ಬೆಂಗಳೂರು ಪೊಲೀಸರು ಜೈಪುರದಲ್ಲಿ ಟ್ರ್ಯಾಪ್ – ಲಂಚ ಪಡೆಯುವಾಗ ರೆಡ್ ಹ್ಯಾಂಡ್‌ ಆಗಿ ಅರೆಸ್ಟ್!

ಬೆಂಗಳೂರು : ವರದಕ್ಷಿಣೆ ಕೇಸ್​ವೊಂದರ ಆರೋಪಿಯ ಬಂಧನಕ್ಕೆ ತೆರಳಿದ್ದ ಬೆಂಗಳೂರಿನ ಪೊಲೀಸರು ಜೈಪುರದಲ್ಲಿ ಟ್ರ್ಯಾಪ್ ಆಗಿರುವ ಘಟನೆ ನಡೆದಿದೆ. HAL ಪೊಲೀಸರು ಆರೋಪಿ ಬಳಿ ಹಣಕ್ಕೆ ಬೇಡಿಕ್ಕೆ ಇಟ್ಟಿದ್ದು, ಹಣ ಪಡೆಯುವಾಗ ಬೆಂಗಳೂರು ಪೊಲೀಸರು ಜೈಪುರ ಎಸಿಬಿ ಅಧಿಕಾರಿಗಳಿಗೆ ಲಾಕ್ ಆಗಿದ್ದಾರೆ.

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅನಿತಾ, ಹೆಡ್ ಕಾನ್ಸ್ಟೇಬಲ್ ಉಳುವಪ್ಪ, ಕಾನ್ಸ್ಟೇಬಲ್ ಯತೀಶ್ ಟ್ರ್ಯಾಪ್ ಆದ ಪೊಲೀಸರು.

ಕಳೆದ ಶುಕ್ರವಾರ ಪೊಲೀಸರು ಆರೋಪಿ ಬಂಧನಕ್ಕೆ ತೆರಳಿದ್ದರು. ಈ ವೇಳೆ HAL ಪೊಲೀಸರು ಆರೋಪಿಯ ಬಳಿ ಎರಡು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು, 40 ಸಾವಿರ ಹಣ ಪಡೆಯುವಾಗ ಜೈಪುರ ಎಸಿಬಿ ಅಧಿಕಾರಿಗಳಿಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ.

ಜೈಪುರ ಎಸಿಬಿ ವಿಭಾಗದ ಎಎಸ್‌ಪಿ ಭೂಪೇಂದ್ರ ಚೌದರಿ ಅವರ ನೇತೃತ್ವದಲ್ಲಿ ಈ ಯಶಸ್ವಿ ಟ್ರ್ಯಾಪ್ ಕಾರ್ಯಾಚರಣೆ ನಡೆದಿದೆ. ಸದ್ಯ ಎಸಿಬಿ ಅಧಿಕಾರಿಗಳು ಮೂವರೂ ಬೆಂಗಳೂರು ಪೊಲೀಸರನ್ನು ಬಂಧಿಸಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ : ಒಕ್ಕಲಿಗರ ಸಂಘದ ಕರ್ಮಕಾಂಡದ ಬಗ್ಗೆ ಭುಗಿಲೆದ್ದ ಆಕ್ರೋಶ – ಕ್ರಮಕ್ಕೆ ಒತ್ತಾಯಿಸಿ ಹಲವು ಮುಖಂಡರ ಪತ್ರ!

Btv Kannada
Author: Btv Kannada

Leave a Comment

Read More