ಮಂಡ್ಯ : ಲಾರಿ ಡ್ರೈವರ್ ಯಡವಟ್ಟಿನಿಂದ ಗಾರ್ಮೆಂಟ್ ಬಸ್ ಅಪಘಾತವಾಗಿರುವ ಘಟನೆ ಜಿಲ್ಲೆಯ ಮದ್ದೂರಿನಲ್ಲಿ ನಡೆದಿದೆ. ತಿರುವು ಪಡೆಯುತ್ತಿದ್ದ ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಗಾರ್ಮೆಂಟ್ ಬಸ್ ಪಕ್ಕದ ರಸ್ತೆಗೆ ಹಾರಿ ಅಂಗಡಿಗೆ ಡಿಕ್ಕಿಯಾಗಿದೆ. CCTV ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.
ಮದ್ದೂರಿನ ಸೋಮನಹಳ್ಳಿ ಬಳಿ ಮೈಸೂರು-ಬೆಂಗಳೂರು ಹಳೆ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ಬಸ್ನಲ್ಲಿದ್ದ 25 ಮಹಿಳೆಯರಿಗೆ ಗಾಯಗಳಾಗಿವೆ. ಬಸ್ನ ಅತಿವೇಗವೂ ಅಪಘಾತಕ್ಕೆ ಕಾರಣ ಎನ್ನಲಾಗ್ತಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಮದ್ದೂರು ಠಾಣೆ ಪೊಲೀಸರು ಕೇಸ್ ದಾಖಲು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ – ಬಿ.ವೈ ವಿಜಯೇಂದ್ರ..!
Post Views: 494