Download Our App

Follow us

Home » ಕ್ರೀಡೆ » ಆಸೀಸ್ ಬೌಲಿಂಗ್ ದಾಳಿಗೆ ತತ್ತರಿಸಿದ ರೋಹಿತ್ ಪಡೆ – 4ನೇ ಟೆಸ್ಟ್​ನಲ್ಲಿ ಭಾರತಕ್ಕೆ ಸೋಲು..!

ಆಸೀಸ್ ಬೌಲಿಂಗ್ ದಾಳಿಗೆ ತತ್ತರಿಸಿದ ರೋಹಿತ್ ಪಡೆ – 4ನೇ ಟೆಸ್ಟ್​ನಲ್ಲಿ ಭಾರತಕ್ಕೆ ಸೋಲು..!

ಆಸ್ಟ್ರೇಲಿಯಾ : ಮೆಲ್ಬೋರ್ನ್​ನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ತಂಡ 184 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಜಯದೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 2-1 ಅಂತರದಿಂದ ಮುನ್ನಡೆ ಸಾಧಿಸಿದೆ.

ಐದನೇ ದಿನವಾದ ಇಂದು ಭಾರತಕ್ಕೆ ಗೆಲ್ಲುವ ಅವಕಾಶ ಇತ್ತು. ಅದನ್ನು ಕೈಯಾರೆ ರೋಹಿತ್​ ಪಡೆ ಚೆಲ್ಲಿದೆ. ಕೊನೆ ಕ್ಷಣದಲ್ಲಿ ಮನಸ್ಸು ಮಾಡಿದ್ದರೂ ಪಂದ್ಯ ಡ್ರಾ ಮಾಡಿಕೊಳ್ಳಬಹುದಿತ್ತು. ಆದರೆ ಟೀಂ ಇಂಡಿಯಾ ಬ್ಯಾಟ್ಸ್​​ಮನ್​​ಗಳ ಮನಸೋ ಇಚ್ಛೆ ಬ್ಯಾಟಿಂಗ್​ನಿಂದಾಗಿ ತಂಡ ಸೋಲಿಗೆ ಶರಣಾಗಿದೆ.

4ನೇ ಟೆಸ್ಟ್​​ನ ಮೊದಲ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ 474 ರನ್​ಗಳಿಸಿತ್ತು. ಈ ಗುರಿಯನ್ನು ಬೆನ್ನತ್ತಿದ್ದ ಭಾರತ 369 ರನ್​ಗಳಿಸಿತ್ತು. ಇದರೊಂದಿಗೆ ಆಸ್ಟ್ರೇಲಿಯಾ 105 ರನ್​ಗಳ ಮುನ್ನಡೆ ಕಾಯ್ದುಕೊಂಡಿತ್ತು. ಎರಡನೇ ಇನ್ನಿಂಗ್ಸ್​ನಲ್ಲಿ 234 ರನ್​ಗಳಿಸಿದ್ದ ಆಸ್ಟ್ರೇಲಿಯಾ ಭಾರತದ ಗೆಲುವಿಗೆ ಒಟ್ಟು 339 ರನ್​​ಗಳ ಗುರಿಯನ್ನು ನೀಡಿತ್ತು. ಭಾರತ ಎರಡನೇ ಇನ್ನಿಂಗ್ಸ್​ನಲ್ಲಿ 155 ರನ್​​ಗಳಿಸಿ ಸೋಲಿಗೆ ಶರಣಾಗಿದೆ.

ಇದನ್ನೂ ಓದಿ : ನ್ಯೂ ಇಯರ್​ಗೆ ಗುಡ್​ ನ್ಯೂಸ್​ – ಜೋಗ್​ ಫಾಲ್ಸ್​ ವೀಕ್ಷಣೆಗೆ ಗ್ರೀನ್ ಸಿಗ್ನಲ್!

Leave a Comment

DG Ad

RELATED LATEST NEWS

Top Headlines

“ಫಾರೆಸ್ಟ್”ಚಿತ್ರದ “ಪೈಸಾ ಪೈಸಾ ಪೈಸಾ” ಹಾಡಿಗೆ ಫ್ಯಾನ್ಸ್ ಫಿದಾ – ಅಡ್ವೆಂಚರ್ಸ್ ಕಾಮಿಡಿಯ ಸಿನಿಮಾ ಜನವರಿ 24ಕ್ಕೆ ರಿಲೀಸ್!

ಬೆಂಗಳೂರು : ಆರಂಭದಿಂದಲೂ ಕುತೂಹಲ ಮೂಡಿಸಿರುವ ಅಡ್ವೆಂಚರ್ಸ್ ಕಾಮಿಡಿ ಕಥಾಹಂದರ ಒಳಗೊಂಡಿರುವ ಮಲ್ಟಿ ಸ್ಟಾರರ್ ಸಿನಿಮಾ “ಫಾರೆಸ್ಟ್” ಚಿತ್ರದ “ಪೈಸಾ ಪೈಸಾ ಪೈಸಾ” ಹಾಡು ಇತ್ತೀಚೆಗೆ ಬಿಡುಗಡೆಯಾಗಿ 5

Live Cricket

Add Your Heading Text Here