ನಕಲಿ ದಾಖಲೆಗಳನ್ನು ಸೃಷ್ಟಿಸಿ ನೂರು ಕೋಟಿ ಲೂಟಿ ಹೊಡೆದಿದ್ದ ಉತ್ತರ ವಿಭಾಗದ AEE ಜಯರಾಮ್​ . ಬಿಡಿಎನಲ್ಲಿ ನಡೆಯುತ್ತಿದೆ 38d ಮಾಫಿಯಾ. 38d ಅಂದರೆ ರೆವಿನ್ಯೂ ಸೈಟ್​​ಗಳನ್ನು ಕಳೆದುಕೊಂಡವರಿಗೆ ಅವರು ಸತತ 10 ವರ್ಷ ವಾದಿಸುತ್ತಿದ್ದರೆ ಅದೇ ಜಾಗದಲ್ಲಿ ಅಥವಾ ಪಕ್ಕದಲ್ಲಿ ಮತ್ತೊಂದು ಬಿಡಿಎ ಪರ್ಯಾಯ ಜಾಗ ನೀಡುವುದು. ಆದರೆ ರೆವೆನ್ಯೂ ಸೈಟ್ ಇಲ್ಲದಿದ್ದರೂ ನಕಲಿ ದಾಖಲೆ ಸೃಷ್ಟಿಸಿ ಜಯರಾಮ್​ ಒಂದು ಗ್ಯಾಂಗನ್ನು ಕಟ್ಟಿಕೊಂಡು ಸುಮಾರು ಐವತ್ತಕ್ಕೂ ಹೆಚ್ಚು ರೆವೆನ್ಯೂ ಸೈಟ್ ದಾಖಲೆ ಸೃಷ್ಟಿಸಿ 100 ಕೋಟಿ ಬೆಲೆಬಾಳುವ ಬಿಡಿಎ ಸೈಟ್​​​ಗಳನ್ನು ಕಳೆದ ಮೂರು ವರ್ಷಗಳಲ್ಲಿ ಲೂಟಿ ಹೊಡೆದಿದ್ದಾರೆ ಎಂದು ಅಧಿಕಾರಿಗಳು ವರದಿ ಕೊಟ್ಟಿದ್ದರು.

ಈ ವರದಿ ಹಿನ್ನೆಲೆಯಲ್ಲಿ ಕಮಿಷನರ್ ಮೇಜರ್ ಮಣಿವಣ್ಣನ್​​ ತನಿಖೆಗೆ ಆದೇಶ ಮಾಡಿದ್ದು, ಯಾವುದೇ ಕ್ಷಣ ಇಂಜಿನಿಯರ್ ಜಯರಾಮ್ ವಿರುದ್ಧ ಎಫ್ಐಆರ್​ ಆಗಿ ಅರೆಸ್ಟ್ ಆಗುವ ಸಾಧ್ಯತೆ ಇದೆ..

Btv Kannada
Author: Btv Kannada

Leave a Comment

Read More