Download Our App

Follow us

Home » ಸಿನಿಮಾ » ಸಂಜು ವೆಡ್ಸ್ ಗೀತಾ-2 ಸಿನಿಮಾಗೆ ಕಿಚ್ಚ ಸಾಥ್ – ಮತ್ತೊಂದು ಹಾಡು ರಿಲೀಸ್!

ಸಂಜು ವೆಡ್ಸ್ ಗೀತಾ-2 ಸಿನಿಮಾಗೆ ಕಿಚ್ಚ ಸಾಥ್ – ಮತ್ತೊಂದು ಹಾಡು ರಿಲೀಸ್!

ಬೆಂಗಳೂರು : ಸ್ಯಾಂಡಲ್​​ವುಡ್​ನ ಬಹು ನಿರೀಕ್ಷಿತ ಸಂಜು ವೆಡ್ಸ್ ಗೀತಾ-2 ಸಿನಿಮಾಗೆ ಕಿಚ್ಚ ಸುದೀಪ್​ ಸಾಥ್ ನೀಡಿದ್ದಾರೆ. ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ಅವರು ನಿರ್ಮಾಣದ ಬಹು ನಿರೀಕ್ಷಿತ ಸಂಜು ವೆಡ್ಸ್ ಗೀತಾ-2 ಜನವರಿ 10ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ. ಶಿಡ್ಲಘಟ್ಟದ ರೇಷ್ಮೆ ಬೆಳೆಗಾರರ ವಿಷಯವನ್ನಿಟ್ಟುಕೊಂಡು ನವಿರಾದ ಪ್ರೇಮಕಥೆಯನ್ನು ನಿರ್ದೇಶಕ ನಾಗಶೇಖರ್ ಅವರು ಈ ಚಿತ್ರದಲ್ಲಿ ಹೇಳಿದ್ದಾರೆ. 

ಆನಂದ ಆಡಿಯೋ ಮೂಲಕ ರಿಲೀಸಾಗಿರುವ ಸಂಜು ವೆಡ್ಸ್ ಗೀತಾ-2 ಹಾಡುಗಳು ಕೇಳುಗರ ಮನ ಗೆದ್ದಿವೆ. ಇದೀಗ ಈ ಚಿತ್ರದ ಮತ್ತೊಂದು ಹಾಡನ್ನು ಕಿಚ್ಚ ಸುದೀಪ್ ಬಿಡುಗಡೆಗೊಳಿಸಿ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಹಾಡನ್ನು ರಿಲೀಸ್ ಮಾಡಿ ಮಾತನಾಡಿದ ಕಿಚ್ಚ ಸುದೀಪ್ ಅವರು​, ಶ್ರೀನಗರ ಕಿಟ್ಟಿ ಹಾಗೂ ನಾಗಶೇಖರ್ ಸೇರಿ ಈ ಸಿನಿಮಾ ಮಾಡಿದ್ದಾರೆ. ಹಿಂದೆ ಸಂಜು ವೆಡ್ಸ್ ಗೀತಾ ಸಕ್ಸಸ್ ಆಗಿತ್ತು. ಕವಿರಾಜ್ ಬರೆದ ಮಳೆಯಂತೇ ಈ ಹಾಡು ತುಂಬಾ ಚೆನ್ನಾಗಿ ಬಂದಿದೆ. ಹಾಡನ್ನು ರಿಲೀಸ್ ಮಾಡೋದಕ್ಕೆ ತುಂಬಾ ಖುಷಿಯಾಗ್ತಿದೆ ಎಂದು ಸಿನಿಮಾ ತಂಡಕ್ಕೆ ಶುಭ ಹಾರೈಸಿದ್ದಾರೆ. 

ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ನಾಗಶೇಖರ್, ರೇಷ್ಮೆ ಬೆಳೆಗಾರರ ಕುರಿತ ಗಹನವಾದ ವಿಚಾರ ಇಟ್ಟುಕೊಂಡು ಈ ಚಿತ್ರ ಮಾಡಿದ್ದೇನೆ. ಇದರ ಜತೆಗೊಂದು ಲವ್ ಸ್ಟೋರಿಯೂ ಸಾಗುತ್ತದೆ, ಈ ಚಿತ್ರದ ಎಳೆಯನ್ನು ಕಿಚ್ಚ ಸುದೀಪ್ ಅವರು ಮಾಣಿಕ್ಯ ಶೂಟಿಂಗ್ ಟೈಂನಲ್ಲಿ ನನಗೆ ಕೊಟ್ಟಿದ್ದರು. ಇಂಥ ಕಥೆಗಳನ್ನು ನೀನು ಚೆನ್ನಾಗಿ ಹ್ಯಾಂಡಲ್ ಮಾಡ್ತೀಯ ಅಂತ ನನಗೆ ಒಪ್ಪಿಸಿದ್ದರು. ಸಂಜು ವೆಡ್ಸ್ ಗೀತಾ-2 ಕಥೆಯ ಕ್ರೆಡಿಟ್ ಸುದೀಪ್ ಅವರಿಗೇ ಸಲ್ಲುತ್ತದೆ. ಇಂದು ನಮ್ಮ ಚಿತ್ರದ ಮೆಲೋಡಿ ಹಾಡನ್ನು ರಿಲೀಸ್ ಮಾಡುವ ಮೂಲಕ ನಮಗೆ ಮತ್ತೊಮ್ಮೆ ಹರಸಿದ್ದಾರೆ. ಶಿಡ್ಲಘಟ್ಟದಲ್ಲಿ ಪ್ರಾರಂಭವಾಗುವ ಕಥೆ ಸ್ವಿಟ್ಜರ್‌ಲ್ಯಾಂಡ್‌ವರೆಗೂ ಹೋಗುತ್ತದೆ, ಚಿತ್ರದಲ್ಲಿ ರೇಷ್ಮೆ ಬೆಳೆಗಾರ ಸಂಜು ಆಗಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದು, ಗೀತಾ ಪಾತ್ರದಲ್ಲಿ ರಚಿತಾರಾಮ್ ಅಭಿನಯಿಸಿದ್ದಾರೆ.

ಶಿಡ್ಲಘಟ್ಟದಲ್ಲಿ ಅತಿಹೆಚ್ಚು ರೇಷ್ಮೆ ಬೆಳೆಯುತ್ತಾರೆ, ಆದರೆ ಅದರ ಕ್ರೆಡಿಟ್ ಬೇರೊಂದು ಕಡೆ ಹೋಗುತ್ತಿದೆ. ಇದೇ ವಿಷಯವನ್ನು ಚಿತ್ರದಲ್ಲಿ ತೆಗೆದುಕೊಂಡಿದ್ದೇನೆ. ಇದು ಬೇರೆಯದೇ ಪ್ಯಾಟ್ರನ್ ಸಿನಿಮಾ, ಒಂದು ಸಿನಿಮಾಗೆ ಹಾಡುಗಳೇ ಇನ್‌ವಿಟೇಶನ್, ಈ ಹಿಂದೆ ಎರಡು ಸಾಂಗ್ ಬಿಟ್ಟಿದ್ದೆವು, ಅವುಗಳಿಗೆ ನಮ್ಮ ನಿರೀಕ್ಷೆಗೂ ಮೀರಿ ಜನ ರಿಯಾಕ್ಟ್ ಮಾಡಿದ್ದಾರೆ. ಈ ಹಾಡನ್ನು ಗಗನವೇ ಬಾಗಿ ಹಾಡಿದ್ದ ಶ್ರೇಯಾ ಘೋಷಾಲ್ ಕೈಲಿ ಹಾಡಿಸಬೇಕೆಂದಿತ್ತು, ಇತ್ತೀಚೆಗೆ ಅವರು ಕನ್ನಡದಲ್ಲಿ ಹಾಡಲ್ಲ ಎಂದು ಗೊತ್ತಾಗಿ ಅಚ್ಚ ಕನ್ನಡದ ಪ್ರತಿಭೆ ಸಂಗೀತಾ ರವೀಂದ್ರನಾಥ್ ಕೈಲಿ ಹಾಡಿಸಿದೆವು,
ಅದ್ಭುತವಾಗಿ ಬಂತು, ಅವರಿಂದಲೇ ಮತ್ತೆರಡು ಹಾಡುಗಳನ್ನು ಹಾಡಿಸಿದ್ದೇವೆ, ಜತೆಗೆ ನಂದಿತಾ ಕೂಡ ಹಾಡಿದ್ದಾರೆ, ಸ್ವಿಟ್ಜರ್‌ಲ್ಯಾಂಡ್‌ನಲ್ಲಿ 10 ಸುಂದರ ಲೊಕೇಶನ್‌ಗಳನ್ನು ಗುರ್ತಿಸಿ ಶೂಟ್ ಮಾಡಿದ್ದೇವೆ. ನಿರ್ಮಾಪಕರು ಯಾವುದಕ್ಕೂ ಬೇಡ ಎನ್ನದೆ ಒಂದೊಳ್ಳೆ ಚಿತ್ರವನ್ನು ಕನ್ನಡಿಗರಿಗೆ ನೀಡಬೇಕೆಂಬ ಉದ್ದೇಶದಿಂದ ಪ್ರೀತಿಯಿಂದ ಖರ್ಚು ಮಾಡಿದ್ದಾರೆ ಎಂದ್ರು.

