Download Our App

Follow us

Home » ಸಿನಿಮಾ » ಬಿಗ್​ಬಾಸ್​ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ಯಾವಾಗ? ಹೇಗಿದೆ ಪ್ಲಾನ್​?

ಬಿಗ್​ಬಾಸ್​ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ಯಾವಾಗ? ಹೇಗಿದೆ ಪ್ಲಾನ್​?

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್​ಬಾಸ್​ ಸೀಸನ್​ 11′ 93ನೇ ದಿನಕ್ಕೆ ಕಾಲಿಟ್ಟಿದ್ದು, ಇನ್ನೇನೋ ಕೆಲವೇ ದಿನಗಳಲ್ಲಿ ಗ್ರ್ಯಾಂಡ್​ ಫಿನಾಲೆ ಕೂಡ ನಡೆಯಲಿದೆ. ಗ್ರ್ಯಾಂಡ್‌ ಫಿನಾಲೆ ಹತ್ತಿರ ಬರುತ್ತಿದ್ದಂತೆಯೇ ಮನೆಯ 9 ಸ್ಪರ್ಧಿಗಳು ಹೈ ಅಲರ್ಟ್‌ ಆಗಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ, ಸೀಸನ್​ 11ರ ಗ್ರ್ಯಾಂಡ್​ ಫಿನಾಲೆಯನ್ನು ಬಿಗ್​ಬಾಸ್​ ಟೀಮ್ ಎರಡು ವಾರಗಳ ಕಾಲ ಮುಂದಕ್ಕೆ ಹಾಕುವ ಪ್ಲಾನ್ ಮಾಡಿಕೊಂಡಿದೆಯಂತೆ. ಏಕೆಂದರೆ ಈ ಬಾರಿಯ ಬಿಗ್​ಬಾಸ್​ ಸೀಸನ್ 11 ಹೊಸ ಅಧ್ಯಾಯ ಟೈಟಲ್​ನೊಂದಿಗೆ ಶುರುವಾಗಿತ್ತು. ಹೀಗಾಗಿ ಈ ಬಾರಿಯ ಸೀಸನ್​, 125 ದಿನಗಳ ನಡೆಸಬೇಕು ಎಂಬ ಪ್ಲಾನ್​ನಲ್ಲಿದೆ ಎಂದು ಹೇಳಲಾಗುತ್ತಿದೆ.

ಕಳೆದ 10 ಸೀಸನ್​ಗಳಿಗಿಂತ ಈ ಬಾರಿಯ ಬಿಗ್​ಬಾಸ್​ ಸೀಸನ್ ಹೊಸ ಅಧ್ಯಾಯದೊಂದಿಗೆ ತೆರೆಗೆ ಬಂದಿತ್ತು. ಮೊದಲು ಸ್ವರ್ಗ ಹಾಗೂ ನರಕ ಎಂಬ ಕಾನ್ಸೆಪ್ಟ್ ಮೂಲಕ ಬಂದಿದ್ದರಿಂದ ಅತೀ ಹೆಚ್ಚು ವೀಕ್ಷಕರನ್ನು ತನ್ನತ್ತ ಸೆಳೆದುಕೊಂಡು, ಟಿಆರ್​ಪಿಯಲ್ಲೂ ಟಾಪ್​ ಸ್ಥಾನವನ್ನು ಪಡೆದುಕೊಂಡು ಶೋ ಮುನ್ನುಗ್ಗುತ್ತಿದೆ.

ಕಳೆದ ಭಾನುವಾರದ ಸಂಚಿಕೆಯಲ್ಲಿ ಐಶ್ವರ್ಯಾ ಸಿಂಧೋಗಿ ಬಿಗ್​ಬಾಸ್​ ಮನೆಗೆ ವಿದಾಯ ಹೇಳಿದ್ದರು. ಹೀಗಾಗಿ ಈಗ ಬಿಗ್​ಬಾಸ್​ ಮನೆಯಲ್ಲಿ 9 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ 9 ಸ್ಪರ್ಧಿಗಳ ಪೈಕಿ ಯಾರು ಟಾಪ್​ 5 ಫೈನಲಿಸ್ಟ್​ ಆಗಲಿದ್ದಾರೆ ಅಂತ ಮುಂದಿನ ಕೆಲವು ದಿನಗಳಲ್ಲಿ ಗೊತ್ತಾಗಲಿದೆ. ಅದರಂತೆ ಈ ಬಾರಿಯ ಸೀಸನ್​ 11ರ ಗ್ರ್ಯಾಂಡ್​ ಫಿನಾಲೆಯೂ ಜನವರಿಯಲ್ಲಿಯೇ ನಡೆಯಲಿದೆ ಎನ್ನಲಾಗಿದೆ. ಈ ಬಗ್ಗೆ ಬಿಗ್​ಬಾಸ್​ ಟೀಮ್​ ಶೀಘ್ರದಲ್ಲಿಯೇ ಅಧಿಕೃತ ದಿನಾಂಕ ಘೊಷಿಸುವ ಸಾಧ್ಯತೆಯಿದೆ. ಬಿಗ್​ಬಾಸ್​ ಸೀಸನ್​ 9ರ ಗ್ರ್ಯಾಂಡ್​ ಫಿನಾಲೆಯೂ 2022, 31 ಡಿಸೆಂಬರ್ ರಂದು ನಡೆದಿತ್ತು. ಬಿಗ್​ಬಾಸ್​ ಸೀಸನ್​ 10ರ ಗ್ರ್ಯಾಂಡ್​ ಫಿನಾಲೆಯೂ 2023 ಜನವರಿ 29ರಂದು ನಡೆದಿತ್ತು.

ಇದನ್ನೂ ಓದಿ : ಹೊಸ ವರ್ಷಕ್ಕೂ ಮುನ್ನ ಇತಿಹಾಸ ಸೃಷ್ಟಿಸಿದ ಇಸ್ರೋ.. ‘ಸ್ಪೆಡೆಕ್ಸ್’ ಮಿಷನ್ ಯಶಸ್ವಿ ಉಡಾವಣೆ..!

Leave a Comment

DG Ad

RELATED LATEST NEWS

Top Headlines

ಕಾಂಗ್ರೆಸ್ ಸರ್ಕಾರದಿಂದ ಹಗಲು ದರೋಡೆ, ಬಸ್​ ದರ ಏರಿಸಿ ಗ್ಯಾರಂಟಿ ಕೊಟ್ರೆ ಏನ್​ ಪ್ರಯೋಜನ – ಹೆಚ್​​ಡಿಕೆ ಕಿಡಿ..!

ಮೈಸೂರು : ಕಾಂಗ್ರೆಸ್ ಸರ್ಕಾರ ಹಗಲು ದರೋಡೆ ಮಾಡ್ತಿದೆ. ಮುದ್ರಾಂಕ, ಪೆಟ್ರೋಲ್​​-ಡೀಸೆಲ್​​​, ನೀರಿನ ದರ, ಹಾಲಿನ ದರ ಏರಿಕೆ ಯಾರಿಗೆ ಎಫೆಕ್ಟ್​. ಬಸ್​ ದರ ಏರಿಸಿ ಗ್ಯಾರಂಟಿ

Live Cricket

Add Your Heading Text Here