ಮಾಜಿ ಪತಿ 2ನೇ ಮದುವೆ ಬಗ್ಗೆ ನಟಿ ಸಮಂತಾ ಶಾಕಿಂಗ್​ ರಿಯಾಕ್ಷನ್!

ನಟಿ ಸಮಂತಾ ಈಗೀಗ ಸಿನಿಮಾಗಿಂತ ಹೆಚ್ಚು ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇದೀಗ ನಿರ್ಮಾಪಕ ರಾಜ್ ನಿಡಿಮೋರು ಜೊತೆಗಿನ ಡೇಟಿಂಗ್ ವದಂತಿ ನಡುವೆ ಮಾಜಿ ಪತಿ ನಾಗಚೈತನ್ಯ 2ನೇ ಮದುವೆ ಬಗ್ಗೆ ಶಾಕಿಂಗ್ ರಿಯಾಕ್ಷನ್ ಕೊಟ್ಟಿದ್ದಾರೆ.

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಸಮಂತಾಗೆ ಮಾಜಿ ಪತಿಯ 2ನೇ ಮದುವೆ ಬಗ್ಗೆ ಪ್ರಶ್ನೆ ಎದುರಾಗಿದೆ. ಮಾಜಿ ಪತಿಯ ಹೊಸ ಜೀವನದ ಬಗ್ಗೆ ನಿಮಗೆ ಅಸೂಯೆ ಇದೆಯೇ? ಎಂದು ಕೇಳಲಾಗಿದೆ.

ಈ ಕುರಿತು ಮಾತನಾಡಿದ ನಟಿ, ಅಸೂಯೆಗೆ ನನ್ನ ಜೀವನದಲ್ಲಿ ಜಾಗವಿಲ್ಲ. ಅದು ನನ್ನ ಜೀವನದ ಭಾಗವಾಗುವುದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಎಲ್ಲಾ ಕೆಟ್ಟ ವಿಷಯಗಳಿಗೆ ಅಸೂಯೆಯೇ ಕಾರಣ ಎಂದು ನಾನು ನಂಬುತ್ತೇನೆ.

ಅಸೂಯೆ ಎಲ್ಲ ಕೆಟ್ಟದ್ದಕ್ಕೂ ಮೂಲ ಎಂದು ನಾನು ಭಾವಿಸುತ್ತೇನೆ. ಉಳಿದಂತೆ ಎಲ್ಲವೂ ಉತ್ತಮವಾಗಿದೆ. ಆದರೆ, ಅಸೂಯೆಗಿಂತ ಅನಾರೋಗ್ಯಕರ ವಿಚಾರಗಳಿಗೆ ಸ್ಥಳವಿಲ್ಲ ಎಂದು ಸಮಂತಾ ಹೇಳಿದ್ದಾರೆ.

ಹಲವು ವರ್ಷಗಳ ಡೇಟಿಂಗ್ ಬಳಿಕ 2017ರಲ್ಲಿ ಸಮಂತಾ ಹಾಗೂ ನಾಗಚೈತನ್ಯ ಮದುವೆಯಾಗಿದ್ದರು. ಆದರೆ ಕೆಲ ಮನಸ್ತಾಪಗಳಿಂದ ಅವರು 2021ರಲ್ಲಿ ಡಿವೋರ್ಸ್ ಘೋಷಿಸಿದರು. ಬಳಿಕ ಕಳೆದ ವರ್ಷ ಡಿ.4ರಂದು ಶೋಭಿತಾ ಜೊತೆ ನಾಗಚೈತನ್ಯ 2ನೇ ಮದುವೆಯಾದರು.

ಇದನ್ನೂ ಓದಿ : http://ದೇಶಾದ್ಯಂತ ಜಾತಿ ಗಣತಿ ಸಂಘರ್ಷ ಬೆನ್ನಲ್ಲೇ ‘ಕೈ’ ದಿಟ್ಟ ಹೆಜ್ಜೆ – ತೆಲಂಗಾಣದಲ್ಲಿ ಜಾತಿ ಗಣತಿ ವರದಿ ಮಂಡನೆ!

Btv Kannada
Author: Btv Kannada

Leave a Comment

Read More