ನಿರ್ಮಾಪಕ ಛಲವಾದಿ ಕುಮಾರ್ ಮಾತನಾಡುತ್ತ, ಸಿನಿಮಾ ನಿರ್ದೇಶಕರಿದ್ದಾಗ ನಾವು ಮಾತನಾಡಲು ಅವಕಾಶ ಇರಲ್ಲ, ಈ ಹಿಂದೆ ನಾನೊಂದು ಸಿನಿಮಾ ಮಾಡಿದ್ದೆ, ಕಾರಣಾಂತರಗಳಿಂದ ಅದು ರಿಲೀಸಾಗಲಿಲ್ಲ, ಇದು ನನ್ನ ನಿರ್ಮಾಣದ 2ನೇ ಚಿತ್ರ, ಈ ಮೊದಲು ನಾನೇ ಕಥೆಯನ್ನು ರೆಡಿ ಮಾಡಿಕೊಂಡಿದ್ದೆ, ನಂತರ ನಾಗಶೇಖರ ಬಂದು ಹೇಳಿದ ಈ ಸ್ಟೋರಿ ತುಂಬಾ ಇಷ್ಟವಾಯಿತು, ಎಲ್ಲರೂ ಸೇರಿ ಚಿತ್ರವನ್ನು ಪ್ರಾರಂಭಿಸಿದೆವು, ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಶೂಟ್ ಮಾಡಿದ್ದು, ಒಂದು ಟ್ರಿಪ್ ಹೋಗಿಬಂದ ಹಾಗಾಯ್ತು, ಇದು ಅಪ್ಪಟ ಪ್ಯಾಮಿಲಿ ಲವ್ ಸ್ಟೋರಿ. ನವಿರಾದ ಪ್ರೇಮದ ಜತೆ ರೈತರ ಬಗ್ಗೆಯೂ ಹೇಳಿದ್ದಾರೆ. ಅಣ್ಣಾವ್ರ ಬಂಗಾರದ ಮನುಷ್ಯ ಚಿತ್ರವನ್ನು ನೆನಪಿಸುತ್ತದೆ. ಕ್ಯಾಮರಾ ಮ್ಯಾನ್ ಸತ್ಯ ಹೆಗಡೆ, ಸಂಗೀತ ನಿರ್ದೇಶಕ ಶ್ರೀಧರ ವಿ. ಸಂಭ್ರಮ್ ಎಲ್ಲರೂ ಸಪೋರ್ಟ್ ಮಾಡಿದ್ದರಿಂದ ಚಿತ್ರ ತುಂಬಾ ಚೆನ್ನಾಗಿ ಬಂದಿದೆ. ಮೊನ್ನೆಯಷ್ಟೇ ಸೆನ್ಸಾರ್​ ಆಯಿತು, ಒಂಚೂರೂ ಕಟ್ ಹೇಳದೆ ಯು ಸರ್ಟಿಫಿಕೇಟ್​ ಕೊಟ್ಟಿದ್ದಾರೆ ಎಂದ್ರು.

