ಬೆಂಗಳೂರು : ಡಿಕೆಶಿ ಸ್ಕೀಮ್ ಎಲ್ಲಾ ಕಡೆ ಗುದ್ದಲಿ ಪೂಜೆ ಮಾಡಿ ಹೋಗೋದಷ್ಟೇ, ಬಿಡದಿ ಸಾಕ್ಷಿ ಗುಡ್ಡೆ, ಕಸದ ಸಾಕ್ಷಿ ಗುಡ್ಡೆ ಬಿಟ್ಟು ಹೋಗೋದು ಅಷ್ಟೇ. ಕೋವಿಡ್ ಟೈಮ್ನಲ್ಲಿ ಮೇಕೆದಾಟು ಪಾದಯಾತ್ರೆ ಮಾಡಿದ್ದೇ ಮಾಡಿದ್ದು, ನಮ್ಮ ಸರ್ಕಾರ ಬಂದರೆ ಮೇಕೆದಾಟುಗೆ ಕಲ್ಲು ಹಾಕ್ತೀವಿ ಅಂತಾ. ಅವರು ಅಲ್ಲಿ ಕಲ್ಲು ಹಾಕಿಲ್ಲ, ನಮ್ಮ ಮೇಲೆ ಎಲ್ಲಾ ಕಲ್ಲು ಹಾಕಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಆರ್ ಅಶೋಕ್ ಬಿಡದಿಯ ಲೇಔಟ್ ಬಗ್ಗೆ ಮಾತನಾಡಿ, ಬಿಡದಿಯ ಲೇಔಟ್ ಯಾರಿಗೆ ಲಾಭ ಬರುತ್ತದೆ? ಬಿಡದಿಯಲ್ಲಿ ಗೋವುಗಳು, ಮನುಷ್ಯರಿಗೆ ತೊಂದರೆ ಆಗುತ್ತಿದೆ. ಬಿಡದಿಯ ಸಾವಿರಾರು ರೈತರು ಬೀದಿಗೆ ಬಂದಿದ್ದಾರೆ, ಮೋದಿ ಅಂದರೆ ಮಾತಾಡೋ ರಾಹುಲ್ ಗಾಂಧಿ, ಕರ್ನಾಟಕದಲ್ಲಿ ನಿಮ್ಮದೇ ಕಾಂಗ್ರೆಸ್ ಸರ್ಕಾರ ಮಾಡ್ತಿರುವ ಅನ್ಯಾಯದ ಬಗ್ಗೆ ಮಾತಾಡ್ತಿಲ್ಲ. ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಮುಂದುವರಿಯುತ್ತದೆ, ಟೆಂಡರ್ ಕರೆದು ಪ್ರಾಜೆಕ್ಟ್ ಮುಗಿಸೋದು ಯಾವಾಗ? ಎಂದು ಪ್ರಶ್ನಿಸಿದ್ದಾರೆ.
ನೀವು ಶುರು ಮಾಡಿ ಅವರಿಂದ ಕಮಿಷನ್ ತಗೊಂಡು ಹೋಗೋದಷ್ಟೇ, ನಾವು ಬಿಜೆಪಿಯವರು ಬಂದು ಅದನ್ನು ಮಾಡಲ್ಲ. ಆದರೆ ಟೆಂಡರ್ ಕರೆದಾಗ ಕಮಿಷನ್ ಕೊಟ್ಟ ಕಥೆ ಏನಾಗಬೇಡ, ನೀವು ಮುಂದೆ ಅಧಿಕಾರಕ್ಕೆ ಬರೋದೇ ಇಲ್ಲವಲ್ಲ. ಡಿಕೆ ಶಿವಕುಮಾರ್ಗೆ ಇರೋವರೆಗೂ ಒಳ್ಳೇದು ಮಾಡಬೇಕು ಅನ್ನೋದೇ ಗೊತ್ತಿಲ್ಲ, ಒಳಿತು ಮಾಡೋ ಮನುಷ ಶಿವಕುಮಾರ್ ನೀನು ಇರೋದೇ ಇನ್ನೂ ಒಂದೂವರೆ ವರ್ಷ ಎಂದು ಟಾಂಗ್ ಕೊಟ್ಟಿದ್ದಾರೆ.
