Download Our App

Follow us

Home » ಸಿನಿಮಾ » ಬಿಗ್​ಬಾಸ್​ನಿಂದ ಐಶ್ವರ್ಯಾ ಸಿಂಧೋಗಿ ಔಟ್‌ – ನಟಿಗೆ ದೊಡ್ಮನೆಯಿಂದ ಭಾವುಕ ವಿದಾಯ..!

ಬಿಗ್​ಬಾಸ್​ನಿಂದ ಐಶ್ವರ್ಯಾ ಸಿಂಧೋಗಿ ಔಟ್‌ – ನಟಿಗೆ ದೊಡ್ಮನೆಯಿಂದ ಭಾವುಕ ವಿದಾಯ..!

ಕನ್ನಡದ ಬಿಗ್​ಬಾಸ್ ಗ್ರ್ಯಾಂಡ್​ ಫಿನಾಲೆಗೆ ಹತ್ತಿರ ಬರುತ್ತಿದೆ. ಹೀಗಾಗಿ ಟಾಪ್‌ ಐದು ಸ್ಪರ್ಧಿಗಳು ಯಾರು ಎಂದು ಊಹಿಸುವುದು ಕಷ್ಟವಾಗಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​ ಮನೆಯಿಂದ ಅಚ್ಚರಿಯ ರೀತಿಯಲ್ಲಿ ಐಶ್ವರ್ಯಾ ಸಿಂಧೋಗಿ ಆಚೆ ಬಂದಿದ್ದಾರೆ. ಹೌದು.. ನಟಿ ಐಶ್ವರ್ಯಾ ಸಿಂಧೋಗಿ ಅವರು ಬಿಗ್​ಬಾಸ್​ನಿಂದ ಎಲಿಮಿನೇಟ್ ಆಗಿದ್ದಾರೆ. 13 ವಾರಗಳ ಕಾಲ ಟಫ್ ಸ್ಪರ್ಧೆ ನೀಡಿದ್ದ ಅವರ ಆಟ ಇದೀಗ ಅಂತ್ಯವಾಗಿದೆ.

ತಂದೆ-ತಾಯಿ ಇಲ್ಲದ ಹುಡುಗಿ ಎಂಬ ಕಾರಣಕ್ಕೆ ಐಶ್ವರ್ಯಾ ಅವರು ಆಗಾಗ ಬಿಗ್​ಬಾಸ್​ನಲ್ಲಿ ಕುಗ್ಗುತ್ತಿದ್ದರು. ಅಂಥಹ ಎಲ್ಲ ಸಂದರ್ಭಗಳಲ್ಲಿ ಬಿಗ್​ಬಾಸ್ ಕಡೆಯಿಂದ ಐಶ್ವರ್ಯಾಗೆ ಪ್ರೀತಿಯ ಸಂದೇಶ ಬಂದಿತ್ತು.ನಿನ್ನೆ ಅವರು ಎಲಿಮಿನೇಟ್ ಆಗುವಾಗಲೂ ಅವರಿಗೆ ಎಮೋಷನಲ್ ಆದ ಮಾತುಗಳನ್ನು ಬಿಗ್​ಬಾಸ್ ಹೇಳದ್ದಾರೆ. ‘ಹೋಗಿ ಬಾ ಮಗಳೇ’ ಎನ್ನುವ ಮೂಲಕ ಐಶ್ವರ್ಯಾ ಅವರನ್ನು ಬಿಗ್​ಬಾಸ್ ಇನ್ನಷ್ಟು ಎಮೋಷನಲ್ ಆಗಿಸಿದ್ದಾರೆ.