ನಾಯಕ ನಟ ಶ್ರೀನಗರ ಕಿಟ್ಟಿ ಮಾತನಾಡುತ್ತ, ಈ ಚಿತ್ರದಲ್ಲಿ ಪ್ರತಿ ಹಾಡಿಗೂ ಅದರದೇ ಆದ ಪ್ರಾಮುಖ್ಯತೆ ಇದೆ. 2025ರ ಮೊದಲ ಸಿನಿಮಾವಾಗಿ ನಾವು ಬರ್ತಿದ್ದೇವೆ.ಒಂದು ಲವ್ ಸ್ಟೋರಿ, ಅದರೊಂದಿಗೆ ಮುಖ್ಯವಾದ ವಿಷಯ ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಶ್ರೀಧರ್ ಬಹು ಸುಂದರವಾದ ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ಒಬ್ಬ ರೇಷ್ಮೆ ಬೆಳೆಗಾರನಾಗಿ ನಾನು ಕಾಣಿಸಿಕೊಂಡಿದ್ದೇನೆ ಎಂದರು. ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಮಾತನಾಡಿ, ಒಂದೊಂದು ಹಾಡು ಒಂದು ಪ್ಯಾಟ್ರನ್​ನಲ್ಲಿದೆ. ಹೊಸ ಸಿಂಗರ್ಸ್ ಪರಿಚಯಿಸಿದ್ದೇವೆ. ತುಂಬಾ ಚೆನ್ನಾಗಿ ಹಾಡಿದ್ದಾರೆ. ಇದರ ಎಲ್ಲಾ ಕ್ರೆಡಿಟ್ ನಾಗಶೇಖರ್ ಅವರಿಗೆ ಸಲ್ಲುತ್ತದೆ ಎಂದರು. ಪಿಆರ್ ಓ ನಾಗೇಂದ್ರ ಮಾತನಾಡಿ, ನಾಗಶೇಖರ್ ಮೊದಲಿಂದಲೂ ಸದಭಿರುಚಿಯ ಸಿನಿಮಾ ಮಾಡಿಕೊಂಡು ಬಂದವರು. ಇಡೀ ಚಿತ್ರ ಒಂದು ಪೇಂಟಿಂಗ್ ಥರ ಇದೆ. ನೋಡುತ್ತಲೇ ಚಿತ್ರ ಮುಗಿದೇ ಹೋಯ್ತಾ ಅನಿಸುತ್ತೆ. ಇಂಥ ಚಿತ್ರಕ್ಕೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ ನಿರ್ಮಾಪಕರಿಗೆ ಧನ್ಯವಾದ ಎಂದರು.


ವಿಶೇಷವಾಗಿ ಚಿತ್ರದಲ್ಲಿ ನಟ ಚೇತನ್ ಚಂದ್ರ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ರಾಗಿಣಿ ದ್ವಿವೇದಿ ಅವರ ಡ್ಯಾನ್ಸ್ ನಂಬರ್ ಸಾಂಗ್ ಈಗಾಗಲೇ ವೈರಲ್ ಆಗಿದೆ. ಸತ್ಯ ಹೆಗಡೆ ಅವರ ಛಾಯಾಗ್ರಹಣ, ಶ್ರೀಧರ್ ವಿ. ಸಂಭ್ರಮ್ ಅವರ ಸಂಗೀತ ನಿರ್ದೇಶನ, ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ, ರಂಗಾಯಣ ರಘು, ಸಾಧು ಕೋಕಿಲ, ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್ ಅಲ್ಲದೆ ಖಳನಟ ಸಂಪತ್‌ಕುಮಾರ್ ಹೆಸರಾಂತ ಕಲಾವಿದರೇ ಚಿತ್ರದಲ್ಲಿ ಅಭಿನಯಿಸಿದ್ದಾರೆ.

 

ಇದನ್ನೂ ಓದಿ : ‘ಕರಾವಳಿ’ ಟೀಸರ್ ಅಬ್ಬರ – ‘ಪ್ರತಿಷ್ಠೆಯ ಪಿಶಾಚಿ’ಗೆ ಫ್ಯಾನ್ಸ್ ಫಿದಾ!

Leave a Comment

DG Ad

RELATED LATEST NEWS

Top Headlines

“ಫಾರೆಸ್ಟ್”ಚಿತ್ರದ “ಪೈಸಾ ಪೈಸಾ ಪೈಸಾ” ಹಾಡಿಗೆ ಫ್ಯಾನ್ಸ್ ಫಿದಾ – ಅಡ್ವೆಂಚರ್ಸ್ ಕಾಮಿಡಿಯ ಸಿನಿಮಾ ಜನವರಿ 24ಕ್ಕೆ ರಿಲೀಸ್!

ಬೆಂಗಳೂರು : ಆರಂಭದಿಂದಲೂ ಕುತೂಹಲ ಮೂಡಿಸಿರುವ ಅಡ್ವೆಂಚರ್ಸ್ ಕಾಮಿಡಿ ಕಥಾಹಂದರ ಒಳಗೊಂಡಿರುವ ಮಲ್ಟಿ ಸ್ಟಾರರ್ ಸಿನಿಮಾ “ಫಾರೆಸ್ಟ್” ಚಿತ್ರದ “ಪೈಸಾ ಪೈಸಾ ಪೈಸಾ” ಹಾಡು ಇತ್ತೀಚೆಗೆ ಬಿಡುಗಡೆಯಾಗಿ 5

Live Cricket

Add Your Heading Text Here