ಅಮೆರಿಕ : ಡೆಮಾಕ್ರಟಿಕ್ ನಾಯಕ, ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ತಮ್ಮ 100ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಜಿಮ್ಮಿ ಕಾರ್ಟರ್, ಜಾರ್ಜಿಯಾದ ಪ್ಲೇನ್ಸ್‌ನಲ್ಲಿರುವ ಅವರ ಸ್ವಗ್ರಹದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ಸ್ಪಷ್ಟಪಡಿಸಿವೆ.
ಜಿಮ್ಮಿ ಕಾರ್ಟರ್ ನಿಧನಕ್ಕೆ ಜಾಗತಿಕ ನಾಯಕರು ಕಂಬನಿ ಮಿಡಿದಿದ್ದು, ಮಾನವ ಹಕ್ಕುಗಳ ಕುರಿತಾದ ಜಿಮ್ಮಿ ಕಾರ್ಟರ್ ಬದ್ಧತೆ ನಮಗೆಲ್ಲರಿಗೂ ಮಾದರಿ ಎಂದು ಹೇಳಿದ್ದಾರೆ. ಕಾರ್ಟರ್ ಅಮೆರಿಕದ ಇತಿಹಾಸದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಅಧ್ಯಕ್ಷರಾಗಿದ್ದರು. ಮಾನವೀಯ ಕೆಲಸಕ್ಕಾಗಿ 2002ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದಿದ್ದ ಕಾರ್ಟರ್, ಇಸ್ರೇಲ್ ಮತ್ತು ಈಜಿಪ್ಟ್ ಮಧ್ಯಸ್ಥಿತಿಕೆ ನಡೆಸಿ ಶಾಂತಿ ಮಾತುಕತೆ ನಡೆಸಿದ ಕೀರ್ತಿಗೆ ಪಾತ್ರರಾಗಿದ್ದರು.
1977ರಿಂದ 1981 ರವರೆಗೆ 39ನೇ ಅಮೆರಿಕದ ಅಧ್ಯಕ್ಷರಾಗಿ ಜಿಮ್ಮಿ ಕಾರ್ಟರ್ ಸೇವೆ ಸಲ್ಲಿಸಿದ್ದರು. 1980ರ ಚುನಾವಣೆಯಲ್ಲಿ ನಟ, ರಾಜಕಾರಣಿ ರೊನಾಲ್ಡ್ ರೇಗನ್ ಅವರ ವಿರುದ್ಧ ಸೋತಿದ್ದರು. ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಮೂರನೇ ಅಧ್ಯಕ್ಷ ಕಾರ್ಟರ್.. ಇವರ ಗೌರವಾರ್ಥವಾಗಿ ಹರಿಯಾಣದ ಗ್ರಾಮಕ್ಕೆ ಕಾರ್ಟರ್‌ಪುರಿ ಎಂದು ಹೆಸರಿಡಲಾಗಿತ್ತು. ಜಾಕ್, ಚಿಪ್, ಜೆಫ್, ಆ್ಯಮಿ ಎಂಬ ನಾಲ್ವರು ಮಕ್ಕಳನ್ನು ಅಗಲಿರುವ ಜಿಮ್ಮಿ ಅವರಿಗೆ 11 ಮಂದಿ ಮೊಮ್ಮಕ್ಕಳು, 14 ಮಂದಿ ಮರಿಮೊಮ್ಮಕ್ಕಳಿದ್ದಾರೆ.
ಇದನ್ನೂ ಓದಿ : ನಟ ದರ್ಶನ್‌ಗೆ ಬಿಗ್ ಶಾಕ್ – ಈ ವಾರವೇ ಜಾಮೀನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಲು ಖಾಕಿ ಸಿದ್ಧತೆ..!