Download Our App

Follow us

Home » ಕ್ರೀಡೆ » ರೋಚಕತೆ ಹೆಚ್ಚಿಸಿದ ಸಿಡ್ನಿ ಟೆಸ್ಟ್ – ಆಸೀಸ್ 181ಕ್ಕೆ ಆಲೌಟ್.. ಭಾರತಕ್ಕೆ 4 ರನ್​ಗಳ​​ ಮುನ್ನಡೆ..!

ರೋಚಕತೆ ಹೆಚ್ಚಿಸಿದ ಸಿಡ್ನಿ ಟೆಸ್ಟ್ – ಆಸೀಸ್ 181ಕ್ಕೆ ಆಲೌಟ್.. ಭಾರತಕ್ಕೆ 4 ರನ್​ಗಳ​​ ಮುನ್ನಡೆ..!

ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 5ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಬೌಲರ್​​ಗಳು ಪರಾಕ್ರಮ ಮೆರೆದಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 185 ರನ್​ಗಳಿಗೆ ಆಲೌಟ್ ಆದರೆ, ಇತ್ತ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್​ನಲ್ಲಿ 181 ರನ್​ ಬಾರಿಸಿ ಸರ್ವಪತನ ಕಂಡಿದೆ. ಈ ಮೂಲಕ ಭಾರತ ತಂಡವು ಮೊದಲ ಇನಿಂಗ್ಸ್​ನಲ್ಲಿ 4 ರನ್​ಗಳ ಮುನ್ನಡೆ ಪಡೆದುಕೊಂಡಿದೆ.

ಶುಕ್ರವಾರ ಶುರುವಾದ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಜಸ್​ಪ್ರೀತ್ ಬುಮ್ರಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಯಶಸ್ವಿ ಜೈಸ್ವಾಲ್ (10), ಕೆಎಲ್ ರಾಹುಲ್ (4), ಶುಭ್​ಮನ್ ಗಿಲ್ (20) ಹಾಗೂ ವಿರಾಟ್ ಕೊಹ್ಲಿ (17) 72 ರನ್​ ಆಗುವಷ್ಟರಲ್ಲಿ ವಿಕೆಟ್ ಒಪ್ಪಿಸಿದ್ದರು. ಈ ಹಂತದಲ್ಲಿ ಕಣಕ್ಕಿಳಿದ ರಿಷಭ್ ಪಂತ್ 40 ರನ್ ಬಾರಿಸಿದರೆ, ರವೀಂದ್ರ ಜಡೇಜಾ 26 ರನ್​ಗಳ ಕೊಡುಗೆ ನೀಡಿದರು. ಆದರೆ ಆ ಬಳಿಕ ಬಂದ ನಿತೀಶ್ ರೆಡ್ಡಿ (0) ಶೂನ್ಯಕ್ಕೆ ಔಟಾದರೆ, ವಾಷಿಂಗ್ಟನ್ ಸುಂದರ್ 14 ರನ್​ಗಳಿಸಲಷ್ಟೇ ಶಕ್ತರಾದರು. ಕೆಳ ಕ್ರಮಾಂಕದಲ್ಲಿ ಜಸ್​ಪ್ರೀತ್ ಬುಮ್ರಾ 22 ರನ್ ಬಾರಿಸಿ ತಂಡದ ಮೊತ್ತವನ್ನು 185 ಕ್ಕೆತಂದು ನಿಲ್ಲಿಸಿದರು.

ಈ ಗುರಿಯನ್ನು ಬೆನ್ನುಹತ್ತಿದ್ದ ಆಸ್ಟ್ರೇಲಿಯಾ ತಂಡ ಇಂದು ಎರಡನೇ ದಿನದಾಟದಲ್ಲಿ 181 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ಮೊದಲ ಇನಿಂಗ್ಸ್‌ನಲ್ಲಿ 4 ರನ್‌ಗಳ ಮುನ್ನಡೆ ಸಾಧಿಸಿದೆ. ಪಂದ್ಯದಲ್ಲಿ ಬುಮ್ರಾ ಗಾಯದ ಸಮಸ್ಯೆ ಕಾಡಿದೆ. ಆದರೂ ಎರಡು ವಿಕೆಟ್ ಕಿತ್ತುಕೊಟ್ಟು ಪಂದ್ಯದಿಂದ ಹೊರಗುಳಿದಿದ್ದಾರೆ. ಭಾರತದ ಪರ ಬುಮ್ರಾ ಅವರ ಕೆಲಸವನ್ನು ಸಿರಾಜ್, ಪ್ರಸಿದ್ಧ್ ಕೃಷ್ಣ ಮಾಡಿದ್ದಾರೆ. ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣ ತಲಾ ಮೂರು ವಿಕೆಟ್ ಕಿತ್ತು ಆಸ್ಟ್ರೇಲಿಯಾ ಬ್ಯಾಟ್ಸ್​ಮನ್​​ಗಳನ್ನು ಪೆವಿಲಿಯನ್​ ಪರೆಡ್ ಮಾಡಿಸುವಲ್ಲಿ​ ಯಶಸ್ವಿಗಿದ್ದು, ನಿತಿಶ್ ರೆಡ್ಡಿ ಕೂಡ 2 ವಿಕೆಟ್ ಕಿತ್ತು ಭಾರತ ತಂಡದ ಮುನ್ನಡೆಗೆ ಸಹಕರಿಸಿದ್ದಾರೆ.

ಇದನ್ನೂ ಓದಿ : ಜೈಲಿನಲ್ಲಿರುವ ಪ್ರಜ್ವಲ್​​ ರೇವಣ್ಣಗೆ ಮತ್ತೊಂದು ಶಾಕ್ ​​- ಟ್ರಯಲ್ ಪ್ರಾರಂಭಿಸಲು ಮುಂದಾದ ಎಸ್​ಐಟಿ..!

Leave a Comment

DG Ad

RELATED LATEST NEWS

Top Headlines

ಇಬ್ರಾಹಿಂ ಅಲಿ ಖಾನ್ ಜೊತೆ ಶ್ರೀಲೀಲಾ ಮಿಂಚಿಂಗ್​​ – ಬಾಲಿವುಡ್‌ಗೆ ಹಾರಿದ್ರಾ ಕನ್ನಡದ ಚೆಲುವೆ ?

ಮುಂಬೈ : ಕನ್ನಡದ ನಟಿ ಶ್ರೀಲೀಲಾ ಅವರು ಸೂಪರ್​ ಹಿಟ್​ ‘ಪುಷ್ಪ 2’ ಚಿತ್ರದಲ್ಲಿ ಕಿಸ್ಸಿಕ್ ಹಾಡಿಗೆ ಸೊಂಟ ಬಳುಕಿಸಿದ ಮೇಲೆ ಬೇಡಿಕೆ ಹೆಚ್ಚಾಗಿದೆ. ಬಾಲಿವುಡ್‌ಗೆ ಪಾದಾರ್ಪಣೆ

Live Cricket

Add Your Heading Text Here