ಈ ವಾರ ಡೇಂಜರ್​ ಝೋನ್​ಲ್ಲಿ ಐಶ್ವರ್ಯಾ ಮತ್ತು ಮೋಕ್ಷಿತಾ ಇದ್ದರು. ಅಂತಿಮವಾಗಿ ಐಶ್ವರ್ಯಾ ಎಮಿಲಿನೇಟ್ ಆದರು. ಬಿಗ್ ಬಾಸ್ ಮನೆಯಿಂದ ಹೊರಗೆ ಬರುವುದಕ್ಕೂ ಮುನ್ನ ಐಶ್ವರ್ಯಾಗೆ ಒಂದು ಪತ್ರ ಬಂತು. ಆ ಪತ್ರ ಓದುತ್ತಿದ್ದಂತೆಯೇ ಅವರು ಕಣ್ಣೀರು ಹಾಕಲು ಆರಂಭಿಸಿದರು. ‘ಪತ್ರದ ಮೂಲಕ ಸುಂದರವಾಗಿ ವಿದಾಯ ಹೇಳಿದ್ದಕ್ಕೆ ಧನ್ಯವಾದಗಳು. ಅಂದು ವಾಯ್ಸ್​ ನೋಟ್​ ಕಳಿಸಿದ್ರಿ. ನಾನು ಮುದುಕಿ ಆದರೂ ಇವರೆಲ್ಲ ನನ್ನ ಕುಟುಂಬದವರಾಗಿ ಇರುತ್ತಾರೆ. 13 ವಾರ ನಾನು ಘಟಾನುಘಟಿಗಳ ಜೊತೆಗೆ ಇದ್ದು ಫೈಟ್ ಮಾಡಿದ್ದೇನೆ ಎಂಬುದಕ್ಕೆ ನನಗೆ ಹೆಮ್ಮೆ ಇದೆ. ಲವ್ ಯೂ ಬಿಗ್ ಬಾಸ್​. ಮೋಕ್ಷಿತಾ ಚೆನ್ನಾಗಿ ಆಡು. ನಿನ್ನನ್ನು ನಾನು ಫೈನಲ್​ನಲ್ಲಿ ನೋಡಬೇಕು’ ಎಂದು ಹೇಳುವ ಮೂಲಕ ಐಶ್ವರ್ಯಾ ಎಲ್ಲರಿಗೂ ವಿದಾಯ ಹೇಳಿದರು.

ಇದನ್ನೂ ಓದಿ : UI ಸಕ್ಸಸ್ ಬೆನ್ನಲ್ಲೇ ನಟ ಉಪೇಂದ್ರ ಟೆಂಪಲ್ ರನ್.. ಶಿವಣ್ಣನ ಆರೋಗ್ಯದ ಬಗ್ಗೆ ರಿಯಲ್ ಸ್ಟಾರ್ ಹೇಳಿದ್ದೇನು?

Leave a Comment

DG Ad

RELATED LATEST NEWS

Top Headlines

“ಫಾರೆಸ್ಟ್”ಚಿತ್ರದ “ಪೈಸಾ ಪೈಸಾ ಪೈಸಾ” ಹಾಡಿಗೆ ಫ್ಯಾನ್ಸ್ ಫಿದಾ – ಅಡ್ವೆಂಚರ್ಸ್ ಕಾಮಿಡಿಯ ಸಿನಿಮಾ ಜನವರಿ 24ಕ್ಕೆ ರಿಲೀಸ್!

ಬೆಂಗಳೂರು : ಆರಂಭದಿಂದಲೂ ಕುತೂಹಲ ಮೂಡಿಸಿರುವ ಅಡ್ವೆಂಚರ್ಸ್ ಕಾಮಿಡಿ ಕಥಾಹಂದರ ಒಳಗೊಂಡಿರುವ ಮಲ್ಟಿ ಸ್ಟಾರರ್ ಸಿನಿಮಾ “ಫಾರೆಸ್ಟ್” ಚಿತ್ರದ “ಪೈಸಾ ಪೈಸಾ ಪೈಸಾ” ಹಾಡು ಇತ್ತೀಚೆಗೆ ಬಿಡುಗಡೆಯಾಗಿ 5

Live Cricket

Add Your Heading Text Here