ಕೋಲಾರ : 8ಕ್ಕೂ ಹೆಚ್ಚು ಅಂಗಡಿ-ಮುಂಗಟ್ಟು, ಮೆಡಿಕಲ್ ಶಾಪ್, ಮಾರ್ಟ್‌ಗಳಲ್ಲಿ ಸರಣಿ ಕಳ್ಳತನ ಮಾಡಿ ಕಳ್ಳರು ಪರಾರಿಯಾಗಿರುವ ಘಟನೆ ಕೋಲಾರ ನಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಕೋಲಾರ ನಗರದ ಡೂಂ ಲೈಟ್ ವೃತ್ತ, ಪಿ.ಸಿ ಬಡಾವಣೆ ಮುಖ್ಯರಸ್ತೆಯಲ್ಲಿರುವ ಮಳಿಗೆಗಳಿಗೆ ಲಗ್ಗೆ ಇಟ್ಟ ಕಳ್ಳರು, ನಗದು, ದಿನಸಿ ಸಾಮಗ್ರಿ ದೋಚಿ ಪರಾರಿಯಾಗಿದ್ದಾರೆ. ಕಳವು ಮಾಡಿರುವ ಕಳ್ಳರ ಕೈ ಚಳಕ ಅಂಗಡಿಗಳಲ್ಲಿ ಅಳವಡಿಸಿದ್ದ ಸಿಸಿ ಟಿವಿಗಳಲ್ಲಿ ಸೆರೆಯಾಗಿದೆ.
ಇನ್ನು ಸ್ಥಳಕ್ಕೆ ಕೋಲಾರ ನಗರ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಬೆರಳಚ್ಚು ತಂಡ ಹಾಗೂ ಶ್ವಾನ ದಳ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸುತ್ತಿದ್ದು, ಕಳ್ಳರ ಹುಟುಕಾಟಕ್ಕೆ ಮುಂದಾಗಿದ್ದಾರೆ. ಘಟನೆಯ ಸಂಬಂಧ ಕೋಲಾರ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನ ಆದಷ್ಟು ಬೇಗ ಪತ್ತೆಹಚ್ಚುವ ಮೂಲಕ ಕೋಲಾರ ನಗರ ಜನರ ಆತಂಕವನ್ನ ದೂರ ಮಾಡಬೇಕು ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ : ‘ಆತಂಕ ಇದ್ದೇ ಇರುತ್ತದೆ’ : ಚಿಕಿತ್ಸೆಗಾಗಿ ಅಮೆರಿಕಾಗೆ ಹೋಗೋ ಮುನ್ನ ಶಿವಣ್ಣ ಭಾವುಕ ಮಾತು..!