್ ಪಾಸ್ವರ್ಡ್ ಚೇಂಜ್,ಶೇರ್ ಮಾರ್ಕೇಟ್​​ನಲ್ಲಿ ಹಣ ಹೂಡಿಕೆ ಮಾಡಿದ್ರೆ ಡಬಲ್ ನೀಡೋದಾಗಿ ಹೇಳಿ ವಂಚನೆ ಮಾಡ್ತಿದ್ದರು.

ಗ್ರೂಪ್ ಕ್ರಿಯೆಟ್ ಮಾಡಿ ಲಕ್ಷಾಂತರ ರೂಪಾಯಿಯನ್ನು ಆಸಾಮಿಗಳು ಹಾಕಿಸಿಕೊಳ್ಳುತ್ತಿದ್ದರು. SMS, ಫೋನ್​ ಕಾಲ್​​​​ಗಳ ಮೂಲಕ ಕೋಟಿ ಕೋಟಿ ವಂಚನೆಗಳನ್ನೂ ಈ ಗ್ಯಾಂಗ್​ ಮಾಡಿದೆ. ಸದ್ಯ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

ಇದನ್ನೂ ಓದಿ : ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ – ಸಿದ್ದರಾಮಯ್ಯ ಸ್ಪಷ್ಟನೆ!

Leave a Comment

DG Ad

RELATED LATEST NEWS

Top Headlines

ಇಬ್ರಾಹಿಂ ಅಲಿ ಖಾನ್ ಜೊತೆ ಶ್ರೀಲೀಲಾ ಮಿಂಚಿಂಗ್​​ – ಬಾಲಿವುಡ್‌ಗೆ ಹಾರಿದ್ರಾ ಕನ್ನಡದ ಚೆಲುವೆ ?

ಮುಂಬೈ : ಕನ್ನಡದ ನಟಿ ಶ್ರೀಲೀಲಾ ಅವರು ಸೂಪರ್​ ಹಿಟ್​ ‘ಪುಷ್ಪ 2’ ಚಿತ್ರದಲ್ಲಿ ಕಿಸ್ಸಿಕ್ ಹಾಡಿಗೆ ಸೊಂಟ ಬಳುಕಿಸಿದ ಮೇಲೆ ಬೇಡಿಕೆ ಹೆಚ್ಚಾಗಿದೆ. ಬಾಲಿವುಡ್‌ಗೆ ಪಾದಾರ್ಪಣೆ

Live Cricket

Add Your Heading Text Here