ಪೋಕ್ಸೋ ಕೇಸ್ – ವಚನಾನಂದ ಸ್ವಾಮೀಜಿ ವಿರುದ್ಧ 410 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ!

ದಾವಣಗೆರೆ : ಪೋಕ್ಸೊ ಪ್ರಕರಣದಲ್ಲಿ ವಚನಾನಂದ ಸ್ವಾಮೀಜಿ ವಿರುದ್ಧ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು 410 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದಾರೆ. ವಚನಾನಂದ ಸ್ವಾಮೀಜಿ ಹಾಗೂ ಅವರ ಆಪ್ತ ಅಶೋಕ್ ವಿರುದ್ಧ 410 ಪುಟಗಳ ವಿವರವಾದ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ.

ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್​ನಲ್ಲಿ 63 ಸಾಕ್ಷ್ಯಾಧಾರ, ಒಟ್ಟು ನಾಲ್ವರು ಸಂತ್ರಸ್ತ ಬಾಲಕರು, ಸಂತ್ರಸ್ತ ಬಾಲಕನ ತಾಯಿಯ ಹೇಳಿಕೆ, 2022 ರಿಂದ 2025ರವರೆಗೆ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ, ಶಾಲೆಗೆ ಹೋಗುವ ಮುನ್ನ ಮತ್ತು ಬಂದ ನಂತರ ಲೈಂಗಿಕ ದೌರ್ಜನ್ಯ, ಬೆತ್ತಲಾಗಿ ತಲೆಯಿಂದ ಪಾದದವರೆಗೆ ಬಾಲಕರಿಂದ ಎಣ್ಣೆ ಮಸಾಜ್ ಮಾಡಿಸಿಕೊಂಡಿರುವುದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಬಾಲಕರ ಮೇಲೆ ಹಲ್ಲೆ ಮಾಡಿರುವುದಾಗಿ ಉಲ್ಲೇಖಿಸಲಾಗಿದೆ.

2022 ರಿಂದ 2025ರವರೆಗೆ ಮುಂಗಡವಾಗಿ ಹಾಗೂ ನಿರಂತರವಾಗಿ ಈ ದೌರ್ಜನ್ಯ ನಡೆದಿದೆ ಎಂದು ಹೇಳಲಾಗಿದೆ. ಶಾಲೆಗೆ ಹೋಗುವ ಮುನ್ನ ಮತ್ತು ಶಾಲೆಯಿಂದ ಬಂದ ನಂತರ, ಬಾಲಕರನ್ನು ತನ್ನ ಬಳಿ ಕರೆಸಿ ಲೈಂಗಿಕ ಕಿರುಕುಳ ನೀಡುತ್ತಿದ್ದರೆಂದು ಆರೋಪಿಸಲಾಗಿದೆ. 

ಈ ಎಲ್ಲಾ ಆರೋಪಗಳ ಹಿನ್ನೆಲೆ, ವಚನಾನಂದ ಶ್ರೀ ವಿರುದ್ಧದ ಪ್ರಕರಣವನ್ನು ಪೊಲೀಸರು ಹೈಪ್ರೋಫೈಲ್ ಕೇಸ್ ಎಂದು ಪರಿಗಣಿಸಿದ್ದಾರೆ. 

ಇದನ್ನೂ ಓದಿ : ಕಾಡುಗೋಡಿ ಮಗು ಕೊಲೆ ಕೇಸ್‌ – ಸರಿಯಾಗಿ ತನಿಖೆ ನಡೆಸದ ಮೂವರು ಪೊಲೀಸರು ಸಸ್ಪೆಂಡ್!

Btv Kannada
Author: Btv Kannada

Leave a Comment

Read More