ಇನ್ನು, ಬಿಡದಿ ಮೊದಲ ಹೋರಾಟದಲ್ಲಿ ನಾನು ಬೆಂಬಲ ಕೊಟ್ಟಿದ್ದೆ, ಬಿಡದಿ ಟೌನ್ ಶಿಪ್ ಮಾಡ್ತಿರೋದು ಡ್ರಾಪ್ ಆಗಿರುವುದು. ಪದೇ ಪದೇ ಕ್ಲೈಮ್ ಮಾಡ್ತಾರೆ ಇದನ್ನು ಕುಮಾರಸ್ವಾಮಿ ಮಾಡಿದ್ದು ಅಂತ, ಈವರೆಗೆ 5-6 ಜನ ಸಿಎಂ ಬಿಡದಿ ಪ್ರಾಜೆಕ್ಟ್ ಬೇಡ ಅಂತ ಬಿಟ್ಟಿದ್ದಾರೆ. ಇದರ ಬಗ್ಗೆ ಯಡಿಯೂರಪ್ಪನವರು ಕೇಳಿದ್ರು ಮಾಡಬೇಕಾ ಇದನ್ನ ಅಂಥ, ಆಗ ನಾವು ಹೇಳಿದ್ವಿ ಜನ ವಿರೋಧ ಮಾಡ್ತಿದ್ದಾರೆ ಅಂತ. ಆಗ ಅದನ್ನ ಯಡಿಯೂರಪ್ಪ ಕೈ ಬಿಟ್ಟಿದ್ರು. ಈಗ ಡಿಕೆ ಶಿವಕುಮಾರ್ ಕುಮಾರಸ್ವಾಮಿ ಬಿಟ್ಟಿದ್ದನ್ನ ನಾವು ಮುಂದುವರೆಸುತ್ತಿದ್ದೇವೆ ಅಂತಿದ್ದಾರೆ, ಅಂದ್ರೆ ಕುಮಾರಸ್ವಾಮಿ ಹೇಳಿದ್ದನ್ನ ಕಾಂಗ್ರೆಸ್ ಎಲ್ಲವನ್ನೂ ಪಾಲಿಸುತ್ತಾ? ಎಂದು ಆರ್ ಅಶೋಕ್ ವಾಗ್ದಾಳಿ ಕೇಳಿದ್ದಾರೆ.
ಡಿಕೆಶಿ ಸಿಎಂ ಆಗಿರೋದ್ರಿಂದ ನನಗೆ ವೈಯಕ್ತಿಕವಾಗಿ ಲಾಭನೂ ಇಲ್ಲ ನಷ್ಟನೂ ಇಲ್ಲ, ಅವರು ಸಿಎಂ ಸ್ಥಾನದಿಂದ ಇಳಿದರೂ ನನಗೆ ಲಾಭವೂ ಇಲ್ಲ ನಷ್ಟವೂ ಇಲ್ಲ. ಅವರು ಕಾಂಗ್ರೆಸ್ ನಾನು ಬಿಜೆಪಿ, ನಾನು ಸತ್ರೂ ಕಾಂಗ್ರೆಸ್ಗೆ ಹೋಗಲ್ಲ. ಅವರನ್ನು ಇಳಿಸೋದು ಮುಂದುವರೆಸೋದು ಅವರ ಪಕ್ಷದ ತೀರ್ಮಾನ ಎಂದಿದ್ದಾರೆ.
ಇದನ್ನೂ ಓದಿ : ಕೇರಳದಲ್ಲಿ ಉಚಿತ ಬಸ್ ಪ್ರಯಾಣದ ‘ಪ್ರಿಯದರ್ಶಿನಿ’ ಯೋಜನೆಗೆ ಚಾಲನೆ!








