ನವದೆಹಲಿ : ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದ ಬೆನ್ನಲ್ಲೇ ಜಾಗತಿಕ ಕಚ್ಚಾ ತೈಲ ಬೆಲೆ ಗಣನೀಯವಾಗಿ ಕುಸಿತ ಕಂಡಿದೆ. ಯುದ್ಧ ವಿರಾಮದ ಘೋಷಣೆ ಮತ್ತು ಉಭಯ ದೇಶಗಳ ನಡುವೆ ಒಪ್ಪಂದದ ನಿರೀಕ್ಷೆಯಿಂದಾಗಿ ಬ್ರೆಂಟ್ ಕ್ರೂಡ್ ಬೆಲೆ ಒಂದೇ ದಿನದಲ್ಲಿ ಶೇಕಡಾ 4ರಷ್ಟು ಕುಸಿತ ಕಂಡು 80 ಡಾಲರ್‌ಗೆ ಬಂದಿಳಿದಿದೆ.
ಈ ಹಿಂದೆ ಯುದ್ಧದ ಭೀತಿಯಿಂದಾಗಿ ಕಚ್ಚಾ ತೈಲ ಬೆಲೆ ಗಗನಕ್ಕೇರಿ, ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಹಾಗೂ ಅಡುಗೆ ಅನಿಲದ ಬೆಲೆಯೂ ಏರಿಕೆಯಾಗಿ ಜನಸಾಮಾನ್ಯರು ಆತಂಕದಲ್ಲಿದ್ದರು. ಇದೀಗ ಹಾರ್ಮುಝ್ ಜಲಸಂಧಿ ಮುಕ್ತವಾಗಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದು, ಹಡಗುಗಳ ಸಂಚಾರ ಸುಗಮವಾಗಲಿದೆ.
ಇದೀಗ ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ 3.5% ಕ್ಕಿಂತ ಹೆಚ್ಚು ಕುಸಿದು 83.48 ಡಾಲರ್‌ಗೆ ತಲುಪಿದೆ. ಈ ನಡುವೆ ಅಮೆರಿಕದ ಕಚ್ಚಾ ತೈಲ, WTI (ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್) ಸುಮಾರು ಶೇ. 5 ರಷ್ಟು ಕುಸಿದು ಪ್ರತಿ ಬ್ಯಾರೆಲ್‌ಗೆ 80.61 ಡಾಲರ್‌ಗೆ ತಲುಪಿದೆ.
ಇದನ್ನೂ ಓದಿ : ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ, ಆತಂಕಬೇಡ – ಸಿಎಂ ಡಿ.ಕೆ ಶಿವಕುಮಾರ